Monday, July 4, 2022

Latest Posts

ಹೊನಗೇರಾ ವ್ಯಕ್ತಿಯ ಶವ ಸಂಸ್ಕಾರದಲ್ಲಿ ನಿರ್ಲಕ್ಷ್ಯ: ನೋಟಿಸ್ ಜಾರಿ ವಿಚಾರಣಾಧಿಕಾರಿಯಾಗಿ ಡಿಎಚ್‌ಒ ನೇಮಿಸಲು ಜಿಲ್ಲಾಧಿಕಾರಿ ಆದೇಶ

ಯಾದಗಿರಿ : ಜಿಲ್ಲೆಯ ಹೊನಗೇರಾ ಗ್ರಾಮದ ವ್ಯಕ್ತಿಯ ಶವ ಸಂಸ್ಕಾರ ಮಾಡುವಾಗ ಕೋವಿಡ್-19 ಶಿಷ್ಟಾಚಾರ ಪ್ರಕಾರ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿರುವ ಅಧಿಕಾರಿಗಳ ಬಗ್ಗೆ ವಿಚಾರಣೆ ಕೈಗೊಂಡು, ಕೂಲಂಕುಶವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ವಿಚಾರಣಾಧಿಕಾರಿಯನ್ನಾಗಿ ನೇಮಿಸಿ ಜಿಲ್ಲಾಧಿಕಾರಿ ಎಂ.ಕೂರ್ಮಾ ರಾವ್ ಅವರು ಆದೇಶ ಹೊರಡಿಸಿದ್ದಾರೆ.
ಯಾದಗಿರಿ ಜಿಲ್ಲೆಯ ಹೊನಗೇರಾ ಗ್ರಾಮದ 48 ವರ್ಷದ ವ್ಯಕ್ತಿಯು ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಸಿರವಾರ ಗ್ರಾಮದಲ್ಲಿ ಕುಟುಂಬ ಸಮೇತ ವಾಸವಾಗಿರುತ್ತಾರೆ. ಸದರಿಯವರು ದಿನಾಂಕ:28-06-2020 ರಂದು ಮಗಳ ವಿವಾಹ ಇರುವುದರ ಪ್ರಯುಕ್ತ ವಾರದ ಹಿಂದೆ ತಮ್ಮ ಸ್ನೇಹಿತರಿಗೆ ಮತ್ತು ಸಂಬAಧಿಕರಿಗೆ ಮದುವೆಯ ಆಹ್ವಾನಕ್ಕಾಗಿ ಹೊನಗೇರಾ ಗ್ರಾಮಕ್ಕೆ ಭೇಟಿ ನೀಡಿರುತ್ತಾರೆ. ಸದರಿಯವರು ಹೈಪರ್ ಟೆನ್ಸನ್ ಮತ್ತು ಸಕ್ಕರೆ ಖಾಯಿಲೆ ಅನಿಯಮಿತ ಚಿಕಿತ್ಸೆ ಪಡೆಯುತ್ತಿದ್ದು, ದಿನಾಂಕ: 29-06-2020ರಂದು ಎದೆ ನೋವು ಕಾಣಿಸಿಕೊಂಡಾಗ ತನ್ನ ಸಹೋದರರು ರಾಯಚೂರಿನ ರಿಮ್ಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ನಿಧನರಾಗಿರುತ್ತಾರೆ ಎಂದು ಮೃತ ವ್ಯಕ್ತಿಯ ಸಹೋದರ ತಿಳಿಸಿರುತ್ತಾರೆ. ಕೋವಿಡ್-19 ಶಂಕೆಯಿoದ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ರಾಯಚೂರಿನ ಟ್ರೂನ್ಯಾಟ್ ಲ್ಯಾಬ್‌ನಲ್ಲಿ ಪರೀಕ್ಷಿಸಿದಾಗ ಸಂಶಯಾಸ್ಪದ ಪಾಸಿಟಿವ್ ಎಂದು ಕಂಡುಬAದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಅಧಿಕಾರಿಗಳಿಗೆ ನೋಟಿಸ್ ಜಾರಿ: ಮೃತ ವ್ಯಕ್ತಿಯ ಸಹೋದರರ ಕೋರಿಕೆಯ ಮೇರೆಗೆ ಹೊನಗೇರಾ ಗ್ರಾಮದ ಅವರ ಸ್ವಂತ ಜಮೀನಿನಲ್ಲಿ ಶವ ಸಂಸ್ಕಾರ ಮಾಡುವಾಗ ಕೋವಿಡ್-19 ಶಿಷ್ಟಾಚಾರ ಪ್ರಕಾರ ನಿರ್ವಹಿಸುವಲ್ಲಿ ನಿರ್ಲಕ್ಷ್ಯ ತೋರಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೊದಿಂದ ಕಂಡುಬoದಿದೆ. ಪ್ರಯುಕ್ತ ಸಂಬoಧಪಟ್ಟ ಅಧಿಕಾರಿಗಳಿಗೆ ಕಾರಣ ಕೇಳುವ ನೋಟಿಸ್ ಜಾರಿ ಮಾಡಲಾಗಿದೆ. ಪ್ರಕರಣದ ಕುರಿತು ನಿರ್ಲಕ್ಷ್ಯತನ ತೋರಿರುವ ಅಧಿಕಾರಿಗಳ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ವಿಚಾರಣೆ ಕೈಗೊಂಡು, ಕೈಗೊಂಡ ವಿಚಾರಣಾ ವರದಿಯನ್ನು ಸಲ್ಲಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳನ್ನು ವಿಚಾರಣಾಧಿಕಾರಿ ಎಂದು ನೇಮಿಸಿ ಆದೇಶಿಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss