ಹುಬ್ಬಳ್ಳಿ: ದನ ಮೇಯಿಸಲು ಹೋದ ಬಾಲಕನಿಗೆ ಸಿಡಿಲು ಬಡಿದು ಮೃತಪಟ್ಟಿರುವ ಘಟನೆ ಇಲ್ಲಿಯ ಅಮರಗೋಳದಲ್ಲಿ ಭಾನುವಾರ ನಡೆದಿದೆ.
ಅಮರಗೋಳದ ಚಿಕ್ಕೇರಿ ಪ್ಲಾಟ್ ನ ಆಕಾಶ ಸಹದೇವಪ್ಪ ಸಾಯನ್ನವರ(14) ಮೃತಪಟ್ಟ ಬಾಲಕ. ಭಾನುವಾರ ಅಮರಗೋಳದ ಬಳಿಯ ಬಯಲು ಜಾಗೆಯಲ್ಲಿ ದನ ಮೇಯಿಸಲು ಹೋದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಈ ಬಗ್ಗೆ ಎಪಿಎಂಸಿ ನವನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.