Tuesday, June 28, 2022

Latest Posts

ಹೊತಿಟ್ಟ ಮಾಂಸವನ್ನೇ ಮಾರಿದರು!

ಚಿತ್ತೂರು: ಹೂತಿಟ್ಟ ಮಾಂಸವನ್ನೇ ಜನರಿಗೆ ಮಾರಾಟ ಮಾಡುತ್ತಿರುವ ಘಟನೆಯೊಂದು ವರದಿಯಾಗಿದೆ. ಕೋರೋನಾ ಸೋಂಕಿನ  ಹಿನ್ನೆಲೆಯಲ್ಲಿ ಆಂಧ್ರ ಸರ್ಕಾರ ಎಲ್ಲ ಕಡೆ ಮಾಂಸ ಮಾರಾಟವನ್ನ ನಿಷೇಧಿಸಿದ್ದರೂ ವೆಂಕಟಗಿರಿ ಮಂಡಲದ ಕೆಲ ಮಾಂಸದ ಮಾರಾಟಗಾರರು ಹೂತಿಟ್ಟು ವ್ಯಾಪಾರ ಮುಂದುವರಿಸಿರುವುದನ್ನು ಇಲ್ಲಿನ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಮಂಜುಗಡ್ಡೆ ಬಳಸಿ ನೆಲದೊಳಗೆ ಗುಣಿ ಮಾಡಿ, ಪ್ಲಾಸ್ಟಿಕ್ ಚೀಲದ ಮೆಲೆ ಮಂಜಿನಗಡ್ಡೆ ನೆರವಿನಿಂದ ಮಾರಾಟಗಾರರು ಮೀನು ಹಾಗೂ ಕುರಿ ಮಾಂಸ ಕೆಡದಂತೆ ಮುಚ್ಚಿಟ್ಟಿದ್ದರು. ಭಾನುವಾರವಾದ ನಿನ್ನೆ ಜನರು ಇದಕ್ಕೆ ಮುಗಿ ಬಿದ್ದು ಮಾಂಸ ಖರೀದಿಸಲು ಬಂದಾಗ ಮಾರಾಟಗಾರರು ಪೊಲೀಸರ ಕೈಗೆ ರೆಡ್‌ಹ್ಯಾಂಡ್ ಆಗಿ ಸಿಕ್ಕಿ ಬಿದ್ದರು.

ವೆಂಕಟಗಿರಿ ಪೊಲೀಸರು ಮಾಂಸದ ಮಾರಾಟಗಾರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿ ಅವರ ಬಳಿ ಇದ್ದ ಮಾಂಸ ಮತ್ತು ಮಾರಕಾಯುಧಗಳನ್ನು ವಶಪಡಿಸಿಕೊಂಡಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss