Thursday, August 11, 2022

Latest Posts

ಹೈಬ್ರೀಡ್ ಕೊರೋನಾ ಆತಂಕ: ಬ್ರಿಟನ್’ನಿಂದ ಬೆಂಗಳೂರಿಗೆ ಬಂದ 200ಕ್ಕೂ ಹೆಚ್ಚು ಪ್ರಯಾಣಿಕರು

ಹೊಸದಿಗಂತ ಆನ್ ಲೈನ್ ಡೆಸ್ಕ್:

ಹೈಬ್ರೀಡ್ ಆತಂಕದ ನಡುವೆ ಇಂದು 243 ಪ್ರಯಾಣಿಕರು ಬ್ರಿಟನ್ ನಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ.

ಇಂದು ಬೆಳಗ್ಗೆ 4:30ರ ವೇಳೆಗೆ 243 ಪ್ರಯಾಣಿಕರು ಬೆಂಗಳೂರಿಗೆ ಬಂದಿಳಿದಿದ್ದು, ಎಲ್ಲರಿಗೂ ಆರ್ಟಿಪಿಸಿಆರ್ ಪರೀಕ್ಷೆ ನಡೆಸಲಾಗುತ್ತಿದ್ದು, ಇದು ಸುಮಾರು 5 ಗಂಟೆಗಳಾಗುತ್ತದೆ ಎಂದು ಆರೋಗ್ಯ ಇಲಾಖೆ ಮಾಹಿತಿ ತಿಳಿಸಿದೆ.

ಟೆಸ್ಟಿಂಗ್ ಗಾಗಿ 150 ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದ್ದು, ಕೊರೋನಾ ನೆಗಟಿವ್ ವರದಿ ಬಂದವರಿಗೆ ಕಡ್ಡಾಯ ಹೋಂ ಕ್ವಾರಂಟೈನ್ ಗೆ ಸೂಚಿಸಲಾಗಿದ್ದು, ಪಾಸಿಟಿವ್ ಬಂದವರನ್ನು ವಿಕ್ಟೋರಿಯಾ ಹಾಗೂ ಆಕಾಶ್ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗುತ್ತದೆ ಎಂದು ದೇವನಹಳ್ಳಿ ಟಿಹೆಚ್’ಒ ಡಾ. ಸಂಜಯ್ ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss