ಹುಬ್ಬಳ್ಳಿ: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿದೆ. ಶುಕ್ರವಾರ ತಡರಾತ್ರಿಯಿಂದ ಶನಿವಾರ ಮಧ್ಯಾಹ್ನದವರೆಗೂ ಸುರಿದ ಮಳೆಯಿಂದ ಕೆಲವು ಕಡೆ ಮನೆಗಳಿಗೆ ಹಾನಿಯಾಗಿದ್ದು, ಬಹುತೇಕ ಕಡೆ ಬೆಳೆಗಳು ಜಲಾವೃತವಾಗಿವೆ.
ಹುಬ್ಬಳ್ಳಿ ನಗರ ಹಾಗೂ ಗ್ರಾಮೀಣ ವ್ಯಾಪ್ತಿಯಲ್ಲಿ ಅಂದಾಜು 15ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಮಂಟೂರು, ಬಂಡಿವಾಡ, ಮಾವನೂರು, ಬುಡರಸಿಂಗಿ, ರಾಮಪುರ, ಕುರಡಿಕೇರಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೆಳೆಗಳು ಜಲಾವೃತಗೊಂಡಿವೆ.
ಧಾರವಾಡ ಜಿಲ್ಲೆಯಲ್ಲಿ ಶನಿವಾರ ಬೆಳಗ್ಗೆ 8.30ರವರೆಗೆ 31 ಮಿ.ಮೀ ಮಳೆಯಾಗಿದೆ. ಧಾರವಾಡ ತಾಲೂಕಿನಲ್ಲಿ 31 ಮಿ.ಮೀ, ಹುಬ್ಬಳ್ಳಿ ತಾಲೂಕು 34 ಮಿ.ಮೀ, ಕಲಘಟಗಿ ತಾಲೂಕಿನಲ್ಲಿ 34 ಮಿ.ಮೀ, ಕುಂದಗೋಳ 25 ಮಿ.ಮೀ, ನವಲಗುಂದ 29 ಮಿ.ಮೀ, ಹುಬ್ಬಳ್ಳಿ ನಗರ 35 ಮಿ.ಮೀ, ಅಳ್ನಾವರ 51 ಮಿ.ಮೀ, ಅಣ್ಣಿಗೇರಿ 25 ಮಿ.ಮೀ ಮಳೆಯಾಗಿದೆ.
ಕುಸಿದ 3 ಮನೆಗಳು:
ಶುಕ್ರವಾರ ತಡರಾತ್ರಿ ಸುರಿದ ಮಳೆಗೆ ಮೂರು ಮನೆಗಳು ಕುಸಿದಿವೆ. ಹುಬ್ಬಳ್ಳಿ ಗ್ರಾಮೀಣ ತಾಲೂಕು ವ್ಯಾಪ್ತಿಯ ಬುಡರಸಿಂಗಿ
ಗ್ರಾಮದಲ್ಲಿ ಮೂರು ಮನೆಗಳು ನೆಲಸಮವಾಗಿವೆ.