ಅಪ್ಪೆಹುಳಿ ಯಾರಿಗೆ ಇಷ್ಟ ಇಲ್ಲ ಹೇಳಿ. ಎಲ್ಲರಿಗೂ ಅಪ್ಪೆಹುಳಿ ಎಂದರೆ ಬಹಳ ಇಷ್ಟ. ಆದರೆ ತುಂಬಾ ಜನಕ್ಕೆ ಮಾವಿನಕಾಯಿ ಅಪ್ಪೆಹುಳಿ ಮಾತ್ರ ಗೊತ್ತಿರುತ್ತದೆ. ಹುಣಸೆಹಣ್ಣಿನಿಂದ ಅಪ್ಪೆಹುಳಿ ಮಾಡುವುದು ಹೇಗೆ ಎಂಬುದು ಗೊತ್ತಿರುವುದಿಲ್ಲ. ಹುಣಸೆಹಣ್ಣಿನಿಂದ ಅಪ್ಪೆಹುಳಿ ಮಾಡುವುದು ಹೀಗೆ…
ಬೇಕಾಗುವ ಸಾಮಗ್ರಿ :
ಹುಣಸೆಹಣ್ಣು
ಬೆಳ್ಳುಳ್ಳಿ
ಎಣ್ಣೆ
ಸಾಸಿವೆ
ಇಂಗು
ಉದ್ದಿನ ಬೇಳೆ
ಉಪ್ಪು
ಸಕ್ಕರೆ
ಕರಿಬೇವು
ಹಸಿ ಮೆಣಸು
ಮಾಡುವ ವಿಧಾನ
ಮೊದಲಿಗೆ ಒಂದು ಮುಷ್ಟಿ ಹುಣಸೆಹಣ್ಣಿಗೆ ಮೂರು ಕಪ್ ನೀರು ಹಾಕಿ ಕಿವುಚಿಕೊಳ್ಳು. ಆ ನೀರು ಹುಳಿ ಹುಳಿಯಾಗಬೇಕು. ಅಷ್ಟು ಹುಣಸೆಹಣ್ಣನ್ನು ಹಾಕಿ.
ಅದಕ್ಕೆ ಉಪ್ಪು, ಸಕ್ಕರೆ ಹಾಕಿ ಮಿಕ್ಸ್ ಮಾಡಿಕೊಳ್ಳಿ.
ಆನಂತರ ಎಣ್ಣೆಗೆ ಸಾಸಿವೆ, ಬೆಳ್ಳುಳ್ಳಿ, ಇಂಗು, ಕರಿಬೇವು, ಉದ್ದಿನಬೇಳೆ, ಹಸಿಮೆಣಸು ಹಾಕಿ ಒಗ್ಗರಣೆ ಮಾಡಿಕೊಂಡು ಹುಣಸೆಹಣ್ಣಿನ ರಸಕ್ಕೆ ಹಾಕಿ. ಹೀಗೆ ಮಾಡಿದರೆ ಹುಣಸೆಹಣ್ಣಿನ ಅಪ್ಪೆಹುಳಿ ರೆಡಿ.