Friday, August 12, 2022

Latest Posts

ಹುಟ್ಟು ಹಬ್ಬಕ್ಕೆ ಶುಭ ಕೋರಿದವರಲ್ಲಿ ಮೋದಿ ಕೇಳಿದ್ದಾರೆ 5 ಉಡುಗೊರೆ: ಉಡುಗೊರೆ ಏನು ಗೊತ್ತಾ?

ನವದೆಹಲಿ: ನಿನ್ನೆ ಪ್ರಧಾನಿ ನರೇಂದ್ರ ಮೋದಿಯವರ ತಮ್ಮ 70ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ದೇಶ ವಿದೇಶದಿಂದ ಶುಭಾಶಗಳ ಮಹಾಪೂರವೇ ಹರಿದು ಬಂದಿತ್ತು. ಈ ಬಗ್ಗೆ ಮೋದಿಯವರು ಟ್ವೀಟ್ ಮಾಡಿದ್ದಾರೆ.

ನಿನ್ನೆ ತಡ ರಾತ್ರಿ ಮೋದಿಯವರು ಟ್ವೀಟ್ ಮಾಡಿದ್ದು, ನನ್ನ ಹುಟ್ಟುಹಬ್ಬಕ್ಕೆ ಏನು ಬೇಕು ಎಂದು ಹಲವರು ಕೇಳಿದ್ದಾರೆ. ಅವರಲ್ಲಿ ನಾನು ಕೇಳಿಕೊಳ್ಳುವುದಿಷ್ಟೆ ಎಂದು ೫ ಉಡುಗೊರೆಯನ್ನು ಕೊಡುವಂತೆ ಕೇಳಿದ್ದಾರೆ. ಅವುಗಳು ಯಾವವೆಂದರೆ
೧. ಮಾಸ್ಕ್‌ನ್ನು ಯಾವಾಗಲು ಧರಿಸಿ ಮತ್ತು ಸರಿಯಾಗಿ ಧರಿಸಿ.
೨. ಒಬ್ಬರಿಗೊಬ್ಬರು ೨ ಗಜ ಅಂತರ ಕಾಪಾಡಿಕೊಳ್ಳಿ.
೩. ಜನಸಂದಣಿ ಜಾಗಗಳಿಂದ ದೂರವಿರಿ.
೪. ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ
೫. ನಮ್ಮ ಜಗತ್ತನ್ನು ಆರೋಗ್ಯ ಪೂರ್ಣಗೊಳಿಸೋಣ ಎಂಬ ಈ 5 ಉಡುಗೊರೆಯನ್ನು ಮೋದಿ ಕೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss