Tuesday, June 28, 2022

Latest Posts

ಹುಣಸೋಡು ಸ್ಫೋಟ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಎಚ್ಚೆತ್ತುಕೊಂಡ ಗಣಿ – ಭೂವಿಜ್ಞಾನ ಇಲಾಖೆ ಅಧಿಕಾರಿಗಳು!

ಹೊಸ ದಿಗಂತ ವರದಿ, ಚಿಕ್ಕಮಗಳೂರು:

ಶಿವಮೊಗ್ಗದ ಹುಣಸೋಡು ಗ್ರಾಮದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ನಡೆದ ಭಾರೀ ಸ್ಪೋಟದ ನಂತರ ಚಿಕ್ಕಮಗಳೂರು ಜಿಲ್ಲೆಯಲ್ಲೂ
ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದು, ಸ್ಫೋಟಕಗಳನ್ನು ಬಳಸದೆ ಕೈಯಿಂದಲೇ ಕಲ್ಲುಹೊಡೆದು ತೆಗೆಯುತ್ತಿದ್ದ 10 ರಿಂದ 15 ಸಣ್ಣ ಪುಟ್ಟ ಘಟಕಗಳ ವಿರುದ್ಧ ಕ್ರಮ ಕೈಗೊಂಡಿದೆ.
ಸ್ಥಳೀಯವಾಗಿ ಉಪಯೋಗಕ್ಕೆಂದು ಇವುಗಳಲ್ಲಿ ಕಲ್ಲುಗಳನ್ನು ಒಡೆದು ತೆಗೆಯಲಾಗುತ್ತಿದ್ದು, ಯಾವುದೇ ರೀತಿಯ ಪರವಾನಗಿ ಪಡೆದಿರಲಿಲ್ಲ ಎನ್ನಲಾಗಿದೆ. ಶಿವಮೊಗ್ಗ ಘಟನೆ ನಂತರ ವ್ಯಾಪಕವಾಗಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಇವು ಬೆಳಕಿಗೆ ಬಂದಿದ್ದು, ಎಲ್ಲಿಯೂ ಸ್ಫೋಟಕಗಳನ್ನು ಬಳಸಿರುವುದು ಕಂಡು ಬಂದಿಲ್ಲ. ಈಗ ಅವುಗಳೆಲ್ಲವನ್ನೂ ಸ್ಥಗಿತಗೊಳಿಸಲಾಗಿದೆ.

4 ಲಾರಿಗಳಿಗೆ ದಂಡ
ಪರವಾನಗಿ ಪಡೆದು ಅಧಿಕೃತವಾಗಿ ನಡೆಯುತ್ತಿರುವ ಕಲ್ಲುಗಣಿಗಳಲ್ಲಿ ಪರ್ಮಿಟ್ ಇಲ್ಲದ ಲಾರಿಗಳಲ್ಲಿ ಕಲ್ಲು ಸಾಗಿಸಲಾಗುತ್ತಿದೆ ಎನ್ನುವ ದೂರುಗಳಿದ್ದ ಹಿನ್ನೆಲೆಯಲ್ಲಿ ಜಿಲ್ಲಾ ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿ ವಿಂದ್ಯ ಅವರ ನೇತೃತ್ವದಲ್ಲಿ ಪರಿಶೀಲನೆ ನಡೆಸಿದ್ದು, ತರೀಕೆರೆಯ ಗಣಿಗಾರಿಯೊಂದರಲ್ಲಿ ಈ ರೀತಿ ಪರ್ಮಿಟ್ ಇಲ್ಲದೆ ಕಲ್ಲು ಸಾಗಿಸುತ್ತಿದ್ದ 4 ಲಾರಿಗಳು ಪತ್ತೆಯಾಗಿದ್ದು, ಅವುಗಳಿಗೆ ದಂಡ ವಿಧಿಸಲಾಗಿದೆ.

ಜೆಲೆಟಿನ್ ದಾಸ್ತಾನು ಇಲ್ಲ
ಭಾರೀ ಪ್ರಮಾಣದಲ್ಲಿ ಜಿಲೆಟಿನ್ ಕಡ್ಡಿಗಳನ್ನು ದಾಸ್ತಾನು ಮಾಡಿರುವ ಪ್ರಕರಣಗಳು ಜಿಲ್ಲೆಯ ಯಾವುದೇ ಕ್ವಾರಿಗಳಲ್ಲಿ ಕಂಡುಬಂದಿಲ್ಲ ಎಂದು ಇಲಾಖೆಯ ಅಧಿಕಾರಿ ವಿಂದ್ಯ ಹೊಸದಿಗಂತಕ್ಕೆ ತಿಳಿಸಿದ್ದಾರೆ.
ಶುಕ್ರವಾರ ಸಹ ತರೀಕೆರೆ ಮತ್ತು ಕಡೂರಿನ ಕಲ್ಲುಗಣಿಗಾರಿಕೆಗಳಿಗೆ ಪೊಲೀಸರೊಂದಿಗೆ ತೆರಳಿ ಶೆಡ್‍ಗಳು ಮತ್ತು ಗಣಿಗಾರಿಕೆಗೆ ಸಂಬಂಧಿಸಿದ ಕಟ್ಟಡಗಳನ್ನು ಪರಿಶೀಲಿಸಲಾಗಿದ್ದು, ಯಾವುದೇ ರೀತಿಯ ಸ್ಫೋಟಕಗಳು ಕಂಡು ಬಂದಿಲ್ಲ ಎಂದು ತಿಳಿಸಿದ್ದಾರೆ.

ಜಿಲ್ಲೆಯಲ್ಲಿ 80 ಕಲ್ಲು ಗಣಿಗಾರಿಕೆ
ಈಲ್ಲೆಯಲ್ಲಿ ಒಟ್ಟು 80 ಅಧಿಕೃತ ಗಣಿಗಾರಿಕೆಗಳಿವೆ. ಇವುಗಳ ಪೈಕಿ 77 ಕಲ್ಲುಗಣಿಗಾರಿಕೆಗಳಾಗಿದ್ದು, ಉಳಿದ ಮೂರು ಗ್ರಾನೈಟ್ ಗಣಿಗಾರಿಕೆಗಳಾಗಿವೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss