Wednesday, August 17, 2022

Latest Posts

ಹುಬ್ಬಳ್ಳಿ| ಎರಡು ತಿಂಗಳ ನಂತರ ಹುಬ್ಬಳ್ಳಿಗೆ ಬಂದಿಳಿದ ವಿಮಾನ

ಹುಬ್ಬಳ್ಳಿ: ಕೊರೊನಾ ಸೋಂಕು ಹರಡುವ ಆತಂಕದಿಂದ ಬರೋಬ್ಬರಿ ಎರಡು ತಿಂಗಳ ಹಿಂದೆ ವಾಣಿಜ್ಯ ನಗರಿಯಿಂದ ರದ್ದಾಗಿದ್ದ ವಿಮಾನಯಾನ ಸೌಲಭ್ಯ ಸೋಮವಾರದಿಂದ ಬೆಂಗಳೂರು ಮತ್ತು ಹಿಂಡನ್ (ದೆಹಲಿ ಹೊರವಲಯದ ಸ್ಥಳ) ಎರಡೂ ಮಾರ್ಗಗಳಿಂದ ಪುನರಾರಂಭವಾಗಿದೆ.

ಬೆಂಗಳೂರಿನಿಂದ ಹುಬ್ಬಳ್ಳಿಗೆ ಮಧ್ಯಾಹ್ನ 1 ಗಂಟೆಗೆ ಆಗಮಿಸಿದ ಸ್ಟಾರ್ ಏರ್ ಸಂಸ್ಥೆಯ ವಿಮಾನ ಆಗಮಿಸಿದೆ. ರಾತ್ರಿ 7.55ಕ್ಕೆ ಹುಬ್ಬಳ್ಳಿಯಿಂದ ಹೊರಟು 8.50ಕ್ಕೆ ಬೆಂಗಳೂರು ತಲುಪಲಿದೆ. ಈ ಪ್ರಯಾಣದ ದರ 3,590ರಿಂದ ಆರಂಭವಾಗಲಿದೆ. ಮಧ್ಯಾಹ್ನ 1.30ಕ್ಕೆ ಇಲ್ಲಿಂದ ಹೊರಟ ಸ್ಟಾರ್ ಏರ್ ವಿಮಾನ 4.10 ಕ್ಕೆ ದೆಹಲಿ ತಲುಪಲಿದೆ. ದೆಹಲಿಯಿಂದ 4.45 ಕ್ಕೆ ಹೊರಟು ರಾತ್ರಿ 7.25 ಕ್ಕೆ ಹುಬ್ಬಳ್ಳಿಗೆ ಬರಲಿದೆ. ಈ ಪ್ರಯಾಣದ ದರ 5,699 ರಿಂದ ಶುರುವಾಗಲಿದೆ.

ಸ್ಟಾರ್ ಏರ್ ಸಂಸ್ಥೆ ಹುಬ್ಬಳ್ಳಿಯಿಂದ ಬೆಂಗಳೂರು, ದೆಹಲಿ, ಅಹಮದಾಬಾದ್, ಇಂದೋರ್, ಕಿಶನ್ಗಡ, ಮುಂಬೈ ಮತ್ತು ತಿರುಪತಿಗೆ ವಿಮಾನ ಸೌಲಭ್ಯ ಹೊಂದಿದೆ. ಎರಡು ತಿಂಗಳ ಬಳಿಕ ಮೊದಲ ಹಂತದಲ್ಲಿ ಎರಡು ಪ್ರದೇಶಗಳಿಗೆ ಮಾತ್ರ ಸೇವೆ ನೀಡಲು ನಿರ್ಧರಿಸಿದೆ.

ಏರ್ ಇಂಡಿಯಾ ಸಂಸ್ಥೆ ಹುಬ್ಬಳ್ಳಿಯಿಂದ ಬೆಂಗಳೂರು, ಮುಂಬೈ ಮತ್ತು ಹೈದರಾಬಾದ್ ವಿಮಾನಯಾನ ಹೊಂದಿದೆ. ಇಂಡಿಗೊ ಸಂಸ್ಥೆ ಅಹಮದಬಾದ್, ಕಣ್ಣೂರು, ಕೊಚ್ಚಿ, ಚೆನ್ನೈ, ಗೋವಾ, ಬೆಂಗಳೂರು ಮತ್ತು ಮಂಗಳೂರಿಗೆ ವಿಮಾನ ಸೌಲಭ್ಯಗಳನ್ನು ಹೊಂದಿದೆ. ಸದ್ಯಕ್ಕೆ ಈ ಎರಡೂ ಸಂಸ್ಥೆಗಳು ಹುಬ್ಬಳ್ಳಿಯಿಂದ ವಿಮಾನಯಾನ ಆರಂಭಿಸದಿರಲು ನಿರ್ಧರಿಸಿವೆ.

‘ಏರ್ ಇಂಡಿಯಾ ಹಾಗೂ ಇಂಡಿಗೊ ಸಂಸ್ಥೆಗಳ ವಿಮಾನಗಳು ಮಾರ್ಚ್ 24 ರಂದು ಕೊನೆಯ ಬಾರಿಗೆ ಹುಬ್ಬಳ್ಳಿಗೆ ಬಂದಿದ್ದವು. ಕೊರೊನಾ ಸೋಂಕಿನ ಭೀತಿಯ ಕಾರಣಕ್ಕಾಗಿ ಎಲ್ಲಾ ವೇಳಾಪಟ್ಟಿಯನ್ನು ರದ್ದು ಮಾಡಲಾಗಿತ್ತು. ಸ್ಟಾರ್ ಏರ್ ಮೇ ೨೫ರಿಂದ ಹುಬ್ಬಳ್ಳಿಯಿಂದ ಬೆಂಗಳೂರು ಹಾಗೂ ದೆಹಲಿಗೆ ವಿಮಾನ ಸೇವೆ ಆರಂಭಿಸಲಿದೆ. ಸರ್ಕಾರ ಹೊಸಮಾರ್ಗಸೂಚಿ ಪ್ರಕಟಿಸಿದ್ದು, ರಾತ್ರಿ ಪ್ರಯಾಣಕ್ಕೂ ಅವಕಾಶ ಕಲ್ಪಿಸಿದೆ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದ ನಿರ್ದೇಶಕ ಪ್ರಮೋದ ಠಾಕರೆ ತಿಳಿಸಿದ್ದಾರೆ.

ಜಿಲ್ಲಾಕಾರಿಯಿಂದ ಪರಿಶೀಲನೆ: ಪ್ರಯಾಣಿಕರು ಮತ್ತು ವಾಣಿಜ್ಯೋದ್ಯಮ ಚಟುವಟಿಕೆಗಳನ್ನು ಉತ್ತೇಜಿಸಲು ಇಂದಿನಿಂದ ಪ್ರಾರಂಭವಾಗಿರುವದರಿಂದ, ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ದೇಶದ ಒಳನಾಡು ವಿಮಾನಗಳ ಪ್ರಯಾಣಿಕರ ಆಗಮನ ಮತ್ತು ನಿರ್ಗಮನಕ್ಕೆ ಪ್ರತ್ಯೇಕ ಕೌಂಟರ್ ಸ್ಥಾಪಿಸಿ, ಪ್ರಮಾಣ ಪತ್ರಗಳ ಪರಿಶೀಲನೆಗೆ ಕೈಗೊಳ್ಳಲಾಗಿರುವ ಕ್ರಮಗಳನ್ನು ಜಿಲ್ಲಾಕಾರಿಗಳಾದ ದೀಪಾ ಚೋಳನ್ ಅವರು ಪರಿಶೀಲಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!