ಹೊಸದಿಗಂತ ಆನ್ ಲೈನ್ ಡೆಸ್ಕ್:
ಬ್ರಿಟನ್ ನಲ್ಲಿ ಹೈ ಬ್ರೀಡ್ ಕೊರೋನಾ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮತ್ತೆ ಈಗಾಗಲೇ ಲಾಕ್ ಡೌನ್ ಘೋಷಣೆ ಮಾದಲಾಗಿದ್ದು, ಫೆಬ್ರವರಿ 20 ರವರೆಗೆ ಎಲ್ಲಾ ಕಾನ್ಸುಲರ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಯುಕೆ ಭಾರತೀಯ ರಾಯಭಾರ ಕಚೇರಿ ತಿಳಿಸಿದೆ.
ಕೋವಿಡ್-19 ಟಯರ್ 5 ನಿರ್ಬಂಧಗಳಿಂದಾಗಿ ಎಲ್ಲಾ ಕಾನ್ಸುಲರ್ ಸೇವೆಗಳನ್ನು ಫೆ. 20 ರವರೆಗೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ಭಾರತೀಯ ರಾಯಭಾರ ಕಚೇರಿ ಟ್ವೀಟ್ ಮಾಡಿದೆ.
ಈಗಾಗಲೇ ಬ್ರಿಟನ್ ನಲ್ಲಿ ಪ್ರಧಾನಿ ಬೋರಿಸ್ ಜಾನ್ಸನ್ ದೇಶಾದ್ಯಂತ ಮುಂದಿನ ಆರು ವಾರಗಳವರೆಗೆ ಕಠಿಣ ಲಾಕ್ ಡೌನ್ ಘೋಷಣೆ ಮಾಡಿದ್ದು, ಬುಧವಾರದಿಂದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳು ಬಂದ್ ಆಗಲಿವೆ ಎಂದು ಅವರು ತಿಳಿಸಿದ್ದಾರೆ.