ಹೊಸ ದಿಗಂತ ವರದಿ, ಶಿವಮೊಗ್ಗ :
ಹುಣಸೋಡು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ರಕ್ಷಣಾಧಿಕಾರಿ ಕೆ.ಎಂ.ಶಾಂತಕುಮಾರ್ ತಿಳಿಸಿದ್ದಾರೆ.
ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಮೀನು ಮಾಲೀಕರಾದ ವಿನೋಬ ನಗರದ ಶಂಕರಗೌಡ ಟಿ. ಕುಲಕರ್ಣಿ(76) ಅವಿನಾಶ್ ಕುಲಕರ್ಣಿ(43) ಹಾಗೂ ಸ್ಫೋಟಕ ಪೂರೈಸುತ್ತಿದ್ದ ಆಂಧ್ರದ ಅನಂತಪುರ ಜಿಲ್ಲೆಯ ಪಿ.ಶ್ರೀರಾಮುಲು (68) ಪಿ. ಮಂಜುನಾಥ ಸಾಯಿ(36) ಇವರನ್ನು ಮುಂಬೈನಲ್ಲಿ ಬಂಧಿಸಲಾಗಿದೆ ಎಂದರು.
ಇಲ್ಲಿಗೆ ಬಂದಿರುವ ಸ್ಫೋಟಕ ಆಂಧ್ರದಿಂದ ಬಂದಿರುವುದನ್ನು ವಿಶೇಷ ಪೊಲೀಸ್ ತಂಡ ಪತ್ತೆ ಮಾಡಿದೆ.ಪಿ. ಶ್ರೀರಾಮುಲು ಮಾಲೀಕತ್ವದ ಜಗಳೂರು ಹಾಗೂ ಆಂಧ್ರದ ರಾಯದುರ್ಗದಲ್ಲಿನ ಗೋದಾಮುಗಳನ್ನು ಸೀಜ್ ಮಾಡಲಾಗಿದೆ ಎಂದು ತಿಳಿಸಿದರು.
ಇವರು ಸ್ಫೋಟಕ ಕಾಯಿದೆ ಉಲ್ಲಂಘನೆ ಮಾಡಿರುವುದಾಗಿ ವಿಶಾಖ ಪಟ್ಟಣಂ ನ ಸ್ಫೋಟಕ ವಿಭಾಗದ ಪೊಲೀಸರು ಮಾಹಿತಿ ನೀಡಿದ್ದರು.ಇದುವರೆಗೆ ೮ ಜನರನ್ನು ಬಂಧಿಸಲಾಗಿದೆ ಎಂದು ಹೇಳಿದರು.