Tuesday, July 5, 2022

Latest Posts

ಹುಬ್ಬಳ್ಳಿ| ವೈದ್ಯರಲ್ಲೇ ಆತಂಕ ಸೃಷ್ಟಿಸಿದ ಪಿ-705 ಪ್ರಕರಣ- ಕಿಮ್ಸ್‌ನ 22 ಸಿಬ್ಬಂದಿಗಳಿಗೆ ಕ್ವಾರಂಟೈನ್!

ಹುಬ್ಬಳ್ಳಿ: ಧಾರವಾಡದ ಹೊಸಯಲ್ಲಾಪುರ ಕೋಳಿಕೆರೆಯ 35 ವರ್ಷದ ಕೊರೋನಾ ಸೋಕಿತ (ಪಿ-705)ನಿಗೆ ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರು ಹಾಗೂ ಶುಶ್ರೂಷಕಿಯರು ಸೇರಿದಂತೆ ಒಟ್ಟು 22 ಸಿಬ್ಬಂದಿಯನ್ನು ಕ್ವಾರೆಂಟೈನ್‌ಗೆ ಒಳಪಡಿಸಲಾಗಿದೆ.
ಹೊಟ್ಟೆ ಹಾಗೂ ಲಿವರ್ ಸಂಬಂಧಿಸಿದ ಕಾಯಿಲೆ ಹಿನ್ನಲೆಯಲ್ಲಿ ಮೇ 1 ರಂದು ಕಿಮ್ಸ್ ಆಸ್ಪತ್ರೆಗೆ ದಾಖಲಾಗಿರುವ ವ್ಯಕ್ತಿಗೆ ಮೇ 7 ರಂದು ಸೋಂಕು ದೃಢಪಟ್ಟಿದ್ದು, ಕಿಮ್ಸ್ ಸಿಬ್ಬಂದಿಗೆ ಆತಂಕವನ್ನುಂಟು ಮಾಡಿದೆ.
ಸೋಂಕಿತನಿಗೆ ಪಿರಿನೋನೈಟಸ್ (ಹೊಟ್ಟೆ ಹಾಗೂ ಲಿವರ್ ಸಂಬಂಧಿತ ಕಾಯಿಲೆ) ಶಸ್ತ್ರಚಿಕಿತ್ಸೆ ಮಾಡಿದ್ದ ವೈದ್ಯರಲ್ಲಿ ಆತಂಕ ಹೆಚ್ಚಾಗಿದ್ದು, ಸೋಂಕಿತನಿಗೆ ಆಪರೇಷನ್ ಮಾಡಿದ್ದ 12 ಡಾಕ್ಟರ್ ಹಾಗೂ 6 ಪಿಜಿ ವಿದ್ಯಾರ್ಥಿಗಳು ಹಾಗೂ ನಾಲ್ಕು ನರ್ಸ್ ಗಳಿಗೆ ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಅಲ್ಲದೇ ಶಸ್ತ್ರಚಿಕಿತ್ಸೆ ಮಾಡಿದ್ದ ಶಸ್ತ್ರಚಿಕಿತ್ಸೆ ವಿಭಾಗವನ್ನು ಕೂಡ ಸಿಲ್ ಡೌನ್ ಮಾಡಲಾಗಿದೆ.
ಕಳೆದ ಏ.30 ರಂದು ಕೆಲವು ರೋಗ ಲಕ್ಷಣಗಳುಳ್ಳ ಈ ವ್ಯಕ್ತಿ ಸಿವಿಲ್ ಆಸ್ಪತ್ರೆಯಲ್ಲಿ ಒಂದು ದಿನದ ಚಿಕಿತ್ಸೆ ಪಡೆದಿದ್ದಾನೆ.
ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ವ್ಯಕ್ತಿಗೆ ಸೋಂಕು ದೃಢಪಟ್ಟಿರುವುದು ಜಿಲ್ಲಾಡಳಿತಕ್ಕೆ ದೊಡ್ಡ ತಲೆ ನೋವಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss