ಬೆಂಗಳೂರು: ಹೈಕೋರ್ಟ್ನ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ಅರುಣ್ ಶ್ಯಾಮ್ ಅವರನ್ನು ನೇಮಕ ಮಾಡಲಾಗಿದೆ.
ಅದರಂತೆ ಗುಲ್ಬರ್ಗಾ ಪೀಠದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿ ವೈ.ಎಚ್. ವಿಜಯಕುಮಾರ್ರನ್ನು ನೇಮಿಸಿ ರಾಜ್ಯಪಾಲರು ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಪೀಠದಲ್ಲಿ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿದ್ದು ಪ್ರಸ್ತುತ ನ್ಯಾಯಧೀಶರಾಗಿ ಬಡ್ತಿ ಪಡೆದಿರುವ ಆರ್. ನಟರಾಜ್ರ ಸ್ಥಾನಕ್ಕೆ ವಕೀಲ ಅರುಣ ಶ್ಯಾಮ್ ರನ್ನು ಮತ್ತು ಗುಲ್ಬರ್ಗಾ ಪೀಠದಲ್ಲಿ ಖಾಲಿ ಇದ್ದ ಹುದ್ದೆಗೆ ವಕೀಲ ವೈ.ಎಚ್. ವಿಜಯಕುಮಾರ್ರನ್ನು ನೇಮಕ ಮಾಡಲಾಗಿದೆ.
ಧಾರವಾಡ ಪೀಠದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಆಗಿರುವ ಧ್ಯಾನ್ ಚಿನ್ನಪ್ಪ ತಮ್ಮ ಹುದ್ದೆಯಲ್ಲೇ ಮುಂದುವರಿಯಲಿದ್ದಾರೆ ಎಂದು ರಾಜ್ಯಪಾಲರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.
ಅರುಣ್ ವಿಟ್ಲದ ಮಾದಕಟ್ಟೆ ಹಿ.ಪ್ರಾ.ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ಕಲ್ಲಡ್ಕ ಶ್ರೀರಾಮ ಪ್ರೌಢಶಾಲೆಯಲ್ಲಿ ಪ್ರೌಢಶಿಕ್ಷಣ, ವಿಟ್ಲದ ವಿಠಲ ಪ.ಪೂ.ಕಾಲೇಜಿನಲ್ಲಿ ಪಿಯುಸಿ, ವಿವೇಕಾನಂದ ಕಾಲೇಜು ಪುತ್ತೂರು ಇಲ್ಲಿ ಪದವಿ ಮತ್ತು ವಿವೇಕಾನಂದ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದವರು.ಶಿವಮೊಗ್ಗದ ನ್ಯಾಷನಲ್ ಲಾ ಕಾಲೇಜಿನಲ್ಲಿ ಎಲ್ಎಲ್ಎಂ ಪದವಿ ಪಡೆದಿದ್ದಾರೆ.ಪ್ರಕೃತ ಬೆಂಗಳೂರಿನ ಅಲಯನ್ಸ್ ಯುನಿರ್ವಸಿಟಿಯಲ್ಲಿ ಪಿ.ಎಚ್.ಡಿ.ಅಧ್ಯಯನ ನಡೆಸುತ್ತಿದ್ದಾರೆ.ಅವರು ಇತ್ತೀಚೆಗೆ ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯುನಿರ್ವಸಿಟಿಯ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ ನೇಮಕಗೊಂಡಿದ್ದರು. ಬೆಂಗಳೂರಿನ ಶಿವಾನಂದ ಸರ್ಕಲ್ ಮತ್ತು ಜುಡಿಷಿಯಲ್ ಲೇ ಔಟ್ನಲ್ಲಿ ಅರುಣ್ ಶ್ಯಾಮ್ ಅಸೋಸಿಯೇಟ್ಸ್ ಕಚೇರಿ ಹೊಂದಿದ್ದು, ಹೈಕೋರ್ಟಿನಲ್ಲಿ ಅನೇಕ ಪ್ರಮುಖ ಪ್ರಕರಣಗಳಲ್ಲಿ ನ್ಯಾಯವಾದಿಯಾಗಿ ಹೆಸರು ಮಾಡಿದ್ದಾರೆ.