ಹೊಸದಿಲ್ಲಿ: ಮಹಾಮಾರಿ ಕೊರೋನಾ ವೈರಸ್ ನಿಂದ ಇಡೀ ವಿಶ್ವವೇ ಬಳಲುತ್ತಿದೆ. ಈ ಕುರಿತು 30 ರಾಷ್ಟ್ರಗಳು ಹೈಡ್ರಾಕ್ಸಿ ಕ್ಲೋರೋಕ್ವಿನ್ ಔಷಧಿ ರಫ್ತು ಮಾಡಬೇಕಾಗಿ ಭಾರತ ಸರ್ಕಾರದ ಮೇಲೆ ಒತ್ತಡ ಹೇರಿದೆ. ಈ ಒತ್ತಡಕ್ಕೆ ಭಾರತ ಸರ್ಕಾರ ಕೊರೋನಾ ವೈರಸ್ ಚಿಕಿತ್ಸೆಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ಮೇಲಿನ ಭಾಗಶ: ರಫ್ತು ನಿಷೇಧ ತೆರವುಗೊಳಿಸಿದೆ.
ಭಾರತ ದೇಶ ಕೊರೋನಾ ಸೋಂಕಿಗಾಗಿ ಮುಂಜಾಗ್ರತ ಕ್ರಮವಾಗಿ ಹೈಡ್ರಾಕ್ಸಿ ಕ್ಲೋರೋಕ್ವಿನ್ ನನ್ನು ರಫ್ತು ನಿರ್ಬಂಧನೆ ಹೇರಿತ್ತು, ಆದರೇ ವಿಶ್ವದಲ್ಲಿ ಹರಡಿರುವ ಕೊರೋನಾ ಸೋಂಕಿನಿಂದ ಅನೇಕ ರಾಷ್ಟ್ರಗಳು ಬಳಲುತ್ತಿದೆ. ಈ ಕುರಿತು ಚರ್ಚೆ ನಡೆಸಿದ ಭಾರತ ಸರ್ಕಾರ ಕೊರೋನಾದಿಂದ ತೀವ್ರ ಬಳಲುತ್ತಿರುವ ರಾಷ್ಟ್ರಗಳಿಗೆ ಹೈಡ್ರಾಕ್ಸಿ ಕ್ಲೋರೋಕ್ವಿನ್ ರಫ್ತು ಮಾಡಲು ನಿರ್ಧರಿಸಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಕೇಂದ್ರ ವಿದೇಶಾಂಗ ಇಲಾಖೆ, ಕೊರೋನಾ ಸೋಂಕಿಗೆ ಭಾರತದಲ್ಲಿ ಯಾವುದೇ ನಿರ್ಧಿಷ್ಠ ಔಷಧಿಗಳಿಲ್ಲ. ಮಲೇರಿಯಾ ವಿರೋಧಿ ಔಷಧಿ ಹೈಡ್ರಾಕ್ಸಿ ಕ್ಲೋರೋಕ್ವಿನ್ ನನ್ನು ಕೊರೋನಾ ಚಿಕಿತ್ಸೆಗೆ ಬಳಸಲಾಗುತ್ತಿದೆ. ವಿಶ್ವದ 190ಕ್ಕೂ ಹೆಚ್ಚು ದೇಶಗಳು ಕೊರೋನಾದಿಂದ ಬಳಲುತ್ತಿರುವ ಕಾರಣ ಭಾರತ ಸರ್ಕಾರ ಹೈಡ್ರಾಕ್ಸಿಕ್ಲೋರೋಕ್ವಿನ್ ನನ್ನು ರಫ್ತು ಮಾಡಲು ನಿರ್ಧರಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರೋನಾ ಸೋಂಕಿಗೆ ಔಷಧಿಯಾಗಿರುವ ಹೈಡ್ರಾಕ್ಸಿ ಕ್ಲೋರೋಕ್ವಿನ್ ಅನ್ನು ರಫ್ತು ಮಾಡಬೇಕೆಂದು ಮೋದಿಯವರಲ್ಲಿ ಮನವಿ ಮಾಡಿದ್ದೇನೆ. ಔಷಧಿ ರಫ್ತು ಮೇಲಿನ ನಿಷೇಧ ತೆರವುಗೊಳಿಸುವಂತೆ ಕೇಳಿದ್ದೇನೆ. ಭಾರತ ಔಷಧಿ ರಫ್ತು ಮಾಡದಿದ್ದರೆ, ನಮಗೆ ತೊಂದರೆ ಇಲ್ಲ. ಇದಕ್ಕೆ ಭಾರತಕ್ಕೆ ತಿರುಗೇಟು ನೀಡುತ್ತೇವೆ ಎಂದು ಹೇಳಿದ್ದಾರೆ.