ಹೊನ್ನಾವರ: ಹಲವಾರು ಚಿನ್ನಾಭರಣ ಕಳವು ಪ್ರಕರಣಗಳಲ್ಲಿ ಭಾಗಿಯಾಗಿದ್ದ ಇಬ್ಬರನ್ನು ಹೊನ್ನಾವರ ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಹೊನ್ನಾವರ ತಾಲೂಕಿನ ಚಂದಾವರದ ತೊಹಿದ ಮೊಹಲ್ಲಾದ ಅಡಿಕೆ ವ್ಯಾಪಾರಿಗಳಾದ ಸಜ್ಜಾದ ಅಹಮ್ಮದ್ ಕುತುಬುದ್ದೀನ್ ಗನಿ (28) ಹಾಗೂ ಮುಬಾಸೀರ ಕುತುಬುದ್ದೀನ್ ಗನಿ (30) ಬಂಧಿಸಲಾಗಿದೆ.
ಇವರಿಂದ ಹೊನ್ನಾವರ ಪೊಲೀಸ್ ಠಾಣೆಯ 11 ಪ್ರಕರಣಗಳು, ಕುಮಟಾ ಪೊಲೀಸ್ ಠಾಣೆಯ 3 ಪ್ರಕರಣಗಳಿಗೆ ಸಂಬಂಧಿಸಿಂತೆ 20 ಲಕ್ಷ ರೂ.ಮೌಲ್ಯದ ಚಿನ್ನಾಭರಣಗಳು, ಕೃತ್ಯಕ್ಕೆ ಬಳಸುತ್ತಿದ್ದ 2.50 ಲಕ್ಷ ರೂ. ಮೌಲ್ಯದ ಮಾರುತಿ ರಿಟ್ಜ್ ಕಾರು, 25 ಸಾವಿರ ರೂ. ಮೌಲ್ಯದ ಪಲ್ಸರ್ ಬೈಕನ್ನು ವಶಪಡಿಸಿಕೊಂಡಿದ್ದಾರೆ.
ಭಟ್ಕಳ ಎಎಸ್ಪಿ ನಿಖಿಲ ಬುಳ್ಳಾವರ ಮಾರ್ಗದರ್ಶನಲ್ಲಿ ಹೊನ್ನಾವರ ಠಾಣೆಯ ಸಿಪಿಐ ವಸಂತ ಆಚಾರ್ಯ ನೇತೃತ್ವದಲ್ಲಿ ಪಿಎಸ್ಐ ಶಶಿಕುಮಾರ, ಪಿಎಸ್ಐ ಸಾವಿತ್ರಿ ನಾಯಕ, ಪಿಎಸ್ಐ ಅಶೋಕಕುಮಾರ, ಸಿಬ್ಬಂದಿಗಳಾದ ಕೃಷ್ಣ ಡಿ. ಗೌಡ, ರಮೇಶ ಲಮಾಣಿ, ಮಹಾವೀರ ಡಿ.ಎಸ್., ಉದಯ ಮುಗದೂರ, ರಯೀಸ್ ಭಾಗವಾನ್, ಅಶೋಕ ನಾಯ್ಕ, ತಿಮ್ಮಪ್ಪ ವೈದ್ಯ, ಶಿವಾನಂದ ಚಿತ್ರಗಿ, ಚಂದ್ರಶೇಖರ ನಾಯ್ಕ, ಕಾರವಾರ ಠಾಣೆಯ ತಾಂತ್ರಿಕ ವಿಭಾಗದ ಸುಧೀರ ಮಡಿವಾಳ, ಅಣ್ಣಪ್ಪ ಬಡಿಗೇರ, ರಮೇಶ ನಾಯ್ಕ ಪತ್ತೆ ಕಾರ್ಯದಲ್ಲಿ ಭಾಗವಹಿಸಿದ್ದರು.