Tuesday, August 16, 2022

Latest Posts

ಹುಡುಗರಲ್ಲಿ ಸ್ನೇಹಿತರ‍್ಯಾರು ನಿಮ್ಮನ್ನು ಇಷ್ಟಪಡುವವರ‍್ಯಾರು ಕಂಡುಹಿಡಿಯಲು ಆಗುತ್ತಿಲ್ಲವಾ? ಹುಡುಗರು ನಿಮ್ಮನ್ನು ಇಷ್ಪಪಟ್ಟಾಗ ಈ ರೀತಿ ವರ್ತಿಸುತ್ತಾರಂತೆ..

ಹುಡುಗಿಯರು ಯಾರನ್ನಾದರೂ ಇಷ್ಟಪಟ್ಟರೆ ಅವರ ಹಾವ ಭಾವಗಳಿಂದ ಈಸಿಯಾಗಿ ಕಂಡುಹಿಡಿಯಬಹುದು. ಆದರೆ ಹುಡುಗರು ಹಾಗಲ್ಲ. ಅವರ ಹಾವಭಾವಗಳನ್ನು ಗುರುತಿಸುವುದು ಕಷ್ಟ. ಅಲ್ಲದೇ ಸ್ನೇಹಿತರಿಗೂ ನಿಮ್ಮನ್ನು ಇಷ್ಟ ಪಡುವ ಹುಡುಗರಿಗೂ ವ್ಯತ್ಯಾಸವೇ ಕಾಣುವುದಿಲ್ಲ. ಸಣ್ಣ ವ್ಯತ್ಯಾಸ ಎಲ್ಲದರಲ್ಲೂ ಇದ್ದೇ ಇರುತ್ತದೆ. ಹುಡುಗ ನಿಮ್ಮನ್ನು ಇಷ್ಟಪಡುತ್ತಾನೆ ಎಂದು ತಿಳಿದುಕೊಳ್ಳಬೇಕಾದರೆ ಈ ಲಕ್ಷಣಗಳು ಕಾಣುತ್ತಿದೆಯಾ ಚೆಕ್ ಮಾಡಿ..

  • ಹೊಗಳುತ್ತಿದ್ದಾರಾ?: ಅವರು ನಿಮ್ಮನ್ನು ಹೊಗಳುತ್ತಿದ್ದಾರಾ? ಸ್ನೇಹಿತರು ಹೊಗಳುವುದಕ್ಕೂ ಇವರು ಹೊಗಳುವುದಕ್ಕೂ ವ್ಯತ್ಯಾಸ ಇದೆ. ಚನಾಗಿ ಕಾಣ್ತಿದಿಯಾ ಅಂದಷ್ಟೇ ಸ್ನೇಹಿತರು ಹೇಳುತ್ತಾರೆ. ಆದರೆ ಇವರು ನಿಮ್ಮ ನೇಲ್‌ಪಾಲಿಶ್ ಕೂಡ ಅಬ್ಸರ‍್ವ್ ಮಾಡಿರುತ್ತಾರೆ. ನಿಮ್ಮನ್ನು ಅಡಿಯಿಂದ ಮುಡಿವರೆಗೆ ನೋಡಿರುತ್ತಾರೆ.
  • ನಿಮ್ಮನ್ನು ಮುಟ್ಟುತ್ತಾರೆ: ಹುಡುಗರೆಲ್ಲರೂ ಒಂದೇ ರೀತಿ ಮುಚ್ಚುವುದಿಲ್ಲ. ಸ್ನೇಹಿತರು ಮುಟ್ಟಿದಾಗ ನಿಮಗೆ ಏನೂ ಅನಿಸುವುದಿಲ್ಲ. ಮಾಮೂಲಿ ಅನಿಸುತ್ತದೆ. ಆದರೆ ಇವರು ಆಗಾಗ ಮುಟ್ಟುತ್ತಾರೆ. ಇವರ ಸ್ಪರ್ಶ ಸ್ವಲ್ಪ ಭಿನ್ನ ಎಂದು ನಿಮಗೂ ಅನಿಸುತ್ತದೆ. ಆಗಾಗ ಮುಟ್ಟಿ ಮಾತನಾಡಿಸುವುದು, ತಮಾಷೆಗೆ ಹೊಡೆಯುವುದು, ಕೂದಲು ಸರಿ ಮಾಡಲು ಬರುವುದು ಹೀಗೆಲ್ಲಾ ಮಾಡುತ್ತಾರೆ.
  • ನೀವು ಮಾಡಿದಂತೆ ಮಾಡುವುದು: ನಿಮ್ಮ ಆಕ್ಷನ್‌ಗಳನ್ನು ಅವರು ಕಾಪಿ ಮಾಡುತ್ತಾರೆ. ನೀವು ಕೈ ಆಕ್ಷನ್ ಮಾಡಿ ಮಾತನಾಡಿದರೆ ಅದನ್ನೇ ಮಾಡುವುದು, ನಿಮ್ಮನ್ನು ನಗಿಸುವುದು, ನೀವು ಬಳಸುವ ಪದಗಳನ್ನು ಬಳಸುವುದು ಹೀಗೆ ಮಾಡುತ್ತಾರೆ. ಇದರಿಂದಲೂ ನೀವು ಪತ್ತೆ ಮಾಡಬಹುದು.
  • ನಿಮ್ಮ ಬಗ್ಗೆ ಕಾಳಜಿ: ನೀವು ಅವರಿಗೆ ಇನ್ನೂ ಸ್ನೇಹಿತರೇ ಇರಬಹುದು. ಆದರೆ ಅವರು ನಿಮ್ಮ ಬಗ್ಗೆ ಅತಿ ಹೆಚ್ಚು ಕಾಳಜಿ ಹೊಂದಿರುತ್ತಾರೆ. ಸ್ನೇಹಿತರ ಗುಂಪಿನಲ್ಲಿ ಇದ್ದರೆ ನೀವು ಬರುವವರೆಗೂ ಕಾಯುತ್ತಾರೆ. ಎಲ್ಲಿದ್ದೀಯಾ ಎಂದು ಕೇಳುತ್ತಾರೆ. ಮನೆಗೆ ತಲುಪಿಸುತ್ತಾರೆ ಹೀಗೆ ಜಾಸ್ತಿ ಕಾಳಜಿ ಮಾಡುತ್ತಾರೆ.
  • ಅವರ ಮುಖದ ಹಾವಭಾವಕ್ಕೆ ಗಮನಕೊಡಿ: ಯಾವಾಗಲೂ ಒಂದು ಹುಡುಗಿ ಇಷ್ಟ ಆದರೆ ಅವರ ಜೊತೆ ಮಾತನಾಡುವಾಗ ಹುಡುಗರು ಆಗಾಗ ನಾಲಿಗೆಯಿಂದ ತುಟಿ ಸವರಿಕೊಳ್ಳುತ್ತಾರೆ, ಹೆಚ್ಚು ಎನರ್ಜಿಟಿಕ್ ಆಗಿರುತ್ತಾರೆ. ಕಣ್ಣು ದೊಡ್ಡಗೆ ಬಿಡುತ್ತಾರೆ, ಯಾವಾಗಲೂ ನಗುತ್ತಾರೆ. ಮುಖದಲ್ಲಿ ಹೆಚ್ಚು ಎಕ್ಸ್‌ಪ್ರೆಶನ್ ತೋರಿಸುತ್ತಾರೆ.
  • ನಿಮ್ಮ ವಿಷಯದಲ್ಲಿ ಮೂಗು ತೂರಿಸುತ್ತಾರೆ: ನಿಮ್ಮ ಎಲ್ಲ ವಿಷಯಗಳ ಬಗ್ಗೆ ಅವರಿಗೆ ಮಾಹಿತಿ ಬೇಕು. ನಿಮ್ಮ ಮನೆಯ ವಿಷಯ,ಸ್ನೇಹಿತರ ವಿಷಯ ಎಲ್ಲ ವಿಷಯಗಳ ಬಗ್ಗೆ ಕ್ಯೂರಿಯಸ್ ಆಗಿ ಇರುತ್ತಾರೆ. ತುಂಬಾ ಪ್ರಶ್ನೆಗಳನ್ನು ಕೇಳುತ್ತಾರೆ. ಅದಕ್ಕೆ ಉತ್ತರ ಪಡೆಯುತ್ತಾರೆ. ನಿಮಗೆ ಕಂಫರ್ಟಬಲ್ ಆಗುವ ರೀತಿ ಆಗುವ ವಿಷಯ ಮಾತನಾಡುತ್ತಾರೆ.
  • ನರ್ವಸ್ ಆಗುತ್ತಾರೆ: ಸಾವಿರ ಹುಡುಗಿಯರ ಜೊತೆ ಆರಾಮಾಗಿ ಮಾತನಾಡುತ್ತಾರೆ. ಆದರೆ ನಿಮ್ಮ ಜೊತೆ ಮಾತ್ರ ಮಾತೇ ಬರುವುದಿಲ್ಲ. ಸಂಕೋಚ, ನಾಚಿಕೆ ಭಯ ಕೂಡ ಇರುತ್ತದೆ. ಕಡಿಮೆ ಮಾತಾಡುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss