ಹೊಸದಿಗಂತ ವರದಿ ವಿಜಯಪುರ:
ನಗರದ ಶಿಕಾರಖಾನೆ ಬಳಿಯ ಹನುಮಾನ ದೇವಾಲಯ ಹತ್ತಿರ ಈಚೆಗೆ ಕ್ಷುಲಕ ಕಾರಣಕ್ಕೆ ಯುವಕರ ಗುಂಪುಗಳೆರಡರ ಮಧ್ಯೆ ನಡೆದ ಹೊಡೆದಾಟ ಘಟನೆಯ ಹೊಡಿ ಮಗ, ಹೊಡಿಮಗ ವಿಡಿಯೋ ಕ್ಲಿಪಿಂಗ್ ಜಿಲ್ಲೆಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಜಿಲ್ಲೆಯ ಭೀಮಾತೀರದ ಗುಂಡಿನ ದಾಳಿ ಘಟನೆ ಬಳಿಕ, ನಗರದಲ್ಲಿ ಇಂತಹದೊಂದು ಘಟನೆ ನಡೆದಿದ್ದು, ಎರಡು ಗುಂಪುಗಳ 20-25 ಜನ ಯುವಕರು ಪರಸ್ಪರ ಹೊಡಿದಾಡಿಕೊಂಡಿದ್ದು, ಸಣ್ಣ ಪುಟ್ಟ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಯುವಕರು ಕ್ಷುಲಕ ಕಾರಣಕ್ಕೆ ಮಾತಿಗೆ ಮಾತು ಬೆಳೆಸಿಕೊಂಡು ಹೊಡೆದಾಡಿಕೊಂಡ ವಿಡಿಯೋಕ್ಕೆ ಹೊಡಿ ಮಗ, ಹೊಡಿ ಮಗ ಎನ್ನುವ ಹಾಡಿನ ರಿಮ್ಯಾಕ್ಷ ಮಾಡಲಾಗಿದ್ದು, ಇದು ಎಲ್ಲಡೆ ಹರಿದಾಡುತ್ತಿದೆ.
ಈ ಘಟನೆ ಕುರಿತು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸುವಂತೆ ತಿಳಿಸಲಾಗಿದ್ದು, ಇನ್ನು ದೂರು ನೀಡಲು ಮುಂದೆ ಬರುತ್ತಿಲ್ಲ ಎಂದು ಎಪಿಎಂಸಿ ಠಾಣಾ ಪಿಎಸ್ ಐ ಸೋಮಶೇಖರ ಗೆಜ್ಜಿ ತಿಳಿಸಿದ್ದಾರೆ.