Wednesday, August 17, 2022

Latest Posts

ಹುಬ್ಬಳ್ಳಿಯಿಂದ ಎರಡು ವಿಶೇಷ ರೈಲು ಸಂಚಾರ ಸೋಮವಾರದಿಂದ ಆರಂಭ

ಹುಬ್ಬಳ್ಳಿ : ಲಾಕ್ಡೌನ್ ಸಡಿಲಿಕೆ ನಂತರ ದೇಶದಲ್ಲಿ ಭಾರತೀಯ ರೈಲ್ವೆ ಒಟ್ಟು ೨೦೦ ರೈಲು ಓಡಿಸುತ್ತಿದ್ದು ಹುಬ್ಬಳ್ಳಿ-ಬೆಂಗಳೂರು ಹಾಗೂ ಹುಬ್ಬಳ್ಳಿ-ದೆಹಲಿ ನಡುವೆ ಎರಡು ರೈಲು ಸಂಚಾರ ಸೋಮವಾರ ಆರಂಭವಾಗಿದೆ. ಇದರಿಂದಾಗಿ ರೈಲ್ವೆ ತನ್ನ ನಿಗದಿತ ರೈಲು ಸೇವೆ ಪ್ರಾರಂಭಿಸಿದಂತಾಗಿದೆ.
ಬೆಳಗ್ಗೆ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಿಂದ ಹೊರಟಿದ್ದ ಜನ ಶತಾಬ್ದಿ ಎಕ್ಸಪ್ರೆಸ್ ರೈಲು ಮಧ್ಯಾಹ್ನ ಹುಬ್ಬಳ್ಳಿ ತಲುಪಿದ್ದು ಈ ರೈಲಿನಲ್ಲಿ ಒಟ್ಟು 103 ಪ್ರಯಾಣಿಕರು ಹುಬ್ಬಳ್ಳಿವರೆಗೆ ಪ್ರಯಾಣಿಸಿದ್ದಾರೆ.
ಹುಬ್ಬಳ್ಳಿಯಿಂದ ಮಧ್ಯಾಹ್ನ ವಾಪಸು ಬೆಂಗಳೂರು ಕೆಎಸ್ಆರ್ ನಿಲ್ದಾಣಕ್ಕೆ ಹೊರಟ ಜನಶತಾಬ್ದಿ ಎಕ್ಸಪ್ರೆಸ್ ರೈಲಿಗೆ ಹುಬ್ಬಳ್ಳಿಯಿಂದ 157 ಜನ ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆ. ಹುಬ್ಬಳ್ಳಿಯಿಂದ ದೆಹಲಿ ನಿಜಾಮುದ್ದಿನಗೆ ತೆರಳಿದ ರೈಲಿಗೆ ಒಟ್ಟು 132 ಪ್ರಯಾಣಿಕರು ತೆರಳಿದ್ದಾರೆ.
ದೆಹಲಿ ಹಾಗೂ ಬೆಂಗಳೂರಿಗೆ ತೆರಳಿದ ಪ್ರಯಾಣಿಕರಿಗೆ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಮಾಡಲಾಗಿತ್ತು. ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಹಾಗೂ ರೈಲಿನಲ್ಲಿ ಪ್ರಯಾಣದ ವೇಳೆ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ತಿಳಿಸಿ ಪ್ರಯಾಣಕ್ಕೆ ಅವಕಾಶ ಮಾಡಿಕೊಡಲಾಯಿತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!