ತಿರುವನಂತಪುರ: ಕೋವಿಡ್ ಸೋಂಕು ಏರುಗತಿಯಲ್ಲೇ ಇರುವುದರಿಂದ ರಾಜ್ಯದಲ್ಲಿ ಶಾಲೆಗಳನ್ನು ಪುನರಾರಂಭಿಸಲು ಸದ್ಯಕ್ಕೆ ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿರುವನಂತಪುರದಲ್ಲಿ ತಿಳಿಸಿದ್ದಾರೆ.
ರಾಜ್ಯದ ವಿವಿಧ ಶಾಲೆಗಳಿಗಾಗಿ ನಿರ್ಮಿಸಲಾದ ಹೈಟೆಕ್ ಕೊಠಡಿಗಳು ಹಾಗೂ ಲ್ಯಾಬ್ ವ್ಯವಸ್ಥೆಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಕೊರೋನಾ ಸಾಂಕ್ರಾಮಿಕ ರೋಗ ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳನ್ನು ಆರಂಭಿಸಲು ಸ್ವಲ್ಪಕಾಲ ಕಾಯಬೇಕಾಗಿದೆ. ಶಾಲಾ ಕಾಲೇಜುಗಳು ತೆರೆದು ಕಾರ್ಯಾಚರಿಸದಿರುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ತೊಡಕಾಗದಿರಲು ಆನ್ ಲೈನ್ ತರಗತಿಯನ್ನು ಆರಂಭಿಸಲಾಗಿದೆ. ಶಾಲಾ ಕೊಠಡಿಗಳನ್ನು ಹೈಟೆಕ್ಗೊಳಿಸುವುದರ ಜತೆಗೆ ಲ್ಯಾಬ್ಗಳನ್ನು ಮೇಲ್ದರ್ಜೆಗೇರಿಸುವುದರಿಂದ ಮುಂದಿನ ಪೀಳಿಗೆಗೆ ಭಾರೀ ಉಪಯುಕ್ತವಾಗಲಿದೆ ಎಂದು ಸಿಎಂ ನುಡಿದರು.