ಹುಬ್ಬಳ್ಳಿ: ಲಾಕ್ ಡೌನ್ ಎಫೆಕ್ಟ್ ನಿಂದ ಉಂಟಾದ ನಿರುದ್ಯೋಗ ಹಾಗೂ ಸಾಲಬಾಧೆ ತಾಳಲಾರದೇ ಲಾರಿ ಚಾಲಕ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿಯ ವಿಜಯಪುರ ರಸ್ತೆಯ ಬ್ರಿಡ್ಜ್ ಬಳಿ ಮಂಗಳವಾರ ನಡೆದಿದೆ.ಬಾಗಲಕೋಟೆಯ ಹುನಗುಂದ ತಾಲೂಕಿನ ರೇವಡಿಹಾಳ ಗ್ರಾಮದ ದುರ್ಗೇಶ ರಾಮಪ್ಪ ದೊಡ್ಡಮನಿ(24) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಲಾರಿ ಚಾಲಕನಾಗಿದ್ದ ಈತ ಲಾಕ್ ಡೌನ್ ಪರಿಣಾಮದಿಂದ ಕೆಲಸ ಕಳೆದುಕೊಂಡಿದ್ದನು. ಇದರಿಂದ ಬೆಂಗಳೂರು ಸೇರಿದಂತೆ ವಿವಿಧೆಡೆ ಸಾಲ ಮಾಡಿಕೊಂಡಿದ್ದನು ಎನ್ನಲಾಗಿದೆ. ಸೋಮವಾರ ಹುಬ್ಬಳ್ಳಿಯಲ್ಲಿ ಅವರ ಸಂಬಂಧಿಕರಿಗೆ ಭೇಟಿಯಾಗಲು ಬಂದಿದ್ದನು. ಮರಳಿ ಊರಿಗೆ ಹೋಗುವುದಾಗಿ ಹೇಳಿ ಹೋಗಿ ಬ್ರಿಡ್ಜ್ ಬಳಿಯ ಮರವೊಂದಕ್ಕೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಬಗ್ಗೆ ಕೇಶ್ವಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ