Sunday, March 7, 2021

Latest Posts

ಹೃದಯ ರೋಗಿಗಳಿಗಾಗಿ ನಾರಾಯಣ ಹಾರ್ಟ್ ಸೆಂಟರ್ ವತಿಯಿಂದ “ಅರಿತ್ಮಯಾ ಕ್ಲಿನಿಕ್”

ಹೊಸದಿಗಂತ ವರದಿ,ಧಾರವಾಡ:

ಉತ್ತರ ಕರ್ನಾಟಕದ ಹೃದಯ ರೋಗಿಗಳಿಗೆ ಇನ್ನಷ್ಟು ಅತ್ಯಾಧುನಿಕ ಸೌಲಭ್ಯಗಳ ಚಿಕಿತ್ಸೆ ಒದಗಿಸಲು ಎಸ್ಡಿಎಂ ನಾರಾಯಣ ಹಾರ್ಟ್ ಸೆಂಟರ್ ವತಿಯಿಂದ ‘ಅರಿತ್ಮಿಯಾ ಕ್ಲಿನಿಕ್’ ತೆರೆಯಲಾಗಿದೆ ಎಂದು ಡಾ. ವಿವೇಕಾನಂದ ಗಜಪತಿ ತಿಳಿಸಿದರು.

ಶನಿವಾರ ಖಾಸಗಿ ಹೊಟೇಲ್ ನಲ್ಲಿ ಅರಿತ್ಮಿಯಾ ಕ್ಲಿನಿಕ್ ಉದ್ಘಾಟನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅರಿತ್ಮಿಯಾ ಸಂಬಂಧಿ ಅನಾರೋಗ್ಯ ಸಮಸ್ಯೆ ಇತ್ಯರ್ಥ ಹಾಗೂ ಈ ರೋಗ ಬಗ್ಗೆ ಅರಿವು ಮೂಡಿಸಲು ಈ ಕ್ಲಿನಿಕ್ ತೆರೆದಿದೆ ಎಂದು ತಿಳಿಸಿದರು.

ಏನಿದು ಅರಿತ್ಮಿಯಾ?: ಮನುಷ್ಯನ ಹೃದಯ ಬಡಿತದಲ್ಲಿ ಸಾಮಾನ್ಯಕ್ಕಿಂತ ಏರಿಳಿತ ಕಾಣಿಸುವ ಸಣ್ಣಸಣ್ಣ ಅನಾರೋಗ್ಯ ಸಮಸ್ಯೆಗಳಿಗೆ ಅರಿತ್ಮಿಯಾ ಎಂದು ಹೆಸರು. ಈ ಕಾಯಿಲೆ ಹಾಗೆ ಬಿಟ್ಟರೆ,ತೆಲೆಸುತ್ತು, ಪಾರ್ಶ್ವವಾಯು, ಹೃದಯ ಸ್ತಂಭನ ಹಾಗೂ ಹೃದಯ ವೈಫಲ್ಯಕ್ಕೆ ಕಾರಣವಾಗಲಿದೆ ಎಂದು ಹೇಳಿದರು.

ಈ ಹೊಸ ಕ್ಲಿನಿಕ್ ನಲ್ಲಿ ಅತ್ಯಾಧುನಿಕ ಸೌಲಭ್ಯಗಳ ಜತೆಗೆ ಇಪಿಎಸ್ (ಎಲೆಕ್ಟ್ರೋಪಿಜಿಯಾಲಜಿ ಸ್ಟಡೀಸ್), ರೇಡಿಯೋ ಫ್ರೀಕ್ವೆನ್ಸಿ ಅಲ್ಬೇಷನ್(ಆರ್.ಎಫ್.ಎ), ಕಾರ್ಡಿಯಾಕ ರಿಸಿಂ ಕ್ರೊನೈಸೇಷನ್ ಥೆರಪಿ(ಸಿಆರ್.ಟಿ), ಸಿಆರ್.ಟಿಡಿ ಇನ್ ಪ್ಲಾಂಟೇಬಲ್ ಕಾರ್ಡಿಯೊವರ್ಟಿರ್ ಡೆಫಿಬ್ರಿಲೇಟರ್ (ಐಸಿಡಿ) ಸೇವೆ ಒಳಗೊಂಡಿದೆ ಎಂದರು.

ಬೆಂಗಳೂರಿನ ನಾರಾಯಣ ಹೆಲ್ತ್ ಸೆಂಟರ್ ನ ಡಾ. ವಿ.ಎಸ್. ಪ್ರಕಾಶ ಮಾರ್ಗದರ್ಶನದಲ್ಲಿ ಎಸ್ಡಿಎಂನ ನಾರಾಯಣ ಹೃದಯಾಲಯದ ವೈದ್ಯ ಡಾ.ಚೌಡಪ್ಪ ಶಾಖಾಪೂರ ಈ ಎಲೆಕ್ಟ್ರೋಪಿಜಿಯಾಲಜಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.

ಕ್ಲಿನಿಕ್ ಮುಖ್ಯಸ್ಥ ಡಾ. ಚೌಡಪ್ಪ ಶಾಖಾಪೂರ ಮಾತನಾಡಿ, ಜಾಗೃತಿ ಹಾಗೂ ಅರಿವಿನ ಕೊರತೆ ಕಾರಣದಿಂದ ಹೃದಯ ಸಂಬಂಧಿ ಕಾಯಿಲೆ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಅರಿತ್ಮಿಯಾ ವಿಭಾಗ ಆರಂಭ ತುರ್ತು ಅಗತ್ಯವಿತ್ತು. ಮುಂದೆ ಹೃದಯಾಘಾತ ಆಗುವುದು ತಪ್ಪಿಸಲು ಈ ಕ್ಲಿನಿಕ್ ತೆರೆದಿದೆ ಎಂದರು.

ಈ ಕ್ಲಿನಿಕ್ ವೈದ್ಯರ ತಂಡ ಪ್ರತಿ ಮೂರನೇ ಶನಿವಾರ ಧಾರವಾಡ ಸೆಂಟರ್ ನಲ್ಲಿ ಸಮಾಲೋಚನೆ ಹಾಗೂ ಚಿಕಿತ್ಸೆಗೆ ಲಭಿಸುತ್ತಾರೆ. ಉತ್ತರ ಕರ್ನಾಟಕದ ಹೃದಯ ರೋಗಿಗಳು ಈ ಕ್ಲಿನಿಕ್ ಸೌಲಭ್ಯ ಸದ್ಬಳಿಕೆ ಮಾಡಿಕೊಳ್ಳುವಂತೆ ಸಲಹೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಿಬ್ಬಂದಿಗಳಾದ ದುಂಡೇಶ ತಡಕೋಡ, ಅಜೇಯ ಹುಲಮನಿ ಅನೇಕರು ಇದ್ದರು.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss