Tuesday, August 16, 2022

Latest Posts

ಹೊರ ಬಿದ್ದಿತು ಬಾಲಿವುಡ್‌ ನಟಿ ಕಂಗನಾ ರಣಾವತ್ ಅವರ ಗೋಮಾಂಸ ವಿವಾದದ ತೀರ್ಪು!

ಮುಂಬೈ: ಬಾಲಿವುಡ್‌ನ ನಟಿ ಕಂಗನಾ ರಣಾವತ್ ಅವರು ಸುಶಾಂತ್ ಸಿಂಗ್ ರಜಪೂತ್ ನಿಧನದ ನಂತರ ಪ್ರತಿನಿತ್ಯ ಒಂದಲ್ಲ ಒಂದು ವಿಚಾರಗಳಿಗೆ ಸುದ್ದಿಯಾಗುತ್ತಿದ್ದಾರೆ. ಈಗ ಅವರು ಗೋಮಾಂಸದ ವಿಚಾರವಾಗಿ ಸುದ್ದಿಯಾಗಿದ್ದು, ಆದರೆ ಈ ಬಾರಿ ಅವರಿಗೆ ಜಯ ಸಿಕ್ಕಿದೆ.
ಗೋಮಾಂಸದ ಕುರಿತು ಕಂಗನಾ ಟ್ವೀಟ್
ಕಳೆದ 2019 ರ ಮೇ ತಿಂಗಳಲ್ಲಿ ಟ್ವೀಟ್ ಮಾಡಿದ್ದ ಕಂಗನಾ ರಣಾವತ್ ಟೀಂ, ‘ಗೋಮಾಂಸ ತಿನ್ನುವುದು ತಪ್ಪೇನಲ್ಲ, ಇದು ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. 8 ವರ್ಷಗಳ ಹಿಂದೆಯೇ ಕಂಗನಾ ರಣಾವತ್ ಅವರು ಯೋಗಿಯಾಗುವ ಸಲುವಾಗಿ ಮಾಂಸಾಹಾರ ತ್ಯಜಿಸಿದ್ದಾರೆ. ಇವರ ಸಹೋದರ ಮಾಂಸ ತಿನ್ನುತ್ತಾನೆ’ ಎಂದು ಬರೆದಿದ್ದರು.
ಕೋರ್ಟ್‌ನಲ್ಲಿ ಅರ್ಜಿ
ಕಂಗನಾ ಟ್ವೀಟ್ ಗೆ ಭಾರೀ ವಿರೋಧ ವ್ಯಕ್ತವಾಗಿತ್ತು , ನವನೀತ್ ಗೋಪಿ ಅವರು , ಕಂಗನಾ ಗೋಮಾಂಸ ತಿನ್ನಲು ಪ್ರಚೋದನೆ ಮಾಡುವಂತಹ ಟ್ವೀಟ್ ಮಾಡುತ್ತಾರೆ ಎಂಬ ಆರೋಪ ಕೇಳಿಬಂದಿತ್ತು. ಇದರಿಂದ ಹಿಂದು ಧರ್ಮದವರ ನಂಬಿಕೆಗೆ ಧಕ್ಕೆಯಾಗುತ್ತದೆ. ಕಂಗನಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಲುಧಿಯಾನಾ ಪೊಲೀಸ್ ಸ್ಟೇಶನ್‌ನಲ್ಲಿ ದೂರು ದಾಖಲಿಸಿದ್ದರು . ಆದರೆ , ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ . ಬಳಿಕ ನವನೀತ್ ಪಂಜಾಬ್, ಹರಿಯಾಣ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ರ ಸೆಕ್ಷನ್ 66 & 67, ಪಂಜಾಬ್ ಹಸುವಿನ ವಧೆ ನಿಷೇಧ ಕಾಯ್ದೆ 1995, ಸೆಕ್ಷನ್ 295ರ ಭಾರತೀಯ ದಂಡ ಸಂಹಿತೆ, 1860ರ ಅಡಿಯಲ್ಲಿ ನಟಿಯ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಅರ್ಜಿದಾರರು ಮನವಿ ಮಾಡಿದ್ದರು.
ಅರ್ಜಿ ವಜಾಗೊಳಿಸಿದ ಕೋರ್ಟ್
ನವನೀತ್ ಸಲ್ಲಿಸಿದ್ದ ಅರ್ಜಿ ತೀರ್ಪು ಇಂದು ಹೊರಬಿದ್ದಿದೆ. ಕೋರ್ಟ್ , ಕಂಗನಾ ರಣಾವತ್ ಅವರು, ಕಂಗನಾ ಅವರೇ ಈ ಟ್ವೀಟ್ ಮಾಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆ ಇಲ್ಲ. ಅರ್ಜಿಯಲ್ಲಿಯೂ ಕೂಡ ಅಸ್ಪಷ್ಟತೆ ಇದೆ. ಅದರಲ್ಲಿ ಕಂಗನಾ ಸಸ್ಯಾಹಾರಿ ಎಂದು ಬರೆಯಲಾಗಿದೆ. ಆದರೆ ಕಂಗನಾ ಬರೆದಿದ್ದಾರೆ ಎಂಬ ಬಗ್ಗೆ ಕೂಡ ಸಾಕ್ಷಿ ಇಲ್ಲ. ಭಾರತ ಹಾಗೂ ವಿದೇಶಗಳ ನಡುವಿನ ಆಹಾರದಲ್ಲಿನ ವ್ಯತ್ಯಾಸದ ಬಗ್ಗೆ ಇಲ್ಲಿ ಬರೆಯಲಾಗಿದೆ. ಆದ್ದರಿಂದ ಅರ್ಜಿಯನ್ನು ಮಾನ್ಯ ಮಾಡಲಾಗುವುದಿಲ್ಲ ಎಂದು ಹೇಳಿಕೆ ನೀಡಿದ್ದು, ಅರ್ಜಿ ವಜಾಗೊಳಿಸಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss