Wednesday, August 10, 2022

Latest Posts

ಹುಬ್ಬಳ್ಳಿ| ತಪ್ಪು ಮಾಹಿತಿ ನೀಡಿ‌ ಮನೆ ಸೇರಿದ ನಾಲ್ವರು: ಮರಳಿ ಕರೆದೊಯ್ದ ಅಧಿಕಾರಿಗಳು

ಹುಬ್ಬಳ್ಳಿ: ಸುಳ್ಳು ಮಾಹಿತಿ ನೀಡಿ ಮನೆ ಸೇರಿಕೊಂಡಿದ್ದ ನಾಲ್ವರನ್ನು ಕ್ವಾರೆಂಟನ್ ಗೆ ಒಳಪಡಿಸಲು ಅಧಿಕಾರಿಗಳು ಮರಳಿ ಕರೆದೊಂಡು ಹೋಗಿದ್ದಾರೆ.

ಗುರುವಾರ ತಡರಾತ್ರಿ ನಗರಕ್ಕೆ ಆಂಧ್ರಪ್ರದೇಶದಿಂದ ಬಂದಿದ್ದ ಕುಟುಂಬದ ನಾಲ್ವರು ಸದಸ್ಯರು ಚೆಕ್ ಪೋಸ್ಟ್ ನಲ್ಲಿ ಸುಳ್ಳು ಹೇಳಿ ಮನೆ ಸೇರಿಕೊಂಡಿದ್ದರು . ಹೊರರಾಜ್ಯದಿಂದ ಬಂದರೂ ಜಿಲ್ಲಾಡಳಿತಕ್ಕೆ ಯಾವುದೇ ಮಾಹಿತಿ ನೀಡಿರಲಿಲ್ಲ.ಈ ವಿಷಯ ತಿಳಿದ ತಕ್ಷಣ ತಡರಾತ್ರಿ ಅವರನ್ನು ಆ್ಯಂಬುಲೆನ್ಸ್ ನಲ್ಲಿ ಆರೋಗ್ಯ ಇಲಾಖೆ ಅಧಿಕಾರಿಗಳು ಕರೆದುಕೊಂಡು ಹೋಗಿದ್ದಾರೆ.

ಕಳೆದ ಮಾರ್ನಾಲ್ಕು ದಿನಗಳ ಹಿಂದೆಯೇ ಈ ಕುಟುಂಬ ಹುಬ್ಬಳ್ಳಿಗೆ ಆಗಮಿಸಿ ಅಶೋಕನಗರದ ಅಪಾರ್ಟ್ ಮೆಂಟ್ ನಲ್ಲಿ ವಾಸವಾಗಿತ್ತು . ಹೀಗಾಗಿ ಗಂಡ – ಹೆಂಡತಿ ಇಬ್ಬರು ಮಕ್ಕಳನ್ನು ಅಧಿಕಾರಿಗಳು ಕರೆದುಕೊಂಡು ಹೋಗಿದ್ದು, ಅಪಾರ್ಟ್ ಮೆಂಟ್ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss