ಹುಡುಗಿಯರು ಹೆಚ್ಚಾಗಿ ಏನಾದರೂ ಮಾತನಾಡುತ್ತಲೇ ಇರುತ್ತಾರೆ. ಆದರೆ ಅವರಿಗೆ ಫಿಲ್ಟರ್ ಇರುತ್ತದೆ. ಹುಡುಗರು ಹೆಚ್ಚು ತಲೆ ಕೆಡಿಸಿಕೊಳ್ಳೋದಿಲ್ಲ. ಫಿಲ್ಟರ್ ಕೂಡ ಇಡೋದಿಲ್ಲ. ಅನಿಸಿದ್ದನ್ನು ಮಾತನಾಡ್ತಾರೆ. ತಪ್ಪಾದರೆ ತಿದ್ದಿಕೊಳ್ತಾರೆ. ಆದರೆ ಕೆಲವೊಂದು ವಿಷಯಗಳನ್ನು ನಿಮ್ಮ ಗರ್ಲ್ಫ್ರೆಂಡ್ ಅಥವಾ ಹೆಂಡತಿ ಹತ್ತಿರ ಹೇಳದಿದ್ರೇನೇ ಒಳ್ಳೆಯದು. ಯಾವ ವಿಷಯಗಳು ನೋಡಿ..
- ಅವರು ಭಾವುಕ ಜೀವಿ ಇರಬಹುದು. ಆದರೆ ಅದನ್ನು ಹೇಳಬೇಡಿ. ನೀನು ತುಂಬಾ ಭಾವನಾತ್ಮಕ ಜೀವಿ, ಎಲ್ಲಾದಕ್ಕೂ ಅಳುತ್ತೀಯಾ, ಓವರ್ ಆಕ್ಟಿಂಗ್ ಮಾಡುತ್ತೀಯ. ಇಂಥ ಮಾತುಗಳು ಬೇಡ.
- ದಾರಿಯಲ್ಲಿ ಯಾರಾದರೂ ಹುಡುಗಿ ಹೋಗುವಾಗ ಅಥವಾ ಇನ್ಸ್ಟಾಗ್ರಾಂನಲ್ಲಿ ಯಾವುದಾದರೂ ಹುಡುಗಿಯನ್ನು ನೊಡಿ. ಇವಳು ಚೆನ್ನಾಗಿದ್ದಾಳೆ, ಹಾಟ್, ಬ್ಯೂಟಿಫುಲ್ ಎಂದೆಲ್ಲಾ ಹೇಳಬೇಡಿ. ಇದು ಅವರಿಗೆ ಇಷ್ಟ ಆಗುವುದಿಲ್ಲ.
- ಇನ್ನು ನನ್ನ ಎಕ್ಸ್ ಎನ್ನುವ ಸೆಂಟೆನ್ಸ್ ಶುರು ಕೂಡ ಮಾಡಬೇಡಿ. ನನ್ನ ಎಕ್ಸ್ ಹಾಗಿದ್ದಳು, ಹೀಗಿದ್ದಳು. ಈ ರೀತಿ ಮಾಡುತ್ತಿದ್ದಳು ಇಂಥವುಗಳನ್ನು ಹೇಳಬೇಡಿ. ಇದು ಅವರನ್ನು ನಿಮ್ಮ ಪ್ರೆಸೆಂಟ್ನನ್ನು ಕಂಪೇರ್ ಮಾಡಿದಂತೆ ಅನಿಸುತ್ತದೆ.
- ಅವರ ದೇಹದ ಭಾಗಗಳ ಬಗ್ಗೆ ಮಾತು ಬೇಡ. ನಿನ್ನ ಕೈ ಬೆರಳು ಚಿಕ್ಕದಾಗಿದೆ. ಕಾಲು ನೋಡಲು ಇನ್ನೂ ಚೆನ್ನಾಗಿರಬೇಕಿತ್ತು. ಕೂದಲು ಯಾಕೆ ಉದುರುತ್ತಿದೆ. ಇಂಥ ಬಾಡಿ ರಿಲೇಟೆಡ್ ಕಮೆಂಟ್ಗಳು ಬೇಡ. ಇದನ್ನು ಯಾರೂ ಇಷ್ಟ ಪಡೋದಿಲ್ಲ.
- ಸರಿಯಾದ ರೆಸ್ಪಾನ್ಸ್ ಮಾಡಿ, ಹು,ಒಕೆ,ಸರಿ,ಫೈನ್ ಇಂಥ ರಿಪ್ಲೇಗಳು ಹುಡುಗಿಯರಿಗೆ ಸಿಟ್ಟು ತರಿಸುತ್ತವೆ.
- ಮೇಕಪ್ ಹೆಚ್ಚಾಗಿದೆ, ಬಟ್ಟೆ ಚೆನ್ನಾಗಿಲ್ಲ, ಇಷ್ಟೊಂದು ಯಾಕೆ ತಿನ್ನುತ್ತೀಯ, ದಪ್ಪ ಕಾಣುತ್ತೀಯ ಇಂಥ ಮಾತುಗಳು ಬೇಡವೇ ಬೇಡ.