Tuesday, June 28, 2022

Latest Posts

‘ಯೆ ದಿಲ್ ಮಾಂಗೆ ಮೋರ್’ ಎಂದು ಕಾರ್ಗಿಲ್ ಶಿಖರ ಗೆದ್ದ ವೀರ ಯೋಧ ಕ್ಯಾ. ವಿಕ್ರಂ ಬಾತ್ರಾ

ಭಾರತ ಪಾಕಿಸ್ತಾನದ ನಡುವೆ ನಡೆದ ಕಾರ್ಗಿಲ್ ಯುದ್ಧದಲ್ಲಿ ತಮ್ಮ ಪ್ರಾಣ ತ್ಯಾಗ ಮಾಡಿದ ಅಪ್ರತಿಮ ವೀರ ಯೋಧ ಕ್ಯಾಪ್ಟನ್ ವಿಕ್ರಮ್ ಬಾತ್ರಾ. ಪಾಕಿಸ್ತಾನಿ ಸೈನ್ಯಕ್ಕೆ ಬೆವರಿಳಿಸಿ, ಭಾರತೀಯ ಸೈನಿಕರಿಗೆ ಕಿಚ್ಚು ಹೆಚ್ಚಿಸುವಂತೆ ಮಾಡುವ ಗುಂಡಿಗೆ ಇದ್ದ ವೀರ, ಧೀರ ಸೈನಿಕ ಕ್ಯಾ. ವಿಕ್ರಂ ಬಾತ್ರಾ.

1999ರಲ್ಲಿ ನಡೆದ ಕಾರ್ಗಿಲ್ ಯುದ್ದದಲ್ಲಿ ಹೋರಾಡುವಾಗ ವಿಕ್ರಂಗೆ ಕೇವಲ 24 ವರ್ಷವಾಗಿತ್ತು. ರಜೆಗೆಂದು ಮನೆಗೆ ಬಂದಿದ್ದ ವಿಕ್ರಂ ಸೇನೆಯ ಒಂದೇ ಕರೆಗೆ ಓಗೊಟ್ಟು ಕಾರ್ಗಿಲ್ ಯುದ್ಧಕ್ಕೆ ಸಿದ್ಧರಾಗಿ ನಡೆದರು. ಪ್ರೀತಿ ಪ್ರೇಮ ಎಂದು ಲೌಕಿಕ ಭಾವನೆಗಳಲ್ಲಿ ಮುಳುಗುವ ವಯಸ್ಸಿನ ಯುವಕ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದರು.

ಕಾರ್ಗಿಲ್ ಯುದ್ಧದ ವೇಳೆ ಇಡೀ ಭಾರತ ಉಸಿರು ಬಿಗಿಹಿಡಿದು ಕಾಯುತ್ತಿತ್ತು. ಪಾಯಿಂಟ್ 4875 ಶಿಖರವನ್ನು ವಶಪಡಿಸಿಕೊಳ್ಳಲು ಸೇನೆ ಸೂವನೆ ನೀಡಿದಾಗ, ಇಡೀ ತಂಡವನ್ನು ತಮ್ಮೊಂದಿಗೆ ಕರೆದೊಯ್ದು ಇಡೀ ಶಿಖರವನ್ನು ವಶಪಡಿಸಿಕೊಳ್ಳುವುದರಲ್ಲಿ ಯಶಸ್ವಿಯಾದರು. ಬಳಿಕ ವಿಕ್ರಂ ಬಾತ್ರಾ ಶತ್ರು ಸೈನಿಕರಿಂದಲೇ ‘ಶೇರ್ ಷಾ’ ಎಂದು ಕರೆಸಿಕೊಂಡರು.

ಅವರ ಧೀರ ಪ್ರಯತ್ನಗಳು ಕಾರ್ಗಿಲ್ ಯುದ್ಧದಲ್ಲಿ ಭಾರತಕ್ಕೆ ತಮ್ಮ ಅಭೂತಪೂರ್ವ ಶೌರ್ಯವನ್ನು ಇಡೀ ವಿಶ್ವಕ್ಕೆ ತಿಳಿಸಿದರು. ಕ್ಯಾ. ಬಾತ್ರಾ, ತಮ್ಮ ತಂಡದ ಸಹ ಸೈನಿಕರ ಉತ್ಸಾಹ ಹೆಚ್ಚಿಸಲು ‘ಯೆ ದಿಲ್ ಮಾಂಗೆ ಮೋರ್’ ಎಂದು ಘೋಷಣೆ ಕೂಗುತ್ತಿದ್ದರು. ಎತ್ತರದ ಶಿಖರಗಳಲ್ಲಿ ಅಡಗಿದ್ದ ಪಾಕ್ ಸೈನಿಕರನ್ನು ಸದೆಬಡಿದ ವಿಕ್ರಂ ಬಾತ್ರಾ ಪೋಯಿಂಟ್ 5140 ಮತ್ತು 4875 ಗೆಲುವಿಗೆ ರವಾರಿಯಾದರು ಕ್ಯಾ ಶೇರ್ ಷಾ. 9 ಪಾಕಿಸ್ತಾನಿ ಸೈನಿಕರನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾದ ವಿಕ್ರಂ ಬಾತ್ರಾ ಶಿಖರಗಳನ್ನು ಭಾರತದ ವಶಕ್ಕೆ ಪಡೆದುಕೊಂಡರು.1999 ಜುಲೈ 7ರಂದು ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಕಿಸ್ತಾನದ ಗುಂಡುಗಳು ತಾಕಿ ‘ಜೈ ಮಾತಾದಿ’ ಎಂಬ ಘೋಷ ಕೂಗುತ್ತಾ ಭಾರತ ಮಾತೆಗೆ ಪ್ರಾಣಾರ್ಪಣೆ ಮಾಡಿದ ಶೂರ ಕ್ಯಾ. ವಿಕ್ರಂ ಬಾತ್ರಾ

ಭಾರತ ಧ್ವಜವನ್ನು ಕಾರ್ಗಿಲ್ ನಲ್ಲಿ ಏರಿಸಿ ಬರುವೆ ಅಥವಾ ಅದೇ ಧ್ವಜವನ್ನು ಹೊದ್ದು ಬರುವೆನೆಂದು ಪತ್ರ ಬರೆದಿದ್ದ ವಿಕ್ರಂ ಬಾತ್ರಾಗೆ ಇಂದು 46ರ ಜನ್ಮ ದಿನ. ಕ್ಯಾ. ವಿಕ್ರಂ ಬಾತ್ರಾ ಶೌರ್ಯಕ್ಕೆ, ದೇಶ ಪ್ರೇಮಕ್ಕೆ ಭಾರತ ಅವರಿಗೆ ಮರಣೋತ್ತರ ಪರಮ ವೀರ ಚಕ್ರವನ್ನು ನೀಡಿ ಗೌರವಿಸಿದರು.ಬಳಿಕ ಸರ್ಕಾರ ಶೌರ್ಯ ಪ್ರಶಸ್ತಿಗಳ ಪಟ್ಟಿಯಲ್ಲಿ ವಿಕ್ರಂ ಬಾತ್ರಾ ಅವರ ಹೆಸರನ್ನು ಸ್ಮರಣೀಯವಾಗಲು ಉಲ್ಲೇಖಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss