Wednesday, June 29, 2022

Latest Posts

ಹುಬ್ಬಳ್ಳಿ| ತವರಿನತ್ತ ತೆರಳಿದ ಶ್ರಮಿಕರು

ಹುಬ್ಬಳ್ಳಿ: ಉತ್ತರ ಕರ್ನಾಟಕದ ಎರಡನೇ ಶ್ರಮಿಕ ಎಕ್ಸ್‌ಪ್ರೆಸ್ ರೈಲು ಗುರುವಾರ ಮಧ್ಯಾಹ್ನ 12.30 ಕ್ಕೆ ಹುಬ್ಬಳ್ಳಿಯಿಂದ ರಾಜಸ್ಥಾನದ ಜೋಧಪುರಕ್ಕೆ ಪ್ರಯಾಣ ಬೆಳೆಸಿತು.

ಧಾರವಾಡ ,ಕೊಪ್ಪಳ , ಬೆಳಗಾವಿ , ಶಿವಮೊಗ್ಗ ಸೇರಿ ಸುತ್ತಲಿನ ಜಿಲ್ಲೆಗಳ 1361 ರಾಜಸ್ಥಾನದ ವಲಸೆ ಕಾರ್ಮಿಕರು ಹುಬ್ಬಳ್ಳಿ ಜೋಧಪುರ ಶ್ರಮಿಕ ಸ್ಪೆಷಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸಿದರು. ಹುಬ್ಬಳ್ಳಿ ರೈಲ್ವೆ ನಿಲ್ದಾಣ ಎದುರಿನ ಪಾರ್ಕಿಂಗ್ ಪ್ರದೇಶದಲ್ಲಿ ವಲಸೆ ಕಾರ್ಮಿಕರ ಥರ್ಮಲ್ ಸ್ಮಿನಿಂಗ್ ಪರೀಕ್ಷೆಗಾಗಿ ನಿರ್ಮಿಸಿದ್ದ 15 ಟೆಂಟ್ ಗಳಲ್ಲಿ ಜ್ವರ ತಪಾಸಣೆ ಹಾಗೂ ಇತರ ಆರೋಗ್ಯ ತಪಾಸಣೆಯನ್ನು ಬೆಳಗ್ಗೆ 6 ಗಂಟೆಯಿಂದ ನಡೆಸಲಾಯಿತು. ನಂತರ ಟಿಕೆಟ್ ನೀಡಿ ಬೀಳ್ಕೊಡಲಾಯಿತು.

ಬೆಳಗಾವಿ , ಕೊಪ್ಪಳ , ಶಿವಮೊಗ್ಗ , ಕಾರವಾರ ಹಾಗೂ ಹುಬ್ಬಳ್ಳಿಯಿಂದ ಒಟ್ಟು 1361 ವಲಸಿಗರು ತೆರಳಿದರು. ಮಧ್ಯಾಹ್ನ 12.30 ಗಂಟೆಗೆ ಹೊರಟು ಸಂಜೆ 5 ಗಂಟೆಗೆ ಮಿರಜ, ರಾತ್ರಿ 10 ಗಂಟೆಗೆ ಪುಣೆ, ಮತ್ತು ಮೇ.15 ರಂದು ಬೆಳಗಿನ 1-50 ಗಂಟೆಗೆ ವಾಸಾಯಿ ರೋಡ್, 6-30 ಕ್ಕೆ ವಡೋದರಾ, 8-10 ಕ್ಕೆ ಅಹಮದಾಬಾದ್, 10-05 ಕ್ಕೆ ಪಾಲನಪುರದಿಂದ ಹೊರಟು ಮಧ್ಯಾಹ್ನ 2-30 ಕ್ಕೆ ಜೋಧಪುರ ತಲುಪಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss