Sunday, July 3, 2022

Latest Posts

ಹುಟ್ಟೂರಿನಲ್ಲಿ ದಿ. ಜಾರ್ಜ್ ಫೆರ್ನಾಂಡಿಸ್ ಚಿತಾಭಸ್ಮದ ಸ್ಮಾರಕ ಲೋಕಾರ್ಪಣೆ

ಮಂಗಳೂರು: ನಗರದ ಬಿಜೈ ಚರ್ಚ್ ಆವರಣದಲ್ಲಿ ಭಾನುವಾರ ಬೆಳಗ್ಗೆ ಕೇಂದ್ರದ ಮಾಜಿ ಸಚಿವ ಜಾರ್ಜ್ ಫೆರ್ನಾಂಡಿಸ್ ಅವರ ಚಿತಾಭಸ್ಮದ ಸ್ಮಾರಕ ಲೋಕಾರ್ಪಣೆಗೊಂಡಿದೆ.
ಜಾರ್ಜ್ ಫೆರ್ನಾಂಡಿಸ್ ಅವರ ಕುಟುಂಬಸ್ಥರ ಸಮ್ಮುಖದಲ್ಲಿ ಮಂಗಳೂರು ಬಿಷಪ್ ರೆ. ಡಾ. ಪೀಟರ್ ಪಾವ್ಲ್ ಸಾಲ್ಡಾನ ಅವರು ಸ್ಮಾರಕ ಲೋಕಾರ್ಪಣೆಗೊಳಿಸಿದರು.
2019ರ ಜನವರಿ 29ರಂದು 88ನೇ ವಯಸ್ಸಿನಲ್ಲಿ ಜಾರ್ಜ್ ಫೆರ್ನಾಂಡಿಸ್ ನಿಧನರಾಗಿದ್ದರು. ದೆಹಲಿಯಲ್ಲಿ ಅವರ ಅಂತಿಮ ವಿಧಿಗಳನ್ನು ನೆರವೇರಿಸಿದ ಬಳಿಕ ಅವರ ಚಿತಾಭಸ್ಮವನ್ನು ತಂದು ಬಿಜೈ ಚರ್ಚ್‌ನಲ್ಲಿ ಇರಿಸಲಾಗಿದ್ದು, ಈಗ ಚರ್ಚ್ ವತಿಯಿಂದ ಅದಕ್ಕೆ ಸ್ಮಾರಕ ನಿರ್ಮಿಸಲಾಗಿದೆ.
ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿ ಸೋಜ, ಮಾಜಿ ಶಾಸಕ ಜೆ.ಆರ್.ಲೋಬೋ, ಚರ್ಚ್ ಪಾಲನಾ ಮಂಡಳಿಯ ಅಧ್ಯಕ್ಷ ವಿನ್ಸೆಂಟ್ ಡಿಸೋಜ, ಬಿಜೈ ಚರ್ಚ್‌ನ ಪ್ರಧಾನ ಧರ್ಮಗುರು ವಿಲ್ಸನ್ ವೈಟಸ್ ಡಿಸೋಜ, ಸಹಾಯಕ ಧರ್ಮಗುರು ಪ್ರಮೋದ್ ಕ್ರಾಸ್ತಾ, ಪಾಲನಾ ಮಡಳಿ ಉಪಾಧ್ಯಕ್ಷ ಫ್ರಾನ್ಸಿಸ್ ಅಶೋಕ್ ಪಿಂಟೊ, ಕಾರ್ಯದರ್ಶಿ ಪ್ರೀತಿ ಗೋಮ್ಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss