Saturday, January 16, 2021

Latest Posts

ಹೊಟ್ಟೆಕಿಚ್ಚೆಂಬ ನಿಂಬೆಹುಳಿ ಹಾಲಿನಂಥ ನಿಮ್ಮ ಸಂಬಂಧ ಹಾಳುಮಾಡದಿರಲಿ.. Jealousy ದೂರಮಾಡಲು ಇಲ್ಲಿದೆ ಮಾರ್ಗ..

ಒಂದು ಸುಂದರ ಸಂಬಂಧ. ಎಲ್ಲವೂ ಚೆಂದ. ಇದ್ದರೆ ಹೀಗೆ ಇರಬೇಕು ಎನಿಸುತ್ತದೆ. ಇದು ಸ್ನೇಹ ಸಂಬಂಧ ಆಗಿರಬಹುದು ಅಥವಾ ಪ್ರೇಮವೂ ಇರಬಹುದು. ಇಂಥ ಸುಂದರ ಸಂಬಂಧಗಳಲ್ಲಿ ಹೊಟ್ಟೆಕಿಚ್ಚು ಎನ್ನುವ ಒಂದು ಅಂಶ ಬಂದರೆ ಸಾಕು ಎಲ್ಲವೂ ಹಾಳಾಗಿ ಹೋಗುತ್ತದೆ. ಇಬ್ಬರು ಪ್ರೇಮಿಗಳಿದ್ದು, ಒಬ್ಬರಿಗೆ ಆತ್ಮೀಯ ಸ್ನೇಹಿತನಿದ್ದರೆ ಇನ್ನೊಬ್ಬರಿಗೆ ಜೆಲಸಿ ಆರಂಭವಾಗುತ್ತದೆ. ಇದನ್ನು ಬಾಯಿಬಿಟ್ಟು ಹೇಳಲಾರದೆ ಸಂಬಂಧದಲ್ಲಿ ಬಿರುಕು ಬಿಡುತ್ತದೆ. ಇನ್ನು ಸ್ನೇಹದಲ್ಲೂ ಅಷ್ಟೇ, ಇಬ್ಬರು ಸ್ನೇಹಿತರ ಮಧ್ಯೆ ಇನ್ನೊಬ್ಬರು ಬಂದರೆ, ಅಥವಾ ಬೇರೆಯವರ ಜೊತೆ ನಮ್ಮ ಸ್ನೇಹಿತರು ಕ್ಲೋಸ್ ಆಗಿದ್ದರೆ ಹೊಟ್ಟೆಕಿಚ್ಚಾಗುತ್ತದೆ. ಆದರೆ ಇದು ಆರೋಗ್ಯಕರ ಭಾವನೆ ಅಲ್ಲ. ಇದನ್ನು ಕಂಟ್ರೋಲ್‌ನಲ್ಲಿ ಇಟ್ಟುಕೊಳ್ಳುವುದು ಮುಖ್ಯ. ಅದು ಹೇಗೆ ಅಂತಿರಾ ಸಂಪೂರ್ಣ ಓದಿ..

  • ಹೊಟ್ಟೆಕಿಚ್ಚು ಇದೆ ಎಂದು ಒಪ್ಪಿಕೊಳ್ಳಿ: ನಿಮ್ಮಿಬ್ಬರ ಸ್ನೇಹದಿಂದ ನನಗೆ ಹೊಟ್ಟೆಕಿಚ್ಚಿಲ್ಲ. ಎಲ್ಲವೂ ಚೆನ್ನಾಗೇ ಇದೆ ಎಂದು ಬಾಯಿಂದ ಹೇಳಿ ಮನಸಿನಲ್ಲಿ ಹೊಟ್ಟೆಉರಿ ಪಟ್ಟುಕೊಂಡರೆ ಒಳ್ಳೆಯ ವ್ಯಕ್ತಿಯಾಗಿ ನಿಮ್ಮ ಮೇಲೆ ಪರಿಣಾಮ ಬೀರುತ್ತದೆ. ನಿಮಗೆ ಹೊಟ್ಟೆಕಿಚ್ಚಿದೆ ಎಂದು ಒಪ್ಪಿಕೊಳ್ಳಿ. ಸಮಸ್ಯೆ ಇದೆ ಎಂದು ಒಪ್ಪಿಕೊಂಡರೆ ಪರಿಹಾರ ಹುಡುಕುವುದು ಸುಲಭ.
  • ನಿಮ್ಮ ಹೊಟ್ಟೆಕಿಚ್ಚು ನಿಮಗೇನು ಹೇಳುತ್ತಿದೆ?: ಈಗ ನಿಮ್ಮ ಜೆಲಸಿ ನೀವು ಒಪ್ಪಿಕೊಂಡಿದ್ದೀರಿ. ಆದರೆ ಅದು ನಿಮಗೇನು ಹೇಳುತ್ತಿದೆ. ನಿಮಗೆ ಅವರ ಮೇಲೆ ನಂಬಿಕೆ ಇಲ್ಲವಾ? ಅಥವಾ ಅವರ ಯಾವುದಾದರೂ ಬಿಹೇವಿಯರ್‌ನಿಂದ ನಿಮಗೆ ಬೇಜಾರಾಗಿದೆಯೇ? ಅವರು ನಿಮ್ಮಿಂದ ದೂರ ಹೋಗುತ್ತಾರೆ ಎಂಬ ಇನ್ಸೆಕ್ಯುರಿಟಿ ಇದೆಯೋ ಯೋಚಿಸಿ..
  • ನಿಮ್ಮ ಇನ್ಸೆಕ್ಯುರಿಟಿ ಲಿಸ್ಟ್ ಮಾಡಿ: ನೀವೇಕೆ ಇಷ್ಟು ಇನ್ಸೆಕ್ಯೂರ್ ಆಗಿದ್ದೀರಿ? ನಿಮ್ಮ ಬಗ್ಗೆ ನಿಮಗೆ ನಂಬಿಕೆ ಇಲ್ಲವಾ? ಅಥವಾ ನೀವು ನಿಮ್ಮನ್ನು ಇನ್ನೊಬ್ಬರಿಗೆ ಕಂಪೇರ್ ಮಾಡಿಕೊಳ್ಳುತ್ತಿದ್ದೀರಾ? ಅಥವಾ ನೀವು ಪರ್ಫೆಕ್ಟ್ ಅಲ್ಲ ಎಂಬ ಭಾವನೆ ನಿಮಗಿದೆಯಾ? ಯೋಚಿಸಿ
  • ಸೆಲ್ಫ್ ಕಾನ್ಫಿಡೆನ್ಸ್ ಹೆಚ್ಚಿಸಿ: ಇದೇ ನಿಮ್ಮೆಲ್ಲ ಜೆಲಸಿಗೂ ಉತ್ತರ. ನೀವು ಹೇಗಿದ್ದೀರೋ ಹಾಗೇ ಚೆನ್ನಾಗಿದ್ದೀರ. ಪರ್ಫೆಕ್ಟ್ ಎನ್ನುವ ಕಾನ್ಸೆಪ್ಟ್ ಇಲ್ಲ. ಯಾರೂ ಹಾಗಿರಲು ಸಾಧ್ಯವೇ ಇಲ್ಲ. ನಿಮ್ಮನ್ನು ನೀವು ಒಪ್ಪಿಕೊಳ್ಳಿ. ನಿಮ್ಮ ಕಾನ್ಫಿಡೆನ್ಸ್ ಹೆಚ್ಚಿಸಿ.
  • ಇನ್ಸೆಕ್ಯುರಿಟಿ ಏಕೆ ಬಂತು?: ನಿಮ್ಮ ಸಮಸ್ಯೆ ಮೂಲ ಏನು? ನಿಮಗೆ ಯಾರಿಂದ ಈ ಭಾವನೆ ಬಂದಿದೆ. ಇದನ್ನು ನೋಡಿ. ಅವರ ಜೊತೆ ಒಡನಾಟ ಇಟ್ಟುಕೊಳ್ಳಿ. ನೀವು ಅವರ ಬಗ್ಗೆ ಅಂದುಕೊಂಡಿದ್ದು ನಿಜವಾ ಯೋಚಿಸಿ. ಇಲ್ಲವಾದರೆ ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ.
    ನಿಮ್ಮ ಪಾರ್ಟ್ನರ್ ಬಳಿ ಮಾತನಾಡಿ: ನಿಮಗೆ ಏನು ಅನಿಸುತ್ತಿದೆ. ಯಾಕೆ ಹೀಗೆ ಅನಿಸುತ್ತಿದೆ. ಅವರ ಜೊತೆ ಮುಕ್ತವಾಗಿ ಮಾತನಾಡಿ. ಅವರ ಬಳಿ ಸಲಹೆಗಳನ್ನು ಪಡೆಯಿರಿ. ಇರುವುದನ್ನು ಇದೆ ಎಂದು ಒಪ್ಪಿಕೊಳ್ಳಿ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss

error: Content is protected !!