ಹುಬ್ಬಳ್ಳಿ: ಇಲ್ಲಿಯ ರಾಯನಾಳ ಬಳಿಯ 8 ಎಕರೆ ಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಿಸಲಾಗಿದ್ದ ಲೇಔಟ್ನ್ನು ಹುಡಾ ಅಧ್ಯಕ್ಷ ಹಾಗೂ ಅಧಿಕಾರಿಗಳ ನೇತೃತ್ವದ ತಂಡ ಬುಧವಾರ ತೆರವುಗೊಳಿಸಿತು.
ಪರವಾನಗಿ ಪಡೆಯದ ಹಿನ್ನೆಲೆಯಲ್ಲಿ ಹುಡಾದಿಂದ ಈಗಾಗಲೇ ಸಾಕಷ್ಟು ಬಾರಿ ನೋಟಿಸ್ ನೀಡಲಾಗಿದೆ. ಆದರೆ, ಈ ಮಧ್ಯೆಯೂ ಜಮೀನು ಮಾಲೀಕರು ಅದನ್ನು ಅಭಿವೃದ್ಧಿ ಪಡಿಸಿದ್ದರು. ಹೀಗಾಗಿ ಬುಧವಾರ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ನೇತೃತ್ವದಲ್ಲಿ ಲೇಔಟ್ನಲ್ಲಿರುವ ರಸ್ತೆ, ಗಟಾರು ಸೇರಿದಂತೆ ವಿದ್ಯುತ್ ಕಂಬಗಳನ್ನು ಜೆಸಿಬಿ ಮೂಲಕ ತೆರವುಗೊಳಿಸಲಾಯಿತು.
ಕಳೆದ ಎರಡು ದಿನಗಳಿಂದ ಕಾರ್ಯಾಚರಣೆ ನಡೆಯುತ್ತಿದ್ದು, ಮುಕ್ತಾಯದ ಹಂತಕ್ಕೆ ಬಂದಿದೆ. ಸದ್ಯ ಅಲ್ಲಿರುವ ನಿವಾಸಿಗಳು ಇದನ್ನು ಸರಿಪಡಿಸಿಕೊಳ್ಳಲು ೬ ತಿಂಗಳ ಕಾಲಾವಕಾಶ ಕೋರಿದ್ದಾರೆ. ಈಗಾಗಲೇ ಈ ಅನಕೃತ ಲೇಔಟ್ನಲ್ಲಿ ಕೆಲವು ವಸತಿ ನಿರ್ಮಿಸಿಕೊಂಡಿದ್ದಾರೆ. ಹೀಗಾಗಿ ವಸತಿಗಳನ್ನು ಬಿಟ್ಟು ಲೇಔಟ್ನ ಸುತ್ತಲಿನ ಪ್ರದೇಶವನ್ನು ತೆರವುಗೊಳಿಸಲಾಗುತ್ತಿದೆ. ಯಾವುದೇ ಮನವಿಗಳು ಬಂದರೂ ಲೇಔಟ್ ಕಾರ್ಯಚರಣೆ ಮುಂದುವರಿಯಲಿದೆ ಎಂದು ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ತಿಳಿಸಿದ್ದಾರೆ.