Tuesday, June 28, 2022

Latest Posts

ಹುಬ್ಬಳ್ಳಿ| ಬೀದಿ ಬದಿ ವ್ಯಾಪಾರಸ್ಥರಿಗೆ ನೆರವು ನೀಡಲು ವ್ಯಾಪಾರಸ್ಥರ ಸಂಘದಿಂದ ಮನವಿ

ಹುಬ್ಬಳ್ಳಿ : ಈಗಾಗಲೇ ಚುನಾವಣೆ ನಡೆದು ಆಯ್ಕೆಯಾದ ಟೌನ್ ಸ್ಟ್ರೀಟ್ ವೆಂಡರ್ ಕಮೀಟಿ ಸಭೆ ನಡೆಸಿ, ಲಾಕ್ಡೌನ್ನಿಂದ ಸಂಕಷ್ಟಕ್ಕೀಡಾದ ಬೀದಿಬದಿ ವ್ಯಾಪಾರಿಗಳಿಗೆ ಆರ್ಥಿಕ ನೆರವು ನೀಡಲು ಮುಂದಾಗಬೇಕೆಂದು ಒತ್ತಾಯಿಸಿ ಹು-ಧಾ ಬೀದಿಬದಿ ವ್ಯಾಪಾರಸ್ಥರ ಸಂಘದಿಂದ ಮಹಾನಗರ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಲಾಯಿತು.
ಬೀದಿಬದಿ ವ್ಯಾಪಾರಿಗಳ ಸಮಸ್ಯೆಗಳಿಗೆ ಪರಿಹಾರಕ್ಕೆ ಕೋವಿಡ್- 19 ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ, ವಾರದ ಸಂತೆಗಳನ್ನು ನಡೆಸಲು ಅವಕಾಶ ಕಲ್ಪಿಸಬೇಕು ಮತ್ತು ಬೀದಿಬದಿ ವ್ಯಾಪಾರಿಗಳ – 2017 ಮೊದಲಿನ ಗುರುತಿನ ಚೀಟಿ ನವೀಕರಣಗೊಳಿಸಬೇಕು ಎಂದು ಒತ್ತಾಯಿಸಿ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿ ಚರ್ಚಿಸಲಾಯಿತು.
ಹುಬ್ಬಳ್ಳಿ-ಧಾರವಾಡ ಬೀದಿಬದಿ ವ್ಯಾಪ್ಯಾರಸ್ಥರ ಸಂಘ, ಸಿಐಟಿಯು ಗೌರವಾಧ್ಯಕ್ಷ ಅಮೃತ ಇಜಾರಿ, ಅಧ್ಯಕ್ಷ ಹುಲಿಗೆಮ್ಮ ಚಲವಾದಿ, ಪ್ರಧಾನ ಕಾರ್ಯದರ್ಶಿ ಮಹೇಶ ಪತ್ತಾರ, ಖಜಾಂಜಿ ಮುತ್ತು ಮುದಗಲ್, ವೆಂಡರ ಕಮೀಟಿ ಸದಸ್ಯರಾದ ಕಸ್ತೂರಿ ದಾಸರ, ಅನ್ನಪೂರ್ಣ ಕುಂಕುರಮಠ ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss