Wednesday, June 29, 2022

Latest Posts

ಹೆಣ್ಣು ಮರಿಗೆ ಜನ್ಮ ನೀಡಿದ ಶ್ರೀ ಕ್ಷೇತ್ರ ಧರ್ಮಸ್ಥಳದ ಆನೆ !

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿರುವ ಆನೆ ಲಕ್ಷ್ಮೀ ಬುಧವಾರ ಹೆಣ್ಣು ಮರಿಗೆ ಜನ್ಮ ನೀಡಿದ್ದಾಳೆ.
ಬೆಂಗಳೂರು ಬನ್ನೇರುಘಟ್ಟದಲ್ಲಿ ಸುಮಾರು 2 ವರ್ಷಕ್ಕೆ ಹಿಂದೆ ಕಾಡಾನೆ ಜೊತೆಗೆ ಜೋಡಿಗೆ ಕಳುಹಿಸಲಾಗಿತ್ತು. ಸಾಮಾನ್ಯವಾಗಿ ಗಜಗರ್ಭ ಎಂದೇ ಪ್ರಖ್ಯಾತಿಯಾಗಿರುವಂತೆ ಸುಮಾರು 20 ತಿಂಗಳ ಧೀರ್ಘ ಗರ್ಭಾವಸ್ಥೆಯ ಬಳಿಕ ಹೆಣ್ಣು ಮರಿಗೆ ಜನ್ಮ ನೀಡಿದ್ದಾಳೆ. ಸರ್ಕಾರದ ಅರಣ್ಯಇಲಾಖೆಯವರು ಮತ್ತು ಧರ್ಮಸ್ಥಳ ಗ್ರಾಮದ ಪಶು ವೈದ್ಯಾಧಿಕಾರಿಯು ನಿಕಟವಾಗಿ ಪರಿಶೀಲಿಸುತ್ತಾ ಸೂಕ್ತ ಎಚ್ಚರಿಕೆ ವಹಿಸಿ ಸಹಕರಿಸಿದ್ದಾರೆ ಎಂದು ದೇವಳದ ಪಾರುಪತ್ಯಗಾರರು ತಿಳಿಸಿರುತ್ತಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss