ಹೈಕೋರ್ಟ್‌ ತಡೆ: ಹುಬ್ಬಳ್ಳಿ-ಅಂಕೋಲಾ ರೈಲ್ವೆ ಯೋಜನೆಗೆ ಮತ್ತೆ ಹಿನ್ನಡೆ

0
44

ಕಾರವಾರ: ಜಿಲ್ಲೆಯ ಜನರ ಬಹು ನಿರೀಕ್ಷಿತ ಹುಬ್ಬಳ್ಳಿ – ಅಂಕೋಲಾ ರೈಲ್ವೆ ಯೋಜನೆಗೆ ಹೈಕೋರ್ಟ್‌ ತಡೆ ನೀಡಿದೆ. ರಾಜ್ಯ ವನ್ಯಜೀವಿ ಮಂಡಳಿ ನಿರ್ಧಾರ ಆಧರಿಸಿ ಯೋಜನೆಗೆ ಕ್ರಮ ಕೈಗೊಳ್ಳುವಂತಿಲ್ಲ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ತನ್ನ ಮಧ್ಯಂತರ
ಆದೇಶದಲ್ಲಿ ತಿಳಿಸಿದೆ.
ಯೋಜನೆಗೆ ಅನುಮತಿ ನೀಡಿದ್ದ‌ ವನ್ಯಜೀವಿ ಮಂಡಳಿ ನಿರ್ಧಾರವನ್ನು ಪ್ರಶ್ನಿಸಿ ‘ಪ್ರಾಜೆಕ್ಟ್ ವೃಕ್ಷ ಫೌಂಡೇಶನ್’ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಇದನ್ನು ವಿಚಾರಣೆ ನಡೆಸಿದ ವಿಭಾಗೀಯ ನ್ಯಾಯಪೀಠ ಮಧ್ಯಂತರ ಆದೇಶ ನೀಡಿ‌ ಪ್ರತಿವಾದಿಗಳಾದ ಕೇಂದ್ರ ಸರಕಾರ, ರಾಜ್ಯ ಸರ್ಕಾರ ಮತ್ತು ವನ್ಯಜೀವಿ ಮಂಡಳಿಗೆ ನೋಟಿಸ್ ಜಾರಿಗೊಳಿಸಿದೆ.
ಕಳೆದ ಮಾರ್ಚ್ ‌ನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ 14ನೇ ವನ್ಯಜೀವಿ ಮಂಡಳಿ ಸಭೆಯಲ್ಲಿ ಪರಿಸರವಾದಿಗಳು ಮತ್ತು ಮಂಡಳಿಯ ಕೆಲ ಸದಸ್ಯರಿಂದ ತೀವ್ರ ವಿರೋಧಕ್ಕೊಳಗಾಗಿದ್ದ ಯೋಜನೆಗೆ ಗ್ರೀನ್ ಸಿಗ್ನಲ್ ನೀಡಲಾಗಿತ್ತು. ಪರಿಸರವಾದಿಗಳ ವಿರೋಧದ ಮಧ್ಯೆಯೂ ಯೋಜನೆ ಪರ ತೀರ್ಮಾನ ಕೈಗೊಳ್ಳಲಾಗಿತ್ತು. ಯೋಜನೆ ಬೆಂಬಲಿಸಿ ಕೇಂದ್ರಕ್ಕೆ ಶಿಫಾರಸು ಮಾಡಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು.‌
ಆದರೆ ಇದರ‌ ನಡುವೆ ಹೈಕೋರ್ಟ್ ತಡೆ ನೀಡಿರುವುದು ಯೋಜನೆಯ ಬಗ್ಗೆ ಕನಸ್ಸು ಕಾಣುತ್ತಿರುವು ಜಿಲ್ಲೆಯ ಜನರಿಗೆ ಮತ್ತೆ ಆತಂಕ‌ ಎದುರಾಗಿದೆ.

LEAVE A REPLY

Please enter your comment!
Please enter your name here