Friday, July 1, 2022

Latest Posts

ಹೊಲದಲ್ಲಿನ ನೀರು ಎತ್ತುವ ಮೋಟರ್ ಕಳ್ಳತನ ಪ್ರಕರಣ: ಆರೋಪಿಗಳ ಬಂಧನ

ಹೊಸ ದಿಗಂತ ವರದಿ, ಯಾದಗಿರಿ:

ಸುರಪುರ ತಾಲೂಕಿನ ಕೆಂಭಾವಿ ಪುರಸಭೆ ವ್ಯಾಪ್ತಿಯ ಸಾಯಿನಗರ ಕ್ಯಾಂಪ್ ಬಡಾವಣೆಯ ಸೀಮಾಂತರ ಪ್ರದೇಶದ
ಹೊಲದಲ್ಲಿನ ನೀರು ಎತ್ತುವ ಮೋಟರ್ ಕಳ್ಳತನ ಪ್ರಕರಣಕ್ಕೆ ಸಂಬoಧಿಸಿದoತೆ ಪೋಲೀಸರು 24 ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿ
13 ಸಾವಿರ ಮೌಲ್ಯದ 2ಎಚ್‌ಪಿ ಮೋಟರ್‌ನ್ನು ವಶಪಡಿಸಿಕೊಂಡಿದ್ದಾರೆ.
ಮುದನೂರ (ಕೆ) ಗ್ರಾಮದ ಮಲಕಪ್ಪ ಹೆಳವರ ಬಂಧಿತ ಆರೋಪಿ. ಕಳ್ಳತನ ಪ್ರಕರಣ ದಾಖಲಿಸಿಕೊಂಡ ಕೆಂಭಾವಿ ಠಾಣೆಯ
ಪೋಲಿಸರು ಸಿಪಿಐ ದೌಲತ್.ಎನ್.ಕೆ ನೇತೃತ್ವದಲ್ಲಿ ಕೆಂಭಾವಿ ಕ್ರೈಂ ಪಿಎಸ್‌ಐ ಹಣಮಂತಪ್ಪ ಮುಂಡರಗಿ ಕಳ್ಳನ ಶೋಧ ನಡೆಸಿದ್ದರು. ಶುಕ್ರವಾರ ಸಂಶಯಾಸ್ಪದ ರೀತಿಯಲ್ಲಿ ಕಾಣುತ್ತಿದ್ದ ಆರೋಪಿ ಮಲಕಪ್ಪನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕಳ್ಳತನ ಪ್ರಕರಣ ಬಯಲಾಗಿದೆ. ಪೊಲೀಸರು ಆರೋಪಿಯಿಂದ 13 ಸಾವಿರ ಮೌಲ್ಯದ 2ಎಚ್‌ಪಿ ನೀರು ಎತ್ತುವ ಮೋಟರ್ ವಶಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss