ಹುಬ್ಬಳ್ಳಿ: ನಗರದ ಶ್ರೀ ಸಿದ್ಧಾರೂಢ ಮಠಕ್ಕೆ ಆಗಮಿಸಿರುವ ಭಕ್ತರನ್ನು ಥರ್ಮಲ್ ಸ್ಕ್ರೀನಿಂಗ್ ಮಾಡಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಯಿತು.
ಲಾಕ್ ಡೌನ್ ಸಡಿಲಿಕೆ ನಂತರ ಮೊದಲ ಬಾರಿ ಶ್ರೀ ಸಿದ್ಧಾರೂಢ ಮಠದ ಬಾಗಿಲು ತೆರೆದಿದ್ದರಿಂದ ನೂರಾರು ಜನರು ಉಭಯ ಶ್ರೀಗಳ ದರ್ಶನಕ್ಕೆ ಆಗಮಿಸಿದ್ದರು. ದೇವಸ್ಥಾನದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಲಾಗಿತ್ತು. ಬಂದಂತಹ ಭಕ್ತರಿಗೆ ಸ್ಯಾನಿಟೈಸರ್ ಒದಗಿಸಿ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು.