Thursday, August 11, 2022

Latest Posts

ಹುಟ್ಟು ಹಬ್ಬದ ದಿನ ಗೋವಾ ಬೀಚ್’ನಲ್ಲಿ ನಗ್ನವಾಗಿ ಓಡಿದ್ದ ನಟ ಮಿಲಿಂದ್ ಸೋಮನ್ ವಿರುದ್ಧ ಕೇಸ್

ಹೊಸದಿಗಂತ ಆನ್ ಲೈನ್ ಡೆಸ್ಕ್:

ಗೋವಾ ಬೀಚ್ ನಲ್ಲಿ ಬರ್ಥ್’ಡೇ ದಿನ ನಗ್ನವಾಗಿ ಓಡಿದ್ದ ನಟ, ಮಾಡೆಲ್ ಮಿಲಿಂದ್ ಸೋಮನ್ ಅವರ ಎಫ್‌ಐಆರ್ ದಾಖಲಾಗಿದೆ.

ಗೋವಾ ರಾಜ್ಯದ ಕಾಣಕೋಣದ ಸರ್ಕಾರಿ ಸ್ಥಳದಲ್ಲಿ ಅನುಮತಿ ಇಲ್ಲದೇ ಆಶ್ಲೀಲ ವಿಡಿಯೋ ಚಿತ್ರೀಕರಣ ಮಾಡಿದ ಆರೋಪದ ಮೇಲೆ ನಟಿ, ಮಾಡೆಲ್ ಪೂನಂ ಪಾಂಡೆಯನ್ನು ಗೋವಾ ಪೊಲೀಸರು ಬಂಧಿಸಿದ್ದ ಪ್ರಕರಣ ಟ್ವಿಟ್ಟರ್‌ನಲ್ಲಿ ಚರ್ಚೆಗೆ ಕಾರಣವಾಗಿದೆ.

ಏಕೆಂದರೆ ಮಾಡೆಲ್ ಮಿಲಿಂದ್ ಸೋಮನ್ ಹುಟ್ಟುಹಬ್ಬದಂದು ಗೋವಾ ಬೀಚ್‌ನಲ್ಲಿ ಪೂರ್ಣ ನಗ್ನರಾಗಿ ಓಡಿದ್ದರೂ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮತ್ತು ಅರೆನಗ್ನ ಸ್ಥಿತಿಯಲ್ಲಿದ್ದ ಪೂನಂರನ್ನು ಪೊಲೀಸರು ಏಕೆ ಬಂಧಿಸಿದ್ದಾರೆಂದು ಟ್ವಿಟ್ಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ.

ಜಾಲತಾಣಗಳಲ್ಲೂ ಮಿಲಿಂದ್ ಸೋಮನ್ ಫೋಟೋ ಹಂಚಿಕೊಂಡರು ಆದರೆ, ಅವರು ಫಿಟ್ನೆಸ್ ಸಂದೇಶ ನೀಡಿದ್ದಾರೆ ಎಂದು ಹೊಗಳಿದ ಜನ ಪೂನಂ ಪಾಂಡೆ ವಿರುದ್ಧವೇಕೆ ಮಾತನಾಡುತ್ತಿದ್ದಾರೆ. ಪುರುಷರಿಗೊಂದು, ಮಹಿಳೆಯರಿಗೊಂದು ನ್ಯಾಯ ಏಕೆ ಎಂದು ಹಲವರು ಟ್ವಿಟರ್ ನಲ್ಲಿ ಪ್ರಶ್ನೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಮಿಲಿಂದ್ ಸೋಮನ್ ವಿರುದ್ಧ ಪ್ರಕರಣ ದಾಖಲಾಗಿದೆ.

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss