Wednesday, June 29, 2022

Latest Posts

ಹೆಚ್ಚುತ್ತಲೇ ಇದೆ ಸೋಂಕಿತರ ಸಂಖ್ಯೆ: ಕೊರೋನಾ ಬಾಧಿತ ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಈಗ 9ನೇ ಸ್ಥಾನ

ನವದೆಹಲಿ: ಕೊರೋನಾ ಮಹಾ ಮಾರಿಯಿಂದ ವಿಶ್ವದ ಎಲ್ಲ ರಾಷ್ಟ್ರಗಳು ತತ್ತರಿಸಿದ್ದು, ಗರಿಷ್ಠ ಸಂಖ್ಯೆಯ ಕೊರೋನಾ ಬಾಧಿತ ದೇಶಗಳ ಪಟ್ಟಿಯಲ್ಲಿ ಭಾರತ ಈಗ 9 ನೇ ಸ್ಥಾನ ಪಡೆದುಕೊಂಡಿದೆ.
ದೇಶದಲ್ಲಿ ಕೊರೋನಾ ಸೋತಂಕಿತರ ಸಂಖ್ಯೆ ಈಗ ಬರೋಬ್ಬರಿ 1.6 ಲಕ್ಷಕ್ಕೆ ಏರಿಕೆಯಾಗುತ್ತಿದ್ದು, ಪ್ರತಿನಿತ್ಯ ಹೊಸ ಪ್ರಕರಣಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಕೊರೋನಾ ಸೋಂಕಿತರ ಸಾವಿನ ಸಂಖ್ಯೆಯಲ್ಲು ಏರಿಕೆಯಾಗುತ್ತಿದ್ದು, ಭಾರತ ಈಗಾಗಲೇ ಸೋಂಕಿತರ ಸಾವಿನ ಸಂಖ್ಯೆಯಲ್ಲಿ ಚೀನಾವನ್ನೂ ಹಿಂದಿಕ್ಕಿದೆ ಎಂದು ಅಮೇರಿಕಾದ ಜಾನ್ ಹಾಕಿನ್ಸ್ ವಿಶ್ವವಿದ್ಯಾನಿಲಯ ತನ್ನ ಅಂಕಿ ಅಂಶಗಳ ಮಾಹಿತಿ ಆಧಾರದಲ್ಲಿ ಹೇಳಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss