ಹುಬ್ಬಳ್ಳಿ: ನಶೆ ಬರುವ ಮುನಕ್ಕಾ ವಸ್ತುವನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಘಂಟಿಕೇರಿ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ನಗರದ ಮುಕೇಶ ಬಾಬುಲಾಲಜೀ ಜೈನ (35), ಕಮಲೇಶ ಬಾಬುಲಾಲಜೀ ಜೈನ ( 30) ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ 1220 ಗ್ರಾಂ ತೂಕದ ಮುನಕ್ಕಾ ಎಂಬ ಮಾದಕ ಪದಾರ್ಥದ ಪಾಕೇಟಗಳನ್ನು ವಶಪಡಿಸಿಕೊಂಡಿದ್ದಾರೆ.
ರಾಧಾಕೃಷ್ಣಾಗಲ್ಲಿಯಲ್ಲಿರುವ ಪಾರ್ಶ್ವನಾಥ ಡ್ರೈಪ್ರುಟ್ಸ ಹೆಸರಿನ ಅಂಗಡಿಯಲ್ಲಿ ಮುನಕ್ಕಾ ಎಂಬ ಮಾದಕ ಪದಾರ್ಥವನ್ನು ಅನಧೀಕೃತವಾಗಿ ಇಟ್ಟುಕೊಂಡು ಮಾರಾಟ ಮಾಡುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿರುವ ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.