ತುಮಕೂರು: ಜಿಲ್ಲೆಯ ಹುಳಿಯಾರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿನ ಕಾರೇಹಳ್ಳಿ ರಂಗನಾಥಸ್ವಾಮಿ ದೇವಾಲಯ ಮುಂಭಾಗದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ಮೂವರನ್ನು ಹುಳಿಯಾರು ಪೊಲೀಸರು ಬಂಧಿಸಿ ಅವರಿಂದ 18ಸಾವಿರ ರೂಗಳ ಮೌಲ್ಯದ 1.280 ಗ್ರಾಮ್ ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿಗಳು ತಿಳಿಸಿದ್ದಾರೆ.
ಶಿರಾ ತಾಲೂಕಿನ ಮಾನಂಗಿ ತಾಂಡದ ಶಶಿಕುಮಾರ ನಾಯ್ಕ, (24) ಚಿ.ನಾ.ಹಳ್ಳಿ ತಾಲೂಕು ಅಣೆಪಾಳ್ಯದ ಚಂದ್ರಯ್ಯ (73), ಮತ್ತು ಚಿ.ನಾ.ಹಳ್ಳಿ ತಾಲೂಕಿನ ಕಣಿವೇ ಕ್ರಾಸ್ ನ ಲೋಕೇಶ (20) ಎಂದ ಎಂಬುವವರನ್ನು ಬಂಧಿಸಿರುವ ಪೊಲೀಸರು ಅವರಿಂದ ಗಾಂಜಾ ಜೊತೆಗೆ 11950ರೂಗಳ ಮೌಲ್ಯದ ದ್ವಿಚಕ್ರ ವಾಹನವನ್ನು ಸಹ ವಶಪಡಿಸಿಕೊಂಡಿದ್ದಾರೆ.