Sunday, August 14, 2022

Latest Posts

ಹೆಚ್ಚಿದ ಕೊರೋನಾ ಸೋಂಕು: ಕಾಸರಗೋಡು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ಅನಿರ್ದಿಷ್ಟಾವಧಿ ಬಂದ್

ಕಾಸರಗೋಡು: ಕೋವಿಡ್ ವೈರಸ್ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಾಸರಗೋಡು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣವನ್ನು ಮಂಗಳವಾರದಿಂದ ಅನಿರ್ದಿಷ್ಟಾವಧಿಗೆ ಮುಚ್ಚುಗಡೆ ಮಾಡಲಾಗಿದೆ. ಕಾಸರಗೋಡು ಡಿಪ್ಪೋದ ಇಬ್ಬರು ಬಸ್ ನಿರ್ವಾಹಕರಿಗೆ ಕೊರೋನಾ ಸೋಂಕು ಖಚಿತಗೊಂಡ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಇದೇ ವೇಳೆ ಕಣ್ಣೂರು, ಪಯ್ಯನ್ನೂರು, ಹೊಸದುರ್ಗ ಕೆಎಸ್ ಆರ್ ಟಿಸಿ ನಿಲ್ದಾಣಗಳಿಂದ ಬರುವ ಬಸ್ ಗಳು ಕಾಸರಗೋಡು ಹೊಸ ಬಸ್ ನಿಲ್ದಾಣದ ವರೆಗೆ ಸಂಚರಿಸುತ್ತಿವೆ. ಈ ಮಧ್ಯೆ ಕಳೆದ ಎರಡು ದಿನಗಳ ಹಿಂದೆ ಕಾಸರಗೋಡು ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ಮೆಕ್ಯಾನಿಕ್ ಗೆ ಕೊರೋನಾ ಖಚಿತಗೊಂಡ ಹಿನ್ನೆಲೆಯಲ್ಲಿ ಕಾಸರಗೋಡು ಸರಕಾರಿ ಬಸ್ ನಿಲ್ದಾಣವನ್ನು ಅಣುಮುಕ್ತಗೊಳಿಸಲಾಗಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss