Wednesday, August 10, 2022

Latest Posts

ಹೆರಿಗೆಗೆ ಕರೆದೊಯ್ಯುವ ವೇಳೆ ಅಂಬ್ಯುಲೆನ್ಸ್ ನಲ್ಲೇ ಮಗುವಿಗೆ ಜನ್ಮನೀಡಿದ ತಾಯಿ

ಧಾರವಾಡ: ಪ್ರಸವ ಬೇನೆಯಿಂದ ಬಳಲುತ್ತಿದ್ದ ತಾಲೂಕಿನ ಮಹಿಳೆ ಹೆರಿಗೆಗೆ ಜಿಲ್ಲಾಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗಮಧ್ಯದಲ್ಲಿ  ಅಂಬ್ಯುಲೆನ್ಸ್ನಲ್ಲಿಯೇ ಹೆಣ್ಣು ಮಗುವಿಗೆ ಜನ್ಮ ನೀಡಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.
ಗ್ರಾಮ ಲಕ್ಷ್ಮಿ (೨೦) ಎಂಬ ಮಹಿಳೆ ಚೊಚ್ಚಲ ಹೆರಿಗೆ ನೋವಿನಿಂದ ಬಳಲುತ್ತಿದ್ದಾಗ 108ಕ್ಕೆ ಕರೆ ಮಾಡಿದ್ದರು. ಚಾಲಕ ನಾಗರಾಜನ ಚಾಲಾಕಿತನದಿಂದ ಸೂಕ್ತ ಸಮಯಕ್ಕೆ ಅಂಬ್ಯುಲೆನ್ಸ್ ಗ್ರಾಮ ತಲುಪಿದೆ.
ಚೊಚ್ಚಲ ಹೆರಿಗೆ ಆಗಿದ್ದರಿಂದ ಲಕ್ಷ್ಮಿ ತುಂಬಾ ಕ್ಲಿಷ್ಟಕರ ಪರಿಸ್ಥಿತಿಯಲ್ಲಿದ್ದು, ಅಂಬ್ಯುಲೆನ್ಸ್ನಲ್ಲಿ ಹೆರಿಗೆಗೆ ಕರೆತರುವ ವೇಳೆ ಆಕೆಯ ತಾಯಿ ಸಹಾಯದಿಂದ ಮನಗುಂಡಿ ದೇವಸ್ಥಾನ ಬಳಿಯೇ ಟಿಎಂಟಿ ಶಾಂತೇಶ ಸಹಜ ಹೆರಿಗೆ ಮಾಡಿಸಿದ್ದಾರೆ.
ಹೆರಿಗೆ ಮಾಡಿಸಲು ಶಾಂತೇಶ ಅವರಿಗೆ ಅಂಬ್ಯುಲೇನ್ಸ್ ಚಾಲಕ ನಾಗರಾಜ ಸಹ ಸಹಕಾರ ನೀಡಿದ್ದಾರೆ. ನಂತರ ಜಿಲ್ಲಾಸ್ಪತ್ರೆಗೆ ಸಾಗಿಸಿದ್ದು, ಇದೀಗ ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss