Wednesday, August 17, 2022

Latest Posts

ಹೆಚ್ಚಿದ ಹಕ್ಕಿ ಜ್ವರ ಭೀತಿ: ದೆಹಲಿಯಲ್ಲಿ 200 ಕಾಗೆಗಳ ಸಾವು

ಹೊಸದಿಗಂತ ಆನ್ ಲೈನ್ ಡೆಸ್ಕ್:

ಕೊರೋನಾ ನಡುವೆ ದೇಶದಲ್ಲಿ ಹಕ್ಕಿ ಜ್ವರದ ಭೀತಿ ಹೆಚ್ಚಾಗಿದ್ದು, ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕಳೆದ ಒಂದು ವಾರದಲ್ಲಿ 200 ಕಾಗೆಗಳು ಮೃತಪಟ್ಟಿವೆ ಎಂದು ವರದಿ ತಿಳಿಸಿದೆ.

ಕೇರಳ, ರಾಜಸ್ಥಾನ, ಪಂಜಾಬ್, ಗುಜರಾತ್, ಮಧ್ಯಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಹಕ್ಕಿ ಜ್ವರದ ಭೀತಿ ಹೆಚ್ಚಾಗಿದ್ದು, ಇದೀಗ ರಾಷ್ಟ್ರರಾಜಧಾನಿಗೂ ಹಕ್ಕಿ ಜ್ವರದ ಶಂಕೆ ವ್ಯಕ್ತವಾಗಿದೆ.

ಮಯೂರ್ ವಿಹಾರ್ ನ ಸೆಂಟ್ರಲ್ ಪಾರ್ಕ್ ನಲ್ಲಿ 17 ಕಾಗೆಗಳು, ದ್ವಾರಕದ ಡಿಡಿಎ ಪಾರ್ಕ್ ನಲ್ಲಿ 2 ಕಾಗೆಗಳು ಮತ್ತು ಹಸ್ತ್ ಸಾಲ್ 16 ಕಾಗೆಗಳು ಬಲಿಯಾಗಿದ್ದು, ದೆಹಲಿ ಮೂರು ಪ್ರದೇಶದಲ್ಲಿ ಒಟ್ಟು 200 ಕಾಗೆಗಳು ಮೃತಪಟ್ಟಿರುವುದಾಗಿ ಎಎನ್’ಐ ವರದಿ ತಿಳಿಸಿದೆ.

ಕಾಗೆಗಳ ಸಾವಿನ ಮಾಹಿತಿ ತಿಳಿದ ಕ್ಷಿಪ್ರ ಪ್ರತಿಕ್ರಿಯೆ ತಂಡ ಸ್ಥಳಕ್ಕೆ ಭೇಟಿ ನೀಡಿ 5 ಮಾದರಿಗಳನ್ನು ಸಂಗ್ರಹಿಸಿದೆ ಎಂದು ಡಿಸಿಎಂ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!