Monday, August 8, 2022

Latest Posts

ಹೆಣ್ಣು ಮಗುವಿಗಾಗಿ ಕಾತರಿಸಿ ಕಾತರಿಸಿ ಬರೋಬ್ಬರಿ ಹದಿನೈದು ಮಕ್ಕಳನ್ನು ಹಡೆದಳು ಈ ತಾಯಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತೂ ಇಂತೂ ಈ ತಾಯಿಯ ಕನಸು ನನಸಾಗಿದೆ!
ಬರೋಬ್ಬರಿ ಮೂವತ್ತು ವರ್ಷಗಳ ಬಳಿಕ ಈ ಮನೆಗೆ ಹೆಣ್ಣು ಮಗುವೊಂದರ ಆಗಮನವಾಗಿದೆ. ಅಂದಹಾಗೆ ಹೆಣ್ಣು ಮಗು ಪಡೆಯಲೇಬೇಕು ಎಂಬ ಹಠದಲ್ಲಿ ಈ ತಾಯಿ ಇದುವರೆಗೆ ಹೆತ್ತಿರುವ ಮಕ್ಕಳ ಸಂಖ್ಯೆ ಬರೋಬ್ಬರಿ 15!
ಕಥೆ ಇಂಟರೆಸ್ಟಿಂಗ್ ಆಗಿದೆ ಮುಂದೆ ಓದಿ…
ಅಮೆರಿಕಾ ಮೂಲದ ಈ ದಂಪತಿಯ ಹೆಸರು ಕ್ಯಾತೆರಿ ಮತ್ತು ಜೇ ಶ್ವಾಂಡ್‌ಟ್. 32 ವರ್ಷಗಳಿಂದ ದಾಂಪತ್ಯ ನಡೆಸುತ್ತಿದ್ದಾರೆ. ಹೆಣ್ಣು ಮಗು ಬೇಕು ಎಂಬ ಬಯಕೆ ಇವರದ್ದು. ಹಾಗಾಗಿ ತಮಗೆ ಹುಟ್ಟುವ ಮೊದಲ ಮಗು ಹೆಣ್ಣಾಗಿರಬೇಕು ಎಂದು ಬಯಸಿದ್ದರು. ಆದರೆ ದೇವರು ಆಟ ಬಲ್ಲವರಾರು? ಆಗಿದ್ದು ಮಾತ್ರ ಗಂಡು ಮಗು. ಸರಿ ಎರಡನೆಯದ್ದಾದರೂ ಹೆಣ್ಣಾದೀತು ಎಂದು ಪ್ರಯತ್ನಪಟ್ಟರು. ಆದರೆ ಆಗಲೂ ಗಂಡು ಮಗುವಾಯಿತು. ಸರಿ, ಮೂರನೇಯದ್ದು ಖಂಡಿತಾ ಹೆಣ್ಣು ಮಗು ಎಂದುಕೊಂಡರು. ಮತ್ತೆ ಗಂಡು ಮಗುವಾಯಿತು. ಸರಿ ನಾಲ್ಕನೆಯದ್ದು… ಸರಿ ಐದನೆಯದ್ದು… ಸರಿ, ಆರನೆಯದ್ದು… ಏಳನೆಯದ್ದು… ಎಂದು ನಿರೀಕ್ಷೆ ಮಾಡಿ ಮಾಡಿ ಬರೋಬ್ಬರಿ 14 ಮಕ್ಕಳು ಹುಟ್ಟಿದರೂ, ಹೆಣ್ಣು ಮಗುವಿನ ಪತ್ತೆಯೇ ಇಲ್ಲ. ಆದರೂ ಧೈರ್ಯಗುಂದದೆ ಮತ್ತೊಂದು ಪ್ರಯತ್ನ ಮಾಡಿದ ದಂಪತಿಗೆ ಕೊನೆಗೂ ಫಲ ಸಿಕ್ಕಿದೆ!
15ನೇ ಮಗುವಾಗಿ ಹೆಣ್ಣಿನ ಆಗಮನವಾಗಿದೆ. ಸಧ್ಯ ಈ ದಂಪತಿಗಳ ಖುಷಿಗೆ ಪಾರವೇ ಇಲ್ಲದಂತಾಗಿದೆ. ಈಗ ಸುಮಾರು ಮೂರು ದಶಕಗಳ ನಂತರ ಈ ದಂಪತಿ ಹೆಣ್ಣು ಮಗುವಿನ ಪೋಷಕರು ಎಂದೆನಿಸಿಕೊಂಡಿದ್ದಾರೆ.
ಈ ಖುಷಿಯನ್ನ ತಮ್ಮ ಕುಟುಂಬದ ಪೇಸ್ ಬುಕ್ ಪೇಜ್‌ನಲ್ಲಿ ಹಂಚಿಕೊಂಡಿರುವ ದಂಪತಿ, ನವಜಾತ ಶಿಶುವಿನ ಫೋಟೋ ಹಾಕಿ, ‘ನಮ್ಮ ಪುಟ್ಟ ಮ್ಯಾಗಿ ಜೇನ್ ಹುಟ್ಟಿದ ಬಗ್ಗೆ ನಾವು ಸಂತೋಷ ಹಂಚಿಕೊಳ್ಳುತ್ತಿದ್ದೇವೆ. ಅವಳನ್ನು ಪಡೆದ ನಾವು ಧನ್ಯರು.’ ಎಂದು ಖುಷಿ ಹಂಚಿಕೊಂಡಿದ್ದಾರೆ!

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss