Monday, September 28, 2020
Monday, September 28, 2020

Latest Posts

ಅಶೋಕ್ ಗಸ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ದಿವಂಗತ ಅಶೋಕ್ ಗಸ್ತಿ ಅವರ ರಾಯಚೂರು  ನಿವಾಸಕ್ಕೆ ಇಂದು ಭೇಟಿ ನೀಡಿ, ಅವರ ಮಡದಿ ಹಾಗೂ ಕುಟುಂಬಸ್ಥರಿಗೆ...

ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ| ಐದು ಮಂದಿ ಪ್ರತಿಭಟನಾಕಾರರ ಬಂಧನ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಸುಟ್ಟು ಹಾಕಿದೆ ಐವರನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇಂದು ದೆಹಲಿಯ ಇಂಡಿಯಾ ಗೇಟ್ ಸಮೀಪ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ...

ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ

ಬೆಂಗಳೂರು: ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಸೇರಿ ವಿವಿಧ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಯುತ್ತಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ರಾಜ್ಯಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದ್ದು,...

ಹೈ ಡೆನ್ಸಿಟಿ ಪ್ಲಾಂಟಿಂಗ್ ವಿಧಾನದಿಂದ ಬಾಳೆ ಕೃಷಿಯಲ್ಲಿ ಯಶಸ್ವಿಯಾದ ಶಿರಸಿ ಅಚ್ನಳ್ಳಿಯ ಸಚಿನ್ ಸತೀಶ್ ಭಟ್

ಸಾಮಾನ್ಯವಾಗಿ ಬಾಳೆ ಕೃಷಿಯನ್ನು ಒಂದೆರಡು ವರ್ಷಗಳಿಗೆ ಮಾಡಿ ಬಿಡುವವರೆ ಹೆಚ್ಚು. ಆದರೆ ಶಿರಸಿ ತಾಲೂಕಿನಅಚ್ನಳ್ಳಿಗ್ರಾಮದವರಾದ ಸಚಿನ್ ಸತೀಶ್ ಭಟ್‌ ಅವರು ಕಳೆದ 6 ವರ್ಷಗಳಿಂದ ಹೈ ಡೆನ್ಸಿಟಿ ಪ್ಲಾಂಟಿಂಗ್ ವಿಧಾನದಲ್ಲಿ ಬಾಳೆ ಕೃಷಿಯನ್ನು ಮಾಡುತ್ತಾ ಯಶಸ್ವಿಯಾಗಿದ್ದಾರೆ.
ಯುವಕೃಷಿಕರಾಗಿ ವೈಜ್ಞಾನಿಕ ಹಾಗೂ ವಿನೂತನತಂತ್ರಜ್ಞಾನವನ್ನು ಕೃಷಿಯಲ್ಲಿ ಅಳವಡಿಸಿಕೊಳ್ಳುವ ಸಚಿನ್‌ಅವರಿಗೆ 1918-19 ಧಾರವಾಡ ವಿಶ್ವವಿದ್ಯಾಲಯದಿಂದಯುವ ಕೃಷಿಕ ಪ್ರಶಸ್ತಿ ಕೂಡ ಒಲಿದು ಬಂದಿದೆ.
ಇವರು ಬಾಲ್ಯದಲ್ಲಿರುವಾಗಲೇ ತಂದೆಯ ಮಾರ್ಗದರ್ಶನದಲ್ಲಿ ತೋಟದ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದರು. ಇವರು ಬೆಳೆದ ಹಳ್ಳಿ ಪರಿಸರ ಇವರನ್ನು ಹೊಸ ಹೊಸ ಪ್ರಯೋಗಗಳೊಂದಿಗೆ ಪೂರ್ಣ ಕೃಷಿಯಲ್ಲಿ ತೊಡಗಿಸಿಕೊಳ್ಳಲು ಪ್ರೇರೆಪಿಸಿತು. ಇವರು ಬಿ.ಕಾಮ್ ಹಾಗೂ ಎಲ್.ಎಲ್.ಬಿಯನ್ನು ಶಿರಸಿಯಲ್ಲಿ ಮುಗಿಸಿ ವಿನೂತನ ತಂತ್ರಜ್ಞಾನಹೈ ಡೆನ್ಸಿಟಿಪ್ಲಾಂಟಿಂಗ್‌ ಟ್ರೆಂಚ್ ವಿಧಾನದಲ್ಲಿ ಬಾಳೆಯನ್ನು ಬೆಳೆಯುತ್ತಾ ಪ್ರಗತಿಪರ ರೈತರಾಗಿ ಗಮನ ಸೆಳೆಯುತ್ತಿದ್ದಾರೆ. ಈ ವಿನೂತನಹೈ ಡೆನ್ಸಿಟಿ ಪ್ಲಾಂಟಿಂಗ್ವಿ ಧಾನವನ್ನು ICAR-NRCB ತಿರುಚಿರಾಪಳ್ಳಿಯವರು ಅಭಿವೃದ್ಧಿ ಪಡಿಸಿದ್ದಾರೆ. ಈ ವಿಧಾನದಿಂದ ಸೀಮಿತವಾದ ಭೂಮಿಯಲ್ಲಿ ಹೆಚ್ಚಿನ ಇಳುವರಿ ಗಳಿಸಬಹುದು ಎಂದು ಹೇಳುತ್ತಾರೆ. ಈ ವಿಧಾನದಿಂದರೂ ಟ್‌ಡೆನ್ಸಿಟಿ ಹೆಚ್ಚಿರುವದರಿಂದ ಬಾಳೆ ಗಿಡಗಳು ನೀರು ಮತ್ತುಗೊಬ್ಬರವನ್ನು ಪರಿಣಾಮಕಾರಿಯಾಗಿ ಉಪಯೋಗಿಸಿಕೊಳ್ಳುತ್ತವೆ. ರಭಸದ ಗಾಳಿಯನ್ನು ತಡೆದುಕೊಳ್ಳುತ್ತವೆ.

ಇವರ ಒಟ್ಟೂ 16 ಎಕರೆ ಕೃಷಿಭೂಮಿಯಲ್ಲಿ 10 ಎಕರೆಯಲ್ಲಿ ಅಡಿಕೆ ಹಾಗೂ ಕಾಳುಮೆಣಸಿದೆ. 5 ಎಕರೆಯಲ್ಲಿ ಬಾಳೆಯನ್ನು ನೆಡಲಾಗಿದೆ. ಸಾಮಾನ್ಯವಾಗಿ 1 ಎಕರೆ ಕೃಷಿ ಭೂಮಿಯಲ್ಲಿ 6×6 ಅಡಿ ಅಂತರ ಕೊಟ್ಟು 1200 ಬಾಳೆ ಸಸಿಗಳನ್ನು ನೆಡಬಹುದು ಹಾಗೂ 10 ತಿಂಗಳಲ್ಲಿ ಬೆಳೆಯನ್ನು ಕೊಯ್ಲು ಮಾಡಬಹುದು. ಈ ವಿಧಾನದಿಂದ 6×5 ಅಡಿ ಅಂತರ ಕೊಟ್ಟು 1800 ಸಸಿಗಳನ್ನು ನೆಟ್ಟು 12-14 ತಿಂಗಳಲ್ಲಿ ಉತ್ತಮಗುಣಮಟ್ಟದ ಇಳುವರಿಯನ್ನು ಗಳಿಸಬಹುದು. ಹತ್ತಿರದಗಿಡಗಳು ತಮ್ಮನ್ನು ರಭಸದ ಗಾಳಿಯಿಂದ ರಕ್ಷಿಸಿಕೊಳ್ಳುತ್ತವೆ. 1800  ಗಿಡಗಳಿಗಿಂತ ಹೆಚ್ಚು ಗಿಡಗಳನ್ನು ಹೈ ಡೆನ್ಸಿಟಿ ಪ್ಲಾಂಟಿಂಗ್ವಿಧಾನದಲ್ಲಿ ನೆಟ್ಟಿದರೆ ಕೇವಲ 2 ವರ್ಷ ಫಸಲನ್ನು ಕೊಯ್ಲು ಮಾಡಬಹುದು. ಮರಿಗಳ ಸಂಖ್ಯೆ ಜಾಸ್ತಿಯಾಗಿ ತೊಂದರೆಯಾಗಬಹುದು ಎಂದುಸಚಿನ್‌ಅವರುಹೇಳುತ್ತಾರೆ.ಸುಮಾರು ೧೮೦೦ ಸಸಿಗಳನ್ನು ನೆಟ್ಟರೆ೪ ವರ್ಷದತನಕವೂ ಬೆಳೆಗಳನ್ನು ಕೊಯ್ಲು ಮಾಡಬಹುದು.ಈ ವಿಧಾನದಲ್ಲಿ ಅಂಗಾಶ ಕೃಷಿ ಮಾಡಿದ ಗಿಡಗಳನ್ನು ನೆಡುವದು ಉತ್ತಮ. ಸಾಮಾನ್ಯವಾಗಿ ಈ ವಿಧಾನದಲ್ಲಿ ಪುಟ್ಟಬಾಳೆ, ಜಿ-ನೈನ್ ಹಾಗೂ ಏಲಕ್ಕಿ ಬಾಳೆಯನ್ನು ಬೆಳೆಯುತ್ತಾರೆ. ರೋಗ ನಿರೋದಕ ಶಕ್ತಿ, ಗಾಳಿರಭಸವನ್ನು ತಡೆದುಕೊಳ್ಳುವ ಶಕ್ತಿ ಪುಟ್ಟಬಾಳೆ, ಏಲಕ್ಕಿ ಬಾಳೆಗೆ ಹೋಲಿಕೆ ಮಾಡಿದರೆ ಜಿ-ನೈನ್ ಗೆ ಜಾಸ್ತಿ ಇದೆ. ಇಳುವರಿ ಎಲ್ಲದಕ್ಕು ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಬಾಳೆ ಕೃಷಿಯಲ್ಲಿ ಲಾಭಗಳಿಸಲು ಇದು ಅನುಕೂಲವಾದ ವಿಧಾನ ಎಂದು ಸಚಿನ್‌ ಅವರು ಹೇಳುತ್ತಾರೆ. ಕಳೆದ ವರ್ಷ ಇವರಿಗೆ 5 ಎಕರೆ ಬಾಳೆ ಕೃಷಿಯಿಂದ ಸುಮಾರು 180 ಟನ್ ಅಷ್ಟು ಇಳುವರಿ ದೊರೆತಿದೆ. ಎರಡು ವರ್ಷದ ಹಿಂದೆಜೂನ್ 2 ನೇ ವಾರದಲ್ಲಿ ಜೈನ್‌ ಕಂಪನಿಯ ಅಂಗಾಶ ಕೃಷಿ ಮಾಡಿದ ಗಿಡಗಳನ್ನುನೆಟ್ಟಿದ್ದಾರೆ. ಈ ವರ್ಷ ಜೂನ್‌ನಲ್ಲಿ ಇವರಿಗೆ ಬಾಳೆಯ 2 ನೇ ಫಸಲು ದೊರೆಯಲಿದೆ. ಅಂಗಾಶ ಮಾಡಿದ ಸಸಿಗಳಿಂದ ಹೆಚ್ಚಿನ ಇಳುವರಿ ಸಿಗಬಹುದು ಎಂದು ಹೀಗಾಗಲೇ ರುಜುವಾತಾಗಿದೆ. ಬಾಳೆ ಗಿಡಗಳನ್ನು ನೆಡುವ 10 ದಿನ ಮುಂಚಿತವಾಗಿ ಸುಣ್ಣವನ್ನು ಹಾಕುತ್ತಾರೆ. ಹೀಗೆ ಮಾಡುವದರಿಂದ ಮಣ್ಣಿನ ಪಿಎಚ್ ಪ್ರಮಾಣವನ್ನು ಸರಿಪಡಿಸುತ್ತದೆ. ಇದಲ್ಲದೇ ಕ್ಯಾಲ್ಸಿಯಮ್, ಮೆಗ್ನಿಷಿಯಮ್‌ ಅಂಶಗಳು ಕೂಡ ಮಣ್ಣಿಗೆ ಸೇರುತ್ತದೆ. ಗುಣಿಗಳಲ್ಲಿ ಬಾಳೆ ಗಿಡಗಳನ್ನು ನೆಡುವಾಗ ಹಟ್ಟಿಗೊಬ್ಬರ ,ಮಣ್ಣುಗಳ ಜೊತೆರಾಕ್ ಪೊಸ್ಪೇಟ್‌ನ್ನು ಹಾಕಿ ನೆಟ್ಟಿದ್ದಾರೆ. ಮೊದಲ ಬಾರಿಗೆ ಬಾಳೆ ಗಿಡಗಳನ್ನು ನೆಟ್ಟಾಗ ಬಾಳೆ ಗಿಡಗಳು ಸಣ್ಣವಿರುವದರಿಂದ ಅಲ್ಲಿ ಸೆಣಬನ್ನು ಬೆಳೆಸಿದ್ದರು. ಹೀಗೆ ಮಾಡುವದರಿಂದ ಮಣ್ಣಿನಲ್ಲಿ ಸಾರಜನಕ ಸೇರಲ್ಪಡುತ್ತದೆ. ನೆಟ್ಟ ಸೆಣಬಿನ ಗಿಡಗಳು 2 ಫೀಟ್‌ ಅಷ್ಟು ಎತ್ತರವಾದಾಗ ಅವುಗಳನ್ನು ಕಡಿದು ಬಾಳೆಗಿಡಗಳಿಗೆ ಮುಚ್ಚಿಗೆ (ಮಲ್ಚಿಂಗ್) ಮಾಡಿದ್ದಾರೆ. ನೀರಾವರಿಗೆ ಇನ್‌ಲೈನ್‌ ಡ್ರಿಪ್ಪಿಂಗ್‌ನ್ನು ಅಳವಡಿಸಲಾಗಿದೆ. ಪ್ರತಿವಾರಕ್ಕೊಮ್ಮೆ ಪರ್‍ಟಿಗೇಷನ್ ವಿಧಾನದ ಮೂಲಕ ನೀರು, ವಾಟರ್ ಸೊಲ್ಯುಬಲ್‌ ಎನ್.ಪಿ.ಕೆ ಗೊಬ್ಬರವನ್ನುಕೊಡುತ್ತಿದ್ದಾರೆ. ಎನ್.ಪಿ.ಕೆ ಕೊಡುವದರಿಂದ ಒಳ್ಳೆಯ ಇಳುವರಿ ಪಡೆಯಲು ಸಾಧ್ಯವಿದೆ. ಪ್ರತಿ ತಿಂಗಳಿಗೊಮ್ಮೆ ಬಾಳೆ, ಅಡಿಕೆಗೆಕೂಡ ವೇಸ್ಟ್‌ ಡಿಕಂಪೊಸರ್ ನ್ನುಕೊಡುತ್ತಿದ್ದಾರೆ. ಕೃಷಿ ಭೂಮಿಯಮಣ್ಣಿನಗುಣಮಟ್ಟವನ್ನು ಪರೀಕ್ಷೆ ಮಾಡಿಸಿ ಸೂಕ್ತವಾದ ಮೈಕ್ರೊನುಟ್ರಿಯಂಟ್ಸ್‌ಗಳನ್ನು ಆಗಾಗ ಕೊಡುತ್ತಿರುತ್ತಾರೆ. ಗಿಡ ನೆಟ್ಟು 2 ತಿಂಗಳಾದ ನಂತರ ಹುಟ್ಟುವ ಮರಿಸಸಿಗಳನ್ನು ತೆಗೆಯುತ್ತಿರಬೇಕು. ತಾಯಿಗಿಡಕ್ಕೆ ಸಿಗುವ ಪೋಷಕಾಂಶಗಳು ಪೋಲಾಗುವದನ್ನು ಕಡಿಮೆಮಾಡಬಹುದು. ಪೂರ್ಣವಾಗಿ ಒಣಗಿದ ಬಾಳೆ ಎಲೆಗಳನ್ನು ಕೀಟಗಳ ನಿಯಂತ್ರಣಕ್ಕೆತೆಗೆದು ಅವುಗಳನ್ನು ಮುಚ್ಚಿಗೆಗೆ (ಮಲ್ಚಿಂಗ್) ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಗಿಡಗಳು ಅವಾಗಿಯೇ ರೋಗಗಳನ್ನು ನಿಯಂತಣ ಮಾಡಿಕೊಳ್ಳುತ್ತಿರುತ್ತವೆ. ರೈತರು ಅದನ್ನು ಗಮನಿಸುತ್ತಿರಬೇಕು. ಕೃಷಿಭೂಮಿಯಲ್ಲಿ ಮೈಕ್ರೊನೂಟ್ರಿಯಂಟ್ಸ್‌ಗಳು ಸರಿಯಾಗಿ ಇದ್ದರೆ ಕೀಟನಾಶಕ ಅವಶ್ಯಕತೆ ಬೀಳುವದಿಲ್ಲ . ರೋಗ ತೀವ್ರವಾದರೆ ಮಾತ್ರ ಕೀಟನಾಶವನ್ನು ಸಿಂಪಡಿಸುತ್ತೇನೆ ಎಂದು ಸಚಿನ್‌ ಅವರು ಹೇಳುತ್ತಾರೆ. ತಾಯಿ ಗಿಡ ನೆಟ್ಟು 12ನೇ ತಿಂಗಳಿಗೆ ಹುಟ್ಟಿದ ಮರಿಸಸಿಗಳನ್ನು ಮುಂದಿನ ಬೆಳೆಗಾಗಿ ಹಾಗೆ ಬಿಡುತ್ತಾರೆ. ಸಾಮಾನ್ಯವಾಗಿ ಅಂಗಾಶ ಕೃಷಿ ಮಾಡಿದ ಬಾಳೇ ಸಸಿಗಳನ್ನು ನೆಡುವದರಿಂದಎಲ್ಲ ಗಿಡಗಳು ಒಂದೇ ಅವಧಿಗೆ ಬೆಳೆಯನ್ನು ಕೊಡುತ್ತವೆ.ಬಾಳೆ ಕೊನೆಗಳು ಭಾರಇರುವದರಿಂದಬಾಳೆ ಮರಗಳಿಗೆ ತೊಂದರೆಯಾಗದಂತೆಪ್ಲಾಸ್ಟಿಕ್ ಹಗ್ಗಗಳನ್ನು ಬಳಸಿ ಕಟ್ಟಲಾಗುತ್ತದೆ. ಇವರು ವ್ಯಾಪಾರಿಗಳ ಜೊತೆ ಮುಂಚಿತವಾಗಿಯೇ ಕೊಟ್ರಾಕ್ಟ್‌ಪಾರ್ಮಿಂಗ್ ಮೂಲಕ ಆ ವರ್ಷದ ಬೆಳೆಗೆ ದರವನ್ನು ನಿಗಧಿಸಿಪಡಿಸಿಕೊಂಡಿರುತ್ತಾರೆ. ಈ ತರಹ ಬೆಳೆ ಕೊಯ್ಲಿನ ಮುಂಚೆಯೇ ಬೆಲೆಯನ್ನು ನಿಗಧಿಸಿಪಡಿಸಿಕೊಡಿರುವದರಿಂದ ಬೆಳೆಯ ದರ ಕಡಿಮೆಯಾಗುವಾಗ ಅಪಾಯ ಕಡಿಮೆ ಎಂದು ಹೇಳುತ್ತಾರೆ.
ಅವರ 10 ಎಕರೆ ಅಡಿಕೆ ತೋಟದಲ್ಲಿ 6 ಎಕರೆ ಹಳೆ ಅಡಿಕೆ ತೋಟವಿದೆ. 4 ಎಕರೆ ಹೊಸದಾಗಿ ಅಡಿಕೆ ತೋಟವನ್ನು ಮಾಡಿದ್ದಾರೆ. ಅದರಲ್ಲಿ ಅವರು ಮೊದಲು ಬಾಳೆಯನ್ನು ಬೆಳೆದು 4 ವರ್ಷ ಫಸಲನ್ನು ಪಡೆದಿದ್ದರು. ಈಗ ಇವರು ಹೊಸ ಅಡಿಕೆ ತೋಟದಲ್ಲಿ ಅಡಿಕೆ ಗಿಡಗಳನ್ನು ಹಾಕಿ 3 ವರ್ಷಗಳಾಗಿವೆ. ಅಡಿಕೆ ಕೊಯ್ಲು ಮಾಡಬೇಕೆಂದರೆ ಗಿಡಗಳಿಗೆ ಕನಿಷ್ಟ 7-8 ವರ್ಷಗಳಾಗಬೇಕು. ಕಳೆ ಬೆಳೆಯುದನ್ನು ಕಡಿಮೆ ಮಾಡಲು ಅಲ್ಲಿ ಮಿಶ್ರ ಬೆಳೆಯಾಗಿ ಅರಿಶಿನವನ್ನು ಬೆಳೆಯುತ್ತಿದ್ದಾರೆ. ಈ ಅರಿಶಿನ, ಶುಂಠಿ ಬೆಳೆಗಳ ಅವಧಿ 1 ವರ್ಷ. ಅಡಿಕೆ ಗಿಡಗಳ ನೀರು ಬಿದ್ದು ಶುಂಠಿಗೆ ಕೊಳೆ ರೋಗ ಬರುವ ಸಾಧ್ಯತೆ ಜಾಸ್ತಿ ಇರುವದರಿಂದ ಇವರು ತಮ್ಮ ಹೊಸ ಅಡಿಕೆ ತೋಟದಲ್ಲಿ 1 ಎಕರೆಗೆ ಸುಮಾರು 6 ಕ್ವಿಂಟಲ್ ಅರಿಶಿನವನ್ನು ನಾಟಿಮಾಡಿ ಮಾಡಿದ್ದಾರೆ. ಗದ್ದೆಯ ಜಾಗದಲ್ಲಿ ಅಡಿಕೆ ತೋಟವನ್ನು ಮಾಡಿದರೆ ಕೆಲವು ಸಲ ಬೇರು ಹುಳುಗಳ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅರಿಸಿನ ಆಂಟಿಬೈಯೊಟಿಕ್‌ ಇರುವದರಿಂದ ಬೇರು ಹುಳುಗಳ ಸಮಸ್ಯೆಯನ್ನು ತಗ್ಗಿಸಬಹುದು ಎಂದು ಹೇಳುತ್ತಾರೆ. ಬೇರುಹುಳುಗಳ ಸಮಸ್ಯೆ ಬರಬಾರದೆಂದು ಇವರು ತಮ್ಮ ತೋಟಗಳಿಗೆ ಅಂಡರ್‌ಗ್ರೌಂಡ್‌ ಡ್ರೇನೆಜ್ ವ್ಯವಸ್ಥೆಯನ್ನು ಅಳವಡಿಸಿಕೊಂಡಿದ್ದಾರೆ.
ಇವರು ನೀರಾವರಿಗೆ ಸುಮಾರು 4 ಲಕ್ಷ ನೀರನ್ನು ಒಮ್ಮೆ ಶೇಖರಣೆ ಮಾಡುವಂತಹ ವಾಟರ್‌ಟ್ಯಾಂಕ್ ನ್ನು ನಿರ್ಮಿಸಿಕೊಂಡಿದ್ದಾರೆ. ಇವರ ಕೃಷಿಭೂಮಿಯಲ್ಲಿರುವ 4 ಬೊರ್‌ವೆಲ್‌ಗಳಿಂದ ನೀರನ್ನು ಈ ಟ್ಯಾಂಕ್‌ನಲ್ಲಿ ಶೇಖರಣೆ ಮಾಡುತ್ತಾರೆ. ಈ ಟ್ಯಾಂಕಿನಲ್ಲಿ ಇವರು ಕಳೆದ ವರ್ಷ 400 ಮೀನಿನ ಮರಿಗಳನ್ನು ಸಾಕಿದ್ದರು. ಅವುಗಳಿಗೆ 2 ದಿನಗಳಿಗೊಮ್ಮೆ ಅಕ್ಕಿ ದೂಳು ಹಾಗೂ ಇನ್ನಿತರಕೆಟಲ್ ಪೀಡ್ ನ್ನು ಹಾಕುತ್ತಿದ್ದರು. ಈ ವರ್ಷಸುಮಾರು 300 ಕೆಜಿಯಷ್ಟು ಮೀನುದೊರೆತಿದೆ. ಈ ತರಹದ ದೊಡ್ಡದಾದ ಶೇಖರಣಾ ಟ್ಯಾಂಕಿನಲ್ಲಿ ಮೀನುಗಳನ್ನು ಸಾಕುವದರಿಂದ ನೀರು ಸ್ವಚ್ಛವಾಗಿರುತ್ತದೆ ಹಾಗೂ ಇದನ್ನು ಒಂದು ಪರ್ಯಾಯ ಕೃಷಿಯನ್ನಾಗಿ ಕೂಡ ಮಾಡಿಕೊಳ್ಳಬಹುದು ಎಂದು ಹೇಳುತ್ತಾರೆ. ಹಾಗೆ ವರ್ಷಕ್ಕೆ ಸುಮಾರು 10 ಕೋಟಿ ಲೀಟರ್ ನೀರು ಇಂಗುವಷ್ಟು ಇಂಗುಗುಂಡಿಯನ್ನು ನಿರ್ಮಿಸಿಕೊಂಡಿದ್ದಾರೆ.
ಇದಲ್ಲದೇ ಇವರು ಜರ್ಸಿ ಹಾಗೂ ಎಚ್.ಎಪ್‌ತಳಿಯ ಸುಮಾರು ೧೦ ದನಕರುಗಳನ್ನು ಸಾಕುತ್ತಿದ್ದಾರೆ.ಪ್ರತಿ ದಿನ ೫೦ ಲೀಟರ್ ನಷ್ಟು ಹಾಲನ್ನುಡೇರಿಗೆಕೊಡುತ್ತಾರೆ. ಇವರು ತಮ್ಮ ತೆಂಗಿನತೋಟದಲ್ಲಿ ತೆಂಗಿನ ಮರಗಳ ಮಧ್ಯ ಹಾಗೂ ತೋಟದ ಅಂಚಿನಲ್ಲಿ ಮಾವು, ಕಿತ್ತಳೆ, ಬೆಣ್ಣೆ ಹಣ್ಣು, ಮೂಸಂಬಿ, ಅಪ್ಪೆ ಮಿಡಿ, ಸಕ್ಕರೆಕಂಚಿ, ಪೇರಲೆ, ಹಲಸು, ಮುರುಗಲು, ದಾಳಿಂಬೆ, ಚಿಕ್ಕುಗಳನ್ನು ಬೆಳೆಸಿದ್ದಾರೆ. ಈ ತೆಂಗಿನ ತೋಟದಲ್ಲಿ ಮಿಶ್ರ ಬೆಳೆಯಾಗಿ ಕಬ್ಬನ್ನುಕೂಡ ಬೆಳೆಯುತ್ತಿದ್ದು ಕಳೆದ ವರ್ಷ ಸುಮಾರು 1000 ಕೆಜಿಯಷ್ಟು ಬೆಲ್ಲವನ್ನು ಮಾಡಿದ್ದಾರೆ. ಇವರು ತಮ್ಮ ಕೃಷಿ ಭೂಮಿಯಗಡಿಗೆ ಮಂಗನ ಕಾಟವನ್ನು ಕಡಿಮೆಗೊಳಿಸಲು ಬಲೆಯನ್ನು ಹಾಕುತ್ತಾರೆ. ಕೃಷಿ ಕೆಲಸಗಳನ್ನು ಸುಲಭವಾಗಿಸಿಕೊಳ್ಳಲು ತಮ್ಮ ತೋಟದ ಮಧ್ಯ ವಾಹನಗಳು ಹೋಗುವಂತೆದಾರಿಯನ್ನು ನಿರ್ಮಿಸಿಕೊಂಡಿದ್ದಾರೆ. ಅದಲ್ಲದೇ ಟ್ರಾಕ್ಟರ್, ಅಡಿಕೆ ಸುಲಿಯುವ ಯಂತ್ರ ಹೀಗೆ ನೂತನ ಯಂತ್ರೋಪಕರಣಗಳನ್ನು ಬಳಸುತ್ತಿದ್ದಾರೆ. ಅಡಿಕೆ ಸುಲಿಯುವಯಂತ್ರ ಚಾಲಿಗೆ 100 % ಹಾಗೂ ಹಸಿ ಅಡಿಕೆಗೆ 70% ಯಶಸ್ಸಾಗಿದೆ ಎಂದು ಹೇಳುತ್ತಾರೆ. ತಮ್ಮ ಕೆಲಸಗಾರರಿಗೆ ಇವರು ದಿನಗೂಲಿಯ ಬದಲು ತಿಂಗಳು ಸಂಬಳವನ್ನು ಕೊಡುತ್ತಿದ್ದಾರೆ. ಈರೀತಿ ಮಾಡುವದರಿಂದ ಕಾರ್ಮಿಕ ತೊಂದರೆಯನ್ನು ಕಡಿಮೆಯಾಗಿಸಬಹುದು ಎನ್ನುತ್ತಾರೆ. ಹೀಗೆ ಸಚಿನ್‌ ಅವರು ಅಡಿಕೆ ಮತ್ತು ಬಾಳೆ ಕೃಷಿಯಲ್ಲಿ ಹೆಚ್ಚಿನ ಆದಾಯಗಳಿಗೆ ಯಾಗುವಂತಹ ಕ್ರಮಗಳನ್ನು ಅನುಸರಿಸಿ ಯಶಸ್ವಿಯಾಗುತ್ತಿದ್ದಾರೆ. ಕೃಷಿಯಲ್ಲಿ ವಿಭಿನ್ನವಾಗಿ ಯೋಚಿಸಿ ಹೊಸ ತಾಂತ್ರಿಕತೆಗಳನ್ನು ಅಳವಡಿಸಿಕೊಂಡರೆ ಕೃಷಿ ಲಾಭದಾಯಕವಾಗುತ್ತದೆ ಎಂದು ಯುವ ಕೃಷಿಕರಾದ ಸಚಿನ್‌ ಅಂತವರು ರುಜುವಾತು ಮಾಡಿದ್ದಾರೆ.

  • ಮಧುರಾ ಕೂಡಗಟ್ಟಿಗೆ

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Latest Posts

ಅಶೋಕ್ ಗಸ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ದಿವಂಗತ ಅಶೋಕ್ ಗಸ್ತಿ ಅವರ ರಾಯಚೂರು  ನಿವಾಸಕ್ಕೆ ಇಂದು ಭೇಟಿ ನೀಡಿ, ಅವರ ಮಡದಿ ಹಾಗೂ ಕುಟುಂಬಸ್ಥರಿಗೆ...

ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ| ಐದು ಮಂದಿ ಪ್ರತಿಭಟನಾಕಾರರ ಬಂಧನ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಸುಟ್ಟು ಹಾಕಿದೆ ಐವರನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇಂದು ದೆಹಲಿಯ ಇಂಡಿಯಾ ಗೇಟ್ ಸಮೀಪ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ...

ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ

ಬೆಂಗಳೂರು: ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಸೇರಿ ವಿವಿಧ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಯುತ್ತಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ರಾಜ್ಯಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದ್ದು,...

ಕೃಷಿ ಮಸೂದೆ ವಿರೋಧಿಸಿ ಇಂಡಿಯಾ ಗೇಟ್ ನಲ್ಲಿ ಟ್ರ್ಯಾಕ್ಟರ್‌ಗೆ ಬೆಂಕಿ ಹಚ್ಚಿದ ಯುವ ಕಾಂಗ್ರೆಸ್ ಕಾರ್ಯಕರ್ತರು

ಹೊಸದಿಲ್ಲಿ: ದೆಹಲಿಯ ಇಂಡಿಯಾ ಗೇಟ್ ಹತ್ತಿರ ಕೃಷಿ ಮಸೂದೆ ವಿರೋಧಿಸಿ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಟ್ರಾಕ್ಟರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿ ಬೆಂಕಿ ನಂದಿಸಲು ಪೊಲೀಸರ ತಂಡ...

Don't Miss

ಅಶೋಕ್ ಗಸ್ತಿ ಅವರ ನಿವಾಸಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಭೇಟಿ

ರಾಯಚೂರು: ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು  ಇತ್ತೀಚೆಗೆ ನಿಧನರಾದ ರಾಜ್ಯಸಭಾ ಸದಸ್ಯ ದಿವಂಗತ ಅಶೋಕ್ ಗಸ್ತಿ ಅವರ ರಾಯಚೂರು  ನಿವಾಸಕ್ಕೆ ಇಂದು ಭೇಟಿ ನೀಡಿ, ಅವರ ಮಡದಿ ಹಾಗೂ ಕುಟುಂಬಸ್ಥರಿಗೆ...

ಇಂಡಿಯಾ ಗೇಟ್ ನಲ್ಲಿ ಪ್ರತಿಭಟನೆ| ಐದು ಮಂದಿ ಪ್ರತಿಭಟನಾಕಾರರ ಬಂಧನ

ಹೊಸದಿಲ್ಲಿ: ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಕೃಷಿ ಮಸೂದೆ ವಿರೋಧಿಸಿ ಟ್ರ್ಯಾಕ್ಟರ್ ಸುಟ್ಟು ಹಾಕಿದೆ ಐವರನ್ನು ಪೊಲೀಸರು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದರು. ಇಂದು ದೆಹಲಿಯ ಇಂಡಿಯಾ ಗೇಟ್ ಸಮೀಪ ನಡೆದ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ...

ಕರ್ನಾಟಕ ಬಂದ್: ಸಿಎಂ ಯಡಿಯೂರಪ್ಪ ತುರ್ತು ಸುದ್ದಿಗೋಷ್ಠಿ

ಬೆಂಗಳೂರು: ಕೃಷಿ ಮತ್ತು ಎಪಿಎಂಸಿ ತಿದ್ದುಪಡಿ ಕಾಯ್ದೆಗಳು ಸೇರಿ ವಿವಿಧ ತಿದ್ದುಪಡಿ ಕಾಯ್ದೆ ವಿರೋಧಿಸಿ ಇಂದು ಕರ್ನಾಟಕ ಬಂದ್ ನಡೆಯುತ್ತಿದ್ದು, ಸಿಎಂ ಬಿ.ಎಸ್. ಯಡಿಯೂರಪ್ಪ ತುರ್ತು ಸುದ್ದಿಗೋಷ್ಟಿ ಕರೆದಿದ್ದಾರೆ. ರಾಜ್ಯಾದ್ಯಂತ ರೈತರ ಪ್ರತಿಭಟನೆ ನಡೆಯುತ್ತಿದ್ದು,...
error: Content is protected !!