ಹೊಸದಿಗಂತ ವರದಿ, ಧಾರವಾಡ:
ಬ್ರಿಟನ್ ರೂಪಾಂತರ ವೈರಸ್ ಆತಂಕ ಮೂಡಿಸಿದ ಹಿನ್ನಲೆ ಜಿಲ್ಲೆಗೆ ನಿನ್ನೆ ಬ್ರಿಟನ್ ಸೇರಿ ಬೇರೆ-ಬೇರೆ ದೇಶಗಳಿಂದ 10 ಜನರು ಬಂದಿದ್ದು, ಮೂವರಿಗೆ ಶೋಧ ನಡೆಸಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದರು.
ಬುಧವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸದ್ಯ ಹತ್ತು ಜನರ ಪೈಕಿ ಏಳು ಜನರಿಗೆ ಕೋವಿಡ್ ತಪಾಸಣೆ ಮಾಡಿದೆ. ವರದಿ ಬರಬೇಕಿದೆ. ಅವರನ್ನು ಕ್ವಾರಂಟೈನ್ ಮಾಡಿ, ಉಳಿದ ಮೂವರನ್ನು ಪತ್ತೆ ಮಾಡುವ ಕಾರ್ಯ ನಡೆದಿದೆ ಎಂದರು.
ಸದ್ಯವನಾಪತ್ತೆಯಾದ ಜನರ ವಿಳಾಸ ಪೊಲೀಸ್ ಇಲಾಖೆಗೆ ನೀಡಿದ್ದು, ಶೋಧ ಕಾರ್ಯ ನಡೆದಿದೆ. ಹತ್ತು ಜನರಲ್ಲಿ ಇನ್ನು ಮೂವರು ಪತ್ತೆಯಾಗಿಲ್ಲ. ಜಿಲ್ಲಾಡಳಿತ ಪ್ರಯತ್ನ ನಡೆಸಿದೆ ಎಂದರು.
ನಿನ್ನೆಯವರೆಗೆ ಬಂದ 37 ಜನರಲ್ಲಿ ನಾಪತ್ತೆ ಇದ್ದ ಓರ್ವ ಕಲಬುರಗಿಯಲ್ಲಿವ ಮಾಹಿತಿ ಇದೆ. ಅಲ್ಲಿನ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ. ಅವರಿಗೆ ಅಲ್ಲಿಯೇ ಕೋವಿಡ್ ತಪಾಸಣೆ ನಡೆಸಿದೆ. ವರದಿ ಬರಬೇಕಿದೆ ಎಂದು ಹೇಳಿದರು.