ಹೊಸದಿಗಂತ, ಆನ್ ಲೈನ್ ಡೆಸ್ಕ್:
ಬ್ರಿಟನ್ ನಿಂತ ಬರುವ ಎಲ್ಲಾ ಪ್ರಯಾಣಿಕರಿಗೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಲಾಗುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಹೊಸ ಮಾರ್ಗಸೂಚಿ ಹೊರಡಿಸಿದೆ.
ದೇಶದಲ್ಲಿ ಹೈಬ್ರೀಡ್ ಕೊರೋನಾ ವ್ಯಾಪಕತೆಯ ಕುರಿತು ಆತಂಕ ಹೆಚ್ಚಾಗಿರುವ ಹಿನ್ನೆಲೆ ಜ.8ರಿಂದ ಜ.30ರವರೆಗೆ ಬ್ರಿಟನ್ ನಿಂದ ಭಾರತಕ್ಕೆ ಬರುವ ಎಲ್ಲಾ ಪ್ರಯಾಣಿಕರಿಗೂ ಕೊರೋನಾ ಪರೀಕ್ಷೆ ಕಡ್ಡಾಯವೆಂದು ಸರ್ಕಾರ ತಿಳಿಸಿದೆ.
ಡಿ.23ರಿಂದ ಬ್ರಿಟನ್ ಜ.7ರವರೆಗೆ ಬ್ರಿಟನ್ ನಿಂದ ಬರುವ ಎಲ್ಲಾ ವಿಮಾನಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಆದರೆ ಇದೀಗ ಜ.8ರಿಂದ ವಿಮಾನ ಸಂಚಾರ ಪುನರಾರಂಭಗೊಳ್ಳಲಿದೆ.
ಬ್ರಿಟನ್ ನಿಂದ ಬರುವ ಪ್ರತಿಯೊಬ್ಬರು ಪ್ರಯಾಣಿಸುವ 72 ಗಂಟೆಗಳ ಮುಂಚಿತವಾಗಿ ಮಾಡಿಸಿದ ಕೊರೋನಾ ನೆಗಟಿವ್ ವರದಿ ಪಡೆದಿರಬೇಕು ಎಂದು ತಿಳಿಸಲಾಗಿದೆ.