ಚಿಕ್ಕಮಗಳೂರು: ದೇಶದ ಜನರ ರಕ್ಷಣೆಗಾಗಿ ಹಗಲು ರಾತ್ರಿ ನಿದ್ರೆಗೆಟ್ಟು ಕರ್ತವ್ಯ ನಿರ್ವಹಿಸುತ್ತ ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಂದರ್ಭ ಹುತಾತ್ಮರಾದ ಯೋಧರಿಗೆ ನಮನ ಸಲ್ಲಿಸಬೇಕಾದುದು ಪ್ರತಿಯೊಬ್ಬ ನಾಗರೀಕನ ಕರ್ತವ್ಯ ಎಂದು ಹೆಚ್ಚುವರಿ ಪೊಲೀಸ್ ಮುಖ್ಯಾಧಿಕಾರಿ ಶೃತಿ ಹೇಳಿದರು.
ಹುತಾತ್ಮ ಪೊಲೀಸರ ಸ್ಮರಣಾರ್ಥ ನಗರದ ಆಜಾದ್ ವೃತ್ತದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಮ್ಮಿಕೊಂಡಿದ್ದ ಪೊಲೀಸ್ ವಾದ್ಯಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
ಗಡಿ ಕಾಯುತ್ತಿರುವ ಬಿಎಸ್ಎಫ್, ಆರ್ಮಿ, ಸಿಆರ್ಇಎಫ್, ಐಟಿಬಿಪಿ ಯೋಧರು ಬಹಳ ಕಷ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಾರೆ. ನಾವೆಲ್ಲ ಇಷ್ಟು ನೆಮ್ಮದಿಯಿಂದ ಕುಟುಂಬದೊಂದಿಗೆ ಸಂತೋಷವಾಗಿ ಕಾಲ ಕಳೆಯುತ್ತಿದ್ದೇವೆಂದರೆ ಅವರ ಧೈರ್ಯ ಸಾಹಸ ಕಾರಣ ಎಂದರು.
ಆ ಪ್ರದೇಶದಲ್ಲಿ ಆಕ್ಸಿಜನ್ ಪ್ರಮಾಣ ಕಡಿಮೆ ಇರುವುದರಿಂದ ಮಾಸ್ಕ್ ಹಾಕಿಕೊಂಡು ಇರಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಪ್ರತಿವರ್ಷ ಕರ್ತವ್ಯದಲ್ಲಿದ್ದಾಗ ಹುತಾತ್ಮರಾದ ಯೋಧರ ಸ್ಮರಣಾರ್ಥ ಗೌರವ ನಮನ ಸಲ್ಲಿಸುವ ಸಲುವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಪೊಲೀಸರು 24 ಗಂಟೆ ಕರ್ತವ್ಯದಲ್ಲಿರುವುದರಿಂದ ಜನ ನೆಮ್ಮದಿಯಾಗಿ ನಿದ್ರೆ ಮಾಡುತ್ತಿದ್ದೀರಿ. ಜನರು ಕನಿಕರ ತೋರಿಸಲಿ ಎಂದು ಈ ಮಾತು ಹೇಳುತ್ತಿಲ್ಲ ನಮ್ಮ ಕರ್ತವ್ಯದ ಬಗ್ಗೆ ಹೇಳುತ್ತಿದ್ದೇವೆ ಎಂದರು.
ಆರ್ಪಿಐ ಪ್ರದೀಪ್ಕುಮಾರ್ ಮಾತನಾಡಿ, ಕರೊನಾ ಹರಡದಂತೆ ತಡೆಗಟ್ಟಲು ಪ್ರತಿಯೊಬ್ಬರು ಮಾಸ್ಕ್ ಧರಿಸಿಕೊಂಡು ಓಡಾಡಬೇಕು. ಪೊಲೀಸರುಸದಾ ಜನ ಸ್ನೇಹಿಯಾಗಿರುತ್ತಾರೆ. ಅದೇರೀತಿ ನಾಗರೀಕರ ಸಹಕಾರವೂ ಅಗತ್ಯ ಎಂದರು.
ಪೊಲೀಲೀಸ್ ಬ್ಯಾಂಡ್ ತಂಡದವರು ಹುತಾತ್ಮ ಪೆÇಲೀಸರ ಗೌರವಾರ್ಥವಾಗಿ ಹಲವು ಗೀತೆಗಳನ್ನು ನುಡಿಸುವ ಮೂಲಕ ಜನರ ಗಮನ ಸೆಳೆದರು.