Tuesday, June 28, 2022

Latest Posts

ಹೈಬ್ರೀಡ್ ಕೊರೋನಾ ಭೀತಿ: ಅಂತಾರಾಷ್ಟ್ರೀಯ ಪ್ರವೇಶದ ಬಾಗಿಲು ಮುಚ್ಚಿದ ಸೌದಿ ಅರೇಬಿಯಾ

ಹೊಸದಿಗಂತ ಆನ್ ಲೈನ್ ಡೆಸ್ಕ್:

ಯುಕೆಯ ಹೈಬ್ರೀಡ್ ಕೊರೋನಾ ಭೀತಿಯಿಂದ ಸೌದಿ ಅರೇಬಿಯಾ ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧ ಹೇರಿದೆ.
ರೂಪಾಂತರಿತ ಕೊರೋನಾ ಹರಡುವಿಕೆಯ ವಿರುದ್ಧದ ಮುನ್ನೆಚ್ಚರಿಕೆ ಕ್ರಮದ ಭಾಗವಾಗಿ ಎರಡು ವಾರಗಳ ಕಾಲ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಎಲ್ಲಾ ಅಂತಾರಾಷ್ಟ್ರೀಯ ವಿಮಾನಗಳ ಹಾರಾಟ ನಿಷೇಧ ಜೊತೆಗೆ ಭೂ ಮತ್ತು ಸಮುದ್ರ ಮಾರ್ಗದ ಪ್ರವೇಶವನ್ನು ರದ್ದುಪಡಿಸಿರುವುದಾಗಿ ಸೌದಿ ಅರೇಬಿಯಾ ತಿಳಿಸಿದೆ.
ಇನ್ನು ಇಲ್ಲಿನ ನಾಗರಿಕರಲ್ಲದವರು ದೇಶಕ್ಕೆ ಬರುವ ಮುನ್ನ 14 ದಿನ ಹೊರಗಿರಬೇಕು. ಹಾಗೆ ಬರುವ ಮುನ್ನ ಕನಿಷ್ಠ ಒಂದು ಬಾರಿ ವೈದ್ಯಕೀಯ ಪರೀಕ್ಷೆಗೆ ಒಳಗಾಗಿರಬೇಕು ಎಂದು ಸಚಿವಾಲಯ ತಿಳಿಸಿದೆ. ಹಾಗೆಯೇ ಸೌದಿ ನಾಗರಿಕರು ಆಗಮಿಸಿದ ನಂತರ 14 ದಿನಗಳವರೆಗೆ ಕ್ವಾರಂಟೈನ್​ ಹಾಗೂ ಎರಡು ಕೋವಿಡ್ -19 ಪರೀಕ್ಷೆಗಳನ್ನು ಮಾಡಿಸಿಕೊಳ್ಳಬೇಕು ಎಂದು ಸೂಚನೆ ನೀಡಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss