ಹುಬ್ಬಳ್ಳಿ: ನಡೆದುಕೊಂಡು ಹೋಗುತ್ತಿದ್ದವರನ್ನು ಹೆದರಿಸಿ ಹಣ ಮತ್ತು ಮೊಬೈಲ್ ದೋಚಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ಮೂಲದ ಅಭಿಷೇಕ ಉರ್ಫ್ ಅಭಿ ಕಾಡಪ್ಪ ಅಮರಗೋಳ(19), ಹಳೇ ಹುಬ್ಬಳ್ಳಿಯ ಹನಮಮಂತ ಉರ್ಫ್ ನಿತಿನ್ ಷಣ್ಮುಖಪ್ಪ ಸುರೇಬಾನ(23) ಮತ್ತು ವಿನಾಯಕ ಉರ್ಫ್ ವಿನೋದ ವೆಂಕಟೇಶ ಮೈಸೂರ(20) ಬಂಧಿತ ಆರೋಪಿಗಳು. ಬಂಧಿತರಿಂದ ಕಾರ್ ವಶ ಪಡಿಸಿಕೊಳ್ಳಲಾಗಿದೆ.
ಸಿದ್ಧಾರೂಡ ಶಂಕ್ರಪ್ಪ ಪೂಜಾರ ಎಂಬುವವರು ಮನೆಯಿಂದ ತಾರಿಹಾಳ ಬೈಪಾಸ್ ರೋಡನಲ್ಲಿರುವ ಧಾರಾವತಿ ಹನುಮಂತದೇವರ ಗುಡಿ ಹತ್ತಿರ ನಡೆದುಕೊಂಡು ಹೋಗುವಾಗ ಸಿಲ್ವರ್ ಕಲರ್ ಕಾರಿನಲ್ಲಿ ಬಂದ ಆರೋಪಿತರು ಹಲ್ಲೆ ಮಾಡಿ 8 ಸಾವಿರ ಮೌಲ್ಯದ ಮೊಬೈಲ್, ಕಿಸೆಯಲ್ಲಿದ್ದ 5, 340 ರೂ. ಕಿತ್ತುಕೊಂಡು ಪರಾರಿಯಾಗಿದ್ದರು. ಈ ಕುರಿತು ಗೋಕುಲರೋಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣವನ್ನು ದಾಖಲು ಮಾಡಿಕೊಂಡ ಪೊಲೀಸ್ರು ಇನ್ಸ್ಪೆಕ್ಟರ್ ನಾಗರಾಜ ಕಮ್ಮಾರ, ಪಿಎಸ್ಐ ಬಿ.ಎನ್.ಸಾತನ್ನವರ, ಎನ್.ಐ. ನೀಲಗಾರ, ಎಂ.ಸಿ. ಹೊನ್ನಪ್ಪನವರ. ಬಿ.ಎಫ್. ಬೆಳಗಾವಿ, ರಾಜು ಹೊಂಕಣದವರ, ಅನೀಲ ಹುಗ್ಗಿ, ಸಂಜೀವರಡ್ಡಿ ಕಣಬೂರ, ಶಿವಾನಂದ ಹೆಬಸೂರ, ರಮೇಶ ಕೋತಂಬ್ರಿ, ಮಂಜು ಕಾಮಧೇನು ಒಳಗೊಂಡ ತಂಡ ಆರೋಪಿಗಳನ್ನು ಬಂಧಿಸಿದ್ದಾರೆ. ಪೊಲೀಸ್ ಆಯುಕ್ತರು ನಗದು ಬಹುಮಾನ ಘೋಷಿಸಿದ್ದಾರೆ.