Monday, August 15, 2022

Latest Posts

ಹುಬ್ಬಳ್ಳಿ| ಸರ್ಕಾರಿ ವಾಹನ ದುರ್ಬಳಕೆ ಆರೋಪ: ಪಿಎಸ್‌ಐ ಅಮಾನತು

ಹುಬ್ಬಳ್ಳಿ: ಲಾಕ್ ಡೌನ್ ಸಂದರ್ಭದಲ್ಲಿ ಪೊಲೀಸ್ ವಾಹನ ದುರ್ಬಳಕೆ ಮಾಡಿಕೊಂಡ ಆರೋಪದ ಮೇಲೆ ಪಿಎಸ್‌ಐಯನ್ನು ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ವರ್ತಿಕಾ ಕಟಿಯಾರ್ ಅಮಾನತು ಮಾಡಿ ಆದೇಶಿಸಿದ್ದಾರೆ.
ಹುಬ್ಬಳ್ಳಿಯ ಪೊಲೀಸ್ ಅರಣ್ಯ ಘಟಕದ ಪಿಎಸ್‌ಐ ಶಿವಾನಂದ ಅರೆನಾಡ್ ಅವರನ್ನು ಅಮಾನತು ಮಾಡಲಾಗಿದೆ.
ಏ-೧೭ ರಂದು ಅರಣ್ಯ ಘಟಕಕ್ಕೆ ಸೇರಿದ ಎಂ-೨೫ ಉ-೩೦೩ ವಾಹನವನ್ನ ತಮ್ಮ ಪರಿಚಯಸ್ಥರ ಬಳಕೆಗೆ ಪಿಎಸ್ ಐ ನೀಡಿದ್ದರು. ಅವರೆಲ್ಲರೂ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಪೊಲೀಸ್ ಠಾಣೆ ವ್ಯಾಪ್ತಿಯ ಹಿತ್ತಲಮಕ್ಕಿ ಚೆಕ್ ಪೋಸ್ಟ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಇಲಾಖೆ ವಾಹನ ಬಳಸಿದ್ದ ಹಿನ್ನೆಲೆಯಲ್ಲಿ ಅವರ ವಿರುದ್ದ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲಿ ಪರೋಕ್ಷವಾಗಿ ಪಿಎಸ್‌ಐ ಶಿವಾನಂದ ಭಾಗಿಯಾಗಿದ್ದರು. ಅಲ್ಲದೆ, ಆರೋಪ ಸಾಬೀತಾದ ಹಿನ್ನೆಲೆ ಅಮಾನತು ಮಾಡಲಾಗಿದೆ.
ಈ ವಾಹನವನ್ನ ಹುಬ್ಬಳ್ಳಿಯ ಗೌಸ್ ಹಣಗಿ, ಅಬ್ದುಲ್ ರಜಾಕ್, ಮುತ್ತಪ್ಪ ಪಾಟೀಲ್ ಇಮ್ತಿಯಾಜ್ ಕ್ವಾಜಾ ಹುಸೇನ್ ಎಂಬುವವರು ಉತ್ತರ ಕನ್ನಡ ಜಿಲ್ಲೆಗೆ ತೆಗೆದುಕೊಂಡು ಹೋಗಿದ್ದರು. ಗುತ್ತಿಗೆದಾರರೊಬ್ಬರಿಗೆ ಸೇರಿದ ಜೆಸಿಬಿಯನ್ನ ತೆಗೆದುಕೊಂಡು ಬರಲು ಜೀಪ್ ಒಯ್ದಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss