Thursday, August 11, 2022

Latest Posts

ಹೊಸದಿಲ್ಲಿ| ದೇಶದಲ್ಲಿ ಕೊರೋನಾ ಸೋಂಕು ದ್ವಿಗುಣಗೊಳ್ಳುವ ದಿನಗಳು 17.4ಕ್ಕೆ ಸುಧಾರಣೆ

ಹೊಸದಿಲ್ಲಿ :ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳು ಹೆಚ್ಚುತ್ತಿರುವುದು ನಿಜವಾಗಿದ್ದರೂ, ಒಟ್ಟಾರೆಯಾಗಿ ದೇಶದಲ್ಲಿ ಕೊರೋನಾ ಸೋಂಕು ಪ್ರಕರಣಗಳು ದ್ವಿಗುಣಗೊಳ್ಳುವ ದಿನಗಳು ಇದೀಗ ೧೭.೪ಕ್ಕೆ ಸುಧಾರಣೆಗೊಂಡಿರುವ ಅಂಶವೂ ಗಮನ ಸೆಳೆದಿದೆ.
ಎರಡು ವಾರಗಳ ಹಿಂದೆ ಸೋಂಕು ಪ್ರಕರಣಗಳು ದ್ವಿಗುಣಗೊಳ್ಳುವ ದಿನಗಳು ೧೫.೪ಆಗಿತ್ತು. ಅದೀಗ ೧೭.೪ಕ್ಕೆ ಸುಧಾರಣೆಗೊಂಡಿದೆ. ಮಾ.೨೫ಕ್ಕೆ ಲಾಕ್‌ಡೌನ್ ಹೇರುವ ಸಂದರ್ಭದಲ್ಲಿ ದ್ವಿಗುಣಗೊಳ್ಳುವ ಅವ ೩.೪ರಲ್ಲಿತ್ತು. ಆದಾಗ್ಯೂ ಶುಕ್ರವಾರ ಹೊಸ ಸೋಂಕು ಪ್ರಕರಣಗಳ ಸಂಖ್ಯೆ ೧೦ಸಾವಿರದ (೧೦,೯೫೬) ಗಡಿ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ಶುಕ್ರವಾರ ಕೇಂದ್ರ ಸಂಪುಟ ಕಾರ್ಯದರ್ಶಿಯವರು ಎಲ್ಲ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳು, ಆರೋಗ್ಯ ಮತ್ತು ನಗರಾಭಿವೃದ್ಧಿ ಕಾರ್ಯದರ್ಶಿಗಳ ಜೊತೆ ವೀಡಿಯೊ ಲಿಂಕ್ ಮೂಲಕ ಸಭೆ ನಡೆಸಿದ್ದು, ಕೋವಿಡ್-೧೯ಪ್ರಕರಣಗಳು ಅತಿಹೆಚ್ಚಿನ ಸಂಖ್ಯೆಯಲ್ಲಿ ಪತ್ತೆಯಾಗುತ್ತಿರುವ ಪ್ರದೇಶಗಳ ಬಗ್ಗೆ ವಿಶೇಷ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.ಈ ಪ್ರದೇಶಗಳಲ್ಲಿ ಕಠಿಣ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಮೂಲಕ ಸಾಂಕ್ರಾಮಿಕವನ್ನು ತಡೆಗಟ್ಟಬೇಕೆಂದು ತಿಳಿಸಲಾಗಿದೆ.
ದೇಶದಲ್ಲಿ ಒಟ್ಟು ಪ್ರಕರಣಗಳೀಗ ೨,೯೭,೫೩೫ಕ್ಕೇರಿದ್ದು,ಶುಕ್ರವಾರ ಒಂದೇ ದಿನ ೩೯೬ಮಂದಿ ಬಲಿಯಾಗಿ ಸಾವಿನ ಸಂಖ್ಯೆ೮,೪೯೮ಕ್ಕೇರಿದೆ.ಈಗ ನಿಯಂತ್ರಣ, ಪರೀಕ್ಷೆ, ಪತ್ತೆ, ಆರೋಗ್ಯ ಮೂಲಸೌಕರ್ಯಗಳನ್ನು ಮೇಲ್ದರ್ಜೆಗೇರಿಸುವುದು, ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಮತ್ತು ನಿಯಂತ್ರಣ ಕ್ರಮಗಳಲ್ಲಿ ಸಮುದಾಯವನ್ನು ತೊಡಗಿಸಿಕೊಳ್ಳುವುದೇ ಮುಂತಾದ ಕ್ರಮಗಳಿಗೆ ಒತ್ತು ನೀಡುವಂತೆಯೂ ಕೇಂದ್ರ ಸರಕಾರ ರಾಜ್ಯಗಳಿಗೆ ತಿಳಿಸಿದೆ.ಕಂಟೈನ್‌ಮೆಂಟ್ ಝೋನ್‌ನಲ್ಲಿ ಮನೆ ಮನೆ ವಿಚಕ್ಷಣಾ ಕ್ರಮದ ಮೂಲಕ ಆರಂಭಿಕಹಂತದಲ್ಲೇ ಸೋಂಕು ಪತ್ತೆಯನ್ನು ಗುರುತಿಸುವುದಕ್ಕೆ ವಿಶೇಷ ಗಮನ ಹರಿಸಬೇಕು.ಇದಕ್ಕಾಗಿ ರಾಜ್ಯ ಸರಕಾರಗಳು ಮುಂದಿನ ದಿನಗಳಲ್ಲಿ ಬರಬಹುದಾದ ಪ್ರಕರಣಗಳನ್ನು ಮುಂಚಿತವಾಗಿ ಅಂದಾಜಿಸಿ ಅದಕ್ಕೆ ತಕ್ಕಂತೆ ಆಸ್ಪತ್ರೆಗಳ ಮೂಲಸೌಕರ್ಯವನ್ನು ತ್ವರಿತವಾಗಿ ಮೇಲ್ದರ್ಜೆಗೇರಿಸಬೇಕು.ಇದಕ್ಕೆ ಸೂಕ್ತ ಸಾಧನಾ ಸಲಕರಣೆಗಳು, ಚಿಕಿತ್ಸಾ ಸೌಲಭ್ಯಗಳು ಮತ್ತು ತರಬೇತಿ ಹೊಂದಿದ ಮಾನವ ಸಂಪನ್ಮೂಲವನ್ನು ಸಿದ್ಧವಾಗಿಟ್ಟುಕೊಳ್ಳಬೇಕೆಂದು ಅದು ವಿವರಿಸಿದೆ.
ಸಾಮಾಜಿಕ ಅಂತರ ಜೀವನಶೈಲಿಯಾಗಲಿ
ಮುಂದಿನ ದಿನಗಳಲ್ಲಿ ಸಮಾಜ ಸಾಮಾಜಿಕ ಅಂತರ ಕಾಯ್ದತುಕೊಳ್ಳುವುದು, ಮಾಸ್ಕ್ ಧರಿಸುವಿಕೆಯನ್ನು ಜೀವನಶೈಲಿಯನ್ನಾಗಿಸುವಂತೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕು ಎಂದು ಕೇಂದ್ರ ಸರಕಾರ ರಾಜ್ಯ ಸರಕಾರಗಳನ್ನು ವಿನಂತಿಸಿದೆ.ದೇಶದಲ್ಲಿ ದ್ವಿಗುಣಗೊಳ್ಳುವ ಅವ ಸುಧಾರಣೆಯಾಗಿರುವಂತೆಯೇ, ಗುಣಮುಖರಾಗುವವರ ಪ್ರಮಾಣವೂ ಶೇ.೪೯.೪೭ಕ್ಕೇರಿದೆ.ಈಗ ದೇಶದಲ್ಲಿ ಕೊರೋನಾ ಚಿಕಿತ್ಸೆ ಪಡೆಯುವವರ ಸಂಖ್ಯೆ ೧,೪೧,೮೪೨ ಆಗಿದ್ದರೆ, ಗುಣಮುಖರಾದವರ ಸಂಖ್ಯೆ ೧,೪೭,೧೯೪ ಎಂಬುದನ್ನು ಬೊಟ್ಟು ಮಾಡಲಾಗಿದೆ.ಕಳೆದ ೨೪ಗಂಟೆಗಳಲ್ಲಿ ೬,೧೬೬ ಮಂದಿ ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದಾರೆ.ಹಾಗೆಯೇ ದೇಶದಲ್ಲೀಗ ಪ್ರಯೋಗಾಲಯಗಳ ಸಂಖ್ಯೆ ೮೭೭ (೬೩೭ಸರಕಾರಿ ಮತ್ತು ೨೪೦ಖಾಸಗಿ)ಕ್ಕೇರಿದೆ.ಈವರೆಗೆ ದೇಶದಲ್ಲಿ ೫೩,೬೩,೪೪೫ಮಂದಿಯ ಪರೀಕ್ಷೆ ನಡೆಸಲಾಗಿದೆ.ಕಳೆದ ೨೪ಗಂಟೆಗಳಲ್ಲೇ ೧,೫೦,೩೦೫ಮಂದಿಯ ಪರೀಕ್ಷೆ ನಡೆಸಲಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss